`ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದ್ರೆ...`- ಪತ್ನಿ ನತಾಶಾಗೆ ವಿಚ್ಛೇದನ ನೀಡಿದ ಬಗ್ಗೆ ಹಾರ್ದಿಕ್ ಪಾಂಡ್ಯ ಅಧಿಕೃತ ಮಾಹಿತಿ
Hardik Pandya and Natasa Stankovic: ಕಳೆದ 6 ತಿಂಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿತ್ತು. ಆದರೆ ಇದೀಗ ಇಬ್ಬರೂ ಪರಸ್ಪರ ಸಂಬಂಧವನ್ನು ಕೊನೆಗೊಳಿಸಿರುವುದು ದೃಢಪಟ್ಟಿದೆ.
Hardik Pandya and Natasa Stankovic: ಟೀಂ ಇಂಡಿಯಾದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಹಾರ್ದಿಕ್ ಮತ್ತು ನತಾಶಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಈ ಮಾಹಿತಿಯನ್ನು ಅಧಿಕೃತಗೊಳಿಸಿದ್ದಾರೆ.
ಇದನ್ನೂ ಓದಿ: ಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ: ಊಹೆಗೂ ಸಿಗದ ಆಟಗಾರನಿಗೆ ನಾಯಕತ್ವ ಹಸ್ತಾಂತರ
ಕಳೆದ 6 ತಿಂಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿತ್ತು. ಆದರೆ ಇದೀಗ ಇಬ್ಬರೂ ಪರಸ್ಪರ ಸಂಬಂಧವನ್ನು ಕೊನೆಗೊಳಿಸಿರುವುದು ದೃಢಪಟ್ಟಿದೆ.
Instagram ಪೋಸ್ಟ್ʼನಲ್ಲಿ ಏನಿದೆ?
ಹಾರ್ದಿಕ್ ಮತ್ತು ನತಾಶಾ Instagram ನಲ್ಲಿ ಪೋಸ್ಟ್ ಶೇರ್ ಮಾಡಿ, ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. "4 ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ಬಳಿಕ ನತಾಶಾ ಮತ್ತು ನಾನು ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ. ಒಟ್ಟಾಗಿ ಬಾಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ, ನಮ್ಮ ಅತ್ಯುತ್ತಮವಾದದ್ದನ್ನು ನೀಡಿದ್ದೇವೆ. ಆದರೆ ದೂರವಾಗುವುದು ನಮಗೆ ಕಷ್ಟಕರವಾದ ನಿರ್ಧಾರವಾಗಿತ್ತು. ಏಕೆಂದರೆ ನಾವು ಪರಸ್ಪರ ಗೌರವ ಮತ್ತು ಒಡನಾಟವನ್ನು ಆನಂದಿಸಿದ್ದೇವೆ" ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಬಲವಂತವಾಗಿ ಕಿಸ್ ಮಾಡಿದ ಖ್ಯಾತ ನಿರ್ದೇಶಕ! ಸೆನ್ಸೇಷನಲ್ ವಿಡಿಯೋ ವೈರಲ್
ಅಗಸ್ತ್ಯ ಯಾರೊಡನೆ?
ಇನ್ನು ಮಗ ಅಗಸ್ತ್ಯನ ಕುರಿತು ಹಾರ್ದಿಕ್ ಪೋಸ್ಟ್ ಶೇರ್ ಮಾಡಿದ್ದು, 'ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿರುವ ಅಗಸ್ತ್ಯನನ್ನು ನಾವು ಪಡೆಯಲು ಪುಣ್ಯ ಮಾಡಿದ್ದೇವೆ. ನಾವು ಅವನ ಸಂತೋಷಕ್ಕಾಗಿ ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ನೀಡುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮಗೆ ಗೌಪ್ಯತೆಯನ್ನು ಒದಗಿಸಲು ನಿಮ್ಮ ಬೆಂಬಲ ಬೇಕೆಂದು ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ" ಎಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ