ಪಾಕ್ ವಿರುದ್ಧ ಇತಿಹಾಸ ಸೃಷ್ಟಿಸಿದ ಹಾರ್ದಿಕ್-ಇಶಾನ್: ಈ ದಾಖಲೆ ಪಟ್ಟಿಯಲ್ಲಿ ಸದ್ಯ ಇವರೇ ನಂಬರ್ 1 ಜೋಡಿ
Hardik Pandya And Ishan Kishan: ದುಸ್ಥಿತಿಯಲ್ಲಿದ್ದ ಭಾರತಕ್ಕೆ ಈ ಜೋಡಿ ಆಧಾರ ಸ್ಥಂಭವಾಗಿ ನಿಂತುಕೊಂಡಿದ್ದು ಸುಳ್ಳಲ್ಲ. ಇವರಿಬ್ಬರೂ ಐದನೇ ವಿಕೆಟ್’ಗೆ 141 ಎಸೆತಗಳಲ್ಲಿ 138 ರನ್’ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಪ್ರಬಲ ಸ್ಕೋರ್ ನೀಡಿದರು.
Hardik Pandya And Ishan Kishan, India vs Pakistan Asia Cup 2023: ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಅವರ ಅದ್ಭುತ ಅರ್ಧಶತಕಗಳ ಆಧಾರದ ಮೇಲೆ, ಶಾಹೀನ್ ಶಾ ಆಫ್ರಿದಿ ನೀಡಿದ ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಭಾರತ ಒಟ್ಟಾರೆಯಾಗಿ 266 ರನ್ ಗಳಿಸಿತು. ಇಶಾನ್ 81 ಎಸೆತಗಳಲ್ಲಿ 82 ರನ್ ಗಳಿಸಿದರೆ, ಪಾಂಡ್ಯ 90 ಎಸೆತಗಳಲ್ಲಿ 87 ರನ್ ಕಲೆ ಹಾಕಿದ್ದರು.
ಇದನ್ನೂ ಓದಿ: ಹವಾಮಾನ ಬದಲಾವಣೆ ಯೋಜನೆಗೆ 'ಆದಿತ್ಯ-ಎಲ್ 1' ಮಾಡಲಿದೆ ಸಹಾಯ: ಹೇಗೆ ಗೊತ್ತಾ?
ದುಸ್ಥಿತಿಯಲ್ಲಿದ್ದ ಭಾರತಕ್ಕೆ ಈ ಜೋಡಿ ಆಧಾರ ಸ್ಥಂಭವಾಗಿ ನಿಂತುಕೊಂಡಿದ್ದು ಸುಳ್ಳಲ್ಲ. ಇವರಿಬ್ಬರೂ ಐದನೇ ವಿಕೆಟ್’ಗೆ 141 ಎಸೆತಗಳಲ್ಲಿ 138 ರನ್’ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಪ್ರಬಲ ಸ್ಕೋರ್ ನೀಡಿದರು. ಇದಕ್ಕೂ ಮೊದಲು ಪಾಕಿಸ್ತಾನದ ವೇಗದ ಬೌಲರ್’ಗಳಾದ ಶಾಹಿನ್ ಆಫ್ರಿದಿ ಮತ್ತು ಹ್ಯಾರಿಸ್ ರೌಫ್ 14.1 ಓವರ್’ಗಳಲ್ಲಿ 66 ರನ್’ಗಳಿಗೆ ಭಾರತದ ಅಗ್ರ ಕ್ರಮಾಂಕದ ನಾಲ್ಕು ವಿಕೆಟ್’ಗಳನ್ನು ಪಡೆದರು.
ಹಾರ್ದಿಕ್ ಪಾಂಡ್ಯ-ಇಶಾನ್ ಕಿಶನ್ ಜೋಡಿ ಇತಿಹಾಸ:
ಇಶಾನ್ ಮತ್ತು ಹಾರ್ದಿಕ್ ನಡುವೆ 5 ನೇ ವಿಕೆಟ್’ಗೆ 138 ರನ್’ಗಳ ಅದ್ಭುತ ಪಾಲುದಾರಿಕೆ ನಡೆಸಿದರು. ಇದು ಏಷ್ಯಾ ಕಪ್ ODI ನಲ್ಲಿ ಭಾರತದ 5 ನೇ ವಿಕೆಟ್’ಗೆ ಸುದೀರ್ಘ ಜೊತೆಯಾಟವಾಗಿದೆ. ಈ ಹಿಂದೆ ಏಷ್ಯಾಕಪ್’ನಲ್ಲಿ ರಾಹುಲ್ ದ್ರಾವಿಡ್ ಮತ್ತು ಯುವರಾಜ್ ಸಿಂಗ್ ನಡುವೆ 5ನೇ ವಿಕೆಟ್’ಗೆ ಸುದೀರ್ಘ ಜೊತೆಯಾಟದ ದಾಖಲೆ ಇತ್ತು. ಇನ್ನೊಂದೆಡೆ ಪಾಕಿಸ್ತಾನ ವಿರುದ್ಧದ ಏಕದಿನದಲ್ಲಿ 5 ನೇ ವಿಕೆಟ್’ಗೆ ಭಾರತದಿಂದ ಅತಿದೊಡ್ಡ ಜೊತೆಯಾಟವಾಗಿದೆ.
ಭಾರತ vs ಪಾಕ್ ಏಕದಿನದಲ್ಲಿ 5ನೇ ಅಥವಾ ಅದಕ್ಕಿಂತ ಕೆಳಗಿನ ವಿಕೆಟ್’ಗೆ ಅತ್ಯಧಿಕ ಜೊತೆಯಾಟ:
ಇಮ್ರಾನ್ ಖಾನ್ ಮತ್ತು ಜಾವೇದ್ ಮಿಯಾಂದಾದ್, ನಾಗ್ಪುರ, 1987 - 142 ರನ್
ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ, ಪಲ್ಲೆಕೆಲೆ, 2023 - 138 ರನ್
ರಾಹುಲ್ ದ್ರಾವಿಡ್ ಮತ್ತು ಮೊಹಮ್ಮದ್ ಕೈಫ್, ಕಾನ್ಪುರ, 2005 - 135 ರನ್
ರಾಹುಲ್ ದ್ರಾವಿಡ್ ಮತ್ತು ಮೊಹಮ್ಮದ್ ಕೈಫ್, ಲಾಹೋರ್, 2004 - 132 ರನ್*
ಎಂಎಸ್ ಧೋನಿ ಮತ್ತು ರವಿಚಂದ್ರನ್ ಅಶ್ವಿನ್, ಚೆನ್ನೈ, 2012 - 125 ರನ್*
4 ವಿಕೆಟ್ ಪಡೆದ ಶಾಹೀನ್ ಆಫ್ರಿದಿ:
ಶಾಹೀನ್ ಆಫ್ರಿದಿ 35 ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ರೌಫ್ 58 ರನ್ ನೀಡಿ ಮೂರು ವಿಕೆಟ್ ಕಬಳಿಸಿದ್ದರು. ಇನ್ನು ನಸೀಮ್ ಶಾ ಕೂಡ ಮೂರು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: Krishna Blessings: ಈ ರಾಶಿಯವರಿಗೆ ಅನಂತ ಸಂಪತ್ತು, ಸಮೃದ್ಧಿ ತರಲಿದೆ ಜನ್ಮಾಷ್ಟಮಿ: ಸದಾ ಇರಲಿದೆ ಕೃಷ್ಣನ ದಯೆ!
ಇಶಾನ್ ಮೊದಲ ಬಾರಿಗೆ ನಾಲ್ಕನೇ ಕ್ರಮಾಂಕದ ಕೆಳಗೆ ಬ್ಯಾಟ್ ಮಾಡಲು ಮೈದಾನಕ್ಕೆ ಆಗಮಿಸಿದ್ದರು. ಆದರೆ ಸ್ವಲ್ಪವೂ ವಿಚಲಿತರಾದಂತೆ ಕಾಣಲಿಲ್ಲ. ಕೇವಲ 54 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಶತಕದತ್ತ ಸಾಗುತ್ತಿರುವುದು ಕಂಡು ಬಂತು. ಆದರೆ ಹೈ ಪೂಲ್ ಶಾಟ್ ಆಡುವ ಯತ್ನದಲ್ಲಿ ರೌಫ್ ಸರ್ಕಲ್ ಒಳಗೆ ಬಾಬರ್’ಗೆ ಕ್ಯಾಚ್ ನೀಡಿದರು. ಇಶಾನ್ ಔಟಾದ ನಂತರ, ಪಾಂಡ್ಯ ಭಾರತದ ಇನ್ನಿಂಗ್ಸ್’ನ ಜವಾಬ್ದಾರಿಯನ್ನು ವಹಿಸಿಕೊಂಡರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ