ಟೀಂ ಇಂಡಿಯಾ ನಾಯಕನಿಗೆ ಮರೆವಿನ ಕಾಯಿಲೆ!? ಮೈದಾನದಲ್ಲಿ ರೋಹಿತ್ ವರ್ತನೆ ಕಂಡು ಶಾಕ್ ಆದ ಬಾಬರ್: ವಿಡಿಯೋ ವೈರಲ್

IND vs PAK: ಮಳೆಯಿಂದಾಗಿ ನ್ಯೂಯಾರ್ಕ್‌’ನಲ್ಲಿ ಟಾಸ್ ಅರ್ಧ ಗಂಟೆ ತಡವಾಯಿತು. ಭಾರತೀಯ ಕಾಲಮಾನ ರಾತ್ರಿ 7.30ರ ಬದಲಿಗೆ ರಾತ್ರಿ 8 ಗಂಟೆಗೆ ಟಾಸ್ ನಡೆಯಿತು. ನ್ಯೂಯಾರ್ಕ್‌’ನ ಅಪಾಯಕಾರಿ ಪಿಚ್‌’ನಲ್ಲಿ ಟಾಸ್ ಗೆಲ್ಲಲು ಉಭಯ ತಂಡಗಳು ಬಯಸಿದ್ದವು.

Written by - Bhavishya Shetty | Last Updated : Jun 9, 2024, 10:27 PM IST
    • T20 ವಿಶ್ವಕಪ್ 2024 ರಲ್ಲಿ, ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ
    • ಮಳೆಯಿಂದಾಗಿ ನ್ಯೂಯಾರ್ಕ್‌’ನಲ್ಲಿ ಟಾಸ್ ಅರ್ಧ ಗಂಟೆ ತಡವಾಯಿತು
    • ಟಾಸ್ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ಟೀಂ ಇಂಡಿಯಾ ನಾಯಕನಿಗೆ ಮರೆವಿನ ಕಾಯಿಲೆ!? ಮೈದಾನದಲ್ಲಿ ರೋಹಿತ್ ವರ್ತನೆ ಕಂಡು ಶಾಕ್ ಆದ ಬಾಬರ್: ವಿಡಿಯೋ ವೈರಲ್ title=
Rohit Sharma Toss Viral Video

IND vs PAK: T20 ವಿಶ್ವಕಪ್ 2024 ರಲ್ಲಿ, ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ನ್ಯೂಯಾರ್ಕ್‌’ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಟಾಸ್ ಗೆದ್ದಿದ್ದು, ಬೌಲಿಂಗ್ ಮಾಡಲು ನಿರ್ಧರಿಸಿದರು. ‘ಎ’ಗುಂಪಿನಲ್ಲಿ ಟೀಂ ಇಂಡಿಯಾದ ಎರಡನೇ ಪಂದ್ಯ ಇದಾಗಿದೆ.

ಇದನ್ನೂ ಓದಿ: ಕಿಡ್ನಿಸ್ಟೋನ್’ಗೆ ಸಂಜೀವಿನಿ ಇದ್ದಂತೆ ಈ ಗಿಡದಲ್ಲಿ ಶೇಖರಣೆಯಾದ ನೀರು! ಸೇವಿಸಿದ ತಕ್ಷಣ ಕಲ್ಲು ಪುಡಿಯಾಗಿ ಮೂತ್ರಕೋಶದಿಂದ ಹೊರಬರುತ್ತೆ!

ಮಳೆಯಿಂದಾಗಿ ನ್ಯೂಯಾರ್ಕ್‌’ನಲ್ಲಿ ಟಾಸ್ ಅರ್ಧ ಗಂಟೆ ತಡವಾಯಿತು. ಭಾರತೀಯ ಕಾಲಮಾನ ರಾತ್ರಿ 7.30ರ ಬದಲಿಗೆ ರಾತ್ರಿ 8 ಗಂಟೆಗೆ ಟಾಸ್ ನಡೆಯಿತು. ನ್ಯೂಯಾರ್ಕ್‌’ನ ಅಪಾಯಕಾರಿ ಪಿಚ್‌’ನಲ್ಲಿ ಟಾಸ್ ಗೆಲ್ಲಲು ಉಭಯ ತಂಡಗಳು ಬಯಸಿದ್ದವು. ಭಾರತ ಈ ಮೈದಾನದಲ್ಲಿ ಪಂದ್ಯ ಆಡಿದ ಅನುಭವ ಹೊಂದಿದ್ದರೂ ಸಹ, ಟಾಸ್ ಅತ್ಯಂತ ಮಹತ್ವದ್ದಾಗಿತ್ತು.

ಇದನ್ನೂ ಓದಿ: ಸದ್ಯಕ್ಕೆ ಇಂಡಸ್ಟ್ರಿಯನ್ನು ನಡುಗಿಸುತ್ತಿರೋ ಈ ಇಬ್ಬರು ನಟರು, ಚೆನ್ನೈನಲ್ಲಿರುವಾಗ ಮಹೇಶ ಬಾಬು ಕ್ಲಾಸಮೇಟ್ಸ್ ಅಂತೆ !

ಅಂದಹಾಗೆ ಟಾಸ್ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರವಿಶಾಸ್ತ್ರಿ ರೋಹಿತ್‌’ಗೆ ನಾಣ್ಯವನ್ನು ಟಾಸ್ ಮಾಡಲು ಕೇಳಿದರು. ಆದರೆ ಈ ಸಂದರ್ಭದಲ್ಲಿ ರೋಹಿತ್ ಶರ್ಮಾ, ತನ್ನಲ್ಲಿ ಕಾಯಿನ್ ಇದೆ ಎಂಬುದನ್ನೇ ಮರೆತು, ಪಾಕ್ ನಾಯಕ ಬಾಬರ್‌ ಬಳಿ ನೋಡಿದ್ದಾರೆ. ಅದಾದ ಬಳಿಕ ತಕ್ಷಣ ಎಚ್ಚೆತ್ತುಕೊಂಡು ಜೇಬು ಹುಡುಕಾಡಿದ ರೋಹಿತ್, ನಗುತ್ತಾ ನಾಣ್ಯ ಹೊರತೆಗೆದಿದ್ದಾರೆ. ಇದನ್ನು ನೋಡಿದ ಪಾಕ್ ನಾಯಕ ಬಾಬರ್ ಅಜಮ್ ನಗಲು ಶುರು ಮಾಡಿದ್ದಾರೆ.

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News