ಒಂದೇ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಭಾರತದ ಇಬ್ಬರು ದಿಗ್ಗಜರ ವಿಶ್ವದಾಖಲೆ ಮುರಿದ ಹಾರ್ದಿಕ್ ಪಾಂಡ್ಯ
Hardik Pandya Highest wicket taker in T20I vs Pakistan: 2 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ವಿರುದ್ಧ T20I ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಅವರ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ಮುರಿದಿದ್ದಾರೆ.
IND vs PAK T20 World Cup 2024, Hardik Pandya: T20 ವಿಶ್ವಕಪ್ 2024ರ 19 ನೇ ಲೀಗ್ ಪಂದ್ಯದಲ್ಲಿ, ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪಾಕಿಸ್ತಾನದ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ್ದಾರೆ. ಈ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿದ್ದು, ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.
2 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ವಿರುದ್ಧ T20I ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಅವರ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ಮುರಿದಿದ್ದಾರೆ.
ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 13 ರನ್ ಗಳಿಸಿದ್ದಾಗ ಫಖರ್ ಜಮಾನ್ ಅವರನ್ನು ಔಟ್ ಮಾಡಿದರೆ, ಶಾದಾಬ್ ಖಾನ್ 4 ರನ್ ಗಳಿಸಿದ್ದಾಗ ಔಟ್ ಮಾಡಿದ್ದಾರೆ. ಈ ಎರಡು ವಿಕೆಟ್’ಗಳ ನೆರವಿನಿಂದ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧ ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಇದೀಗ ಹಾರ್ದಿಕ್ ಪಾಂಡ್ಯ ಅವರ ಹೆಸರಿನಲ್ಲಿ ಒಟ್ಟು 13 ವಿಕೆಟ್’ಗಳಿದ್ದು, 11 ವಿಕೆಟ್ ಪಡೆದ ಭುವಿ ಅವರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಇರ್ಫಾನ್ ಪಠಾಣ್ ಮತ್ತು ಅರ್ಷದೀಪ್ ಸಿಂಗ್ ತಲಾ 6 ವಿಕೆಟ್’ಗಳೊಂದಿಗೆ ಜಂಟಿಯಾಗಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.
13 – ಹಾರ್ದಿಕ್ ಪಾಂಡ್ಯ
11 - ಭುವನೇಶ್ವರ್ ಕುಮಾರ್
6 – ಇರ್ಫಾನ್ ಪಠಾಣ್
6 - ಅರ್ಷದೀಪ್ ಸಿಂಗ್
ಭಾರತಕ್ಕೆ ರೋಚಕ ವಿಜಯ:
ರೋಚಕ ಪಂದ್ಯದಲ್ಲಿ ಭಾರತ 6 ರನ್’ಗಳಿಂದ ಜಯಗಳಿಸಿದೆ. ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್’ನಿಂದಾಗಿ, ಪಾಕಿಸ್ತಾನವು ಮೊದಲ ಇನಿಂಗ್ಸ್’ನಲ್ಲಿ ಭಾರತವನ್ನು 119 ರನ್’ಗಳಿಗೆ ಸೀಮಿತಗೊಳಿಸಿತು. ಎರಡನೇ ಇನಿಂಗ್ಸ್’ನಲ್ಲಿ ಟೀಂ ಇಂಡಿಯಾದ ಬೌಲಿಂಗ್ ಅಮೋಘವಾಗಿದ್ದು ಪಾಕಿಸ್ತಾನ ತಂಡ ಗೆಲುವಿಗೆ 120 ರನ್’ಗಳ ಗುರಿ ತಲುಪಲು ಸಾಧ್ಯವಾಗದೆ 20 ಓವರ್ ಗಳಲ್ಲಿ 7 ವಿಕೆಟ್’ಗೆ 113 ರನ್ ಗಳಿಸಿ 6 ರನ್’ಗಳಿಂದ ಸೋಲು ಕಂಡಿತು. ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್’ನಲ್ಲಿ ಇದು 8 ನೇ ಪಂದ್ಯವಾಗಿದ್ದು, ಇದರಲ್ಲಿ ಭಾರತ 7 ಮತ್ತು ಪಾಕಿಸ್ತಾನ ಒಂದು ಪಂದ್ಯವನ್ನು ಗೆದ್ದಿದೆ.
ಇದನ್ನೂ ಓದಿ:ಟೀಂ ಇಂಡಿಯಾ ನಾಯಕನಿಗೆ ಮರೆವಿನ ಕಾಯಿಲೆ!? ಮೈದಾನದಲ್ಲಿ ರೋಹಿತ್ ವರ್ತನೆ ಕಂಡು ಶಾಕ್ ಆದ ಬಾಬರ್: ವಿಡಿಯೋ ವೈರಲ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ