BBL : ಬಿಗ್ ಬ್ಯಾಷ್ ಲೀಗ್ ಟೂರ್ನಿಮೆಂಟ್‌ ಆರಂಭವಾಗಿದ್ದು, ಕ್ರಿಕೆಟ್‌ ಅಭಿಮಾನಿಗಳಿಗೊಂತು ಹಬ್ಬದ ವಾತವರಣವಾಗಿದೆ. ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಸಿಡ್ನಿ ಥಂಡರ್ಸ್ ನಡುವೆ ನಡೆದ ಪಂದ್ಯದಲ್ಲಿ ಒಂದು ಅಚ್ಚರಿ ಘಟನೆ ನಡೆಯಿತು.  ಮೆಲ್ಬೋರ್ನ್ ಸ್ಟಾರ್ಸ್ ತಂಡದ ಆಟಗಾರನ ವಿಚಿತ್ರ ವರ್ತನೆಯಿಂದ ಹಂಪೈರ್‌ಗಳು ಶಾಕ್‌ ಆದರೆ, ಅಲ್ಲಿ ಸೇರಿದ್ದ ವೀಕ್ಷಕರು ನಕ್ಕು ನಕ್ಕು ಸುಸ್ತಾದರು.


COMMERCIAL BREAK
SCROLL TO CONTINUE READING

ಪಂದ್ಯದ ವೇಳೆ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡುವ ವೇಗದ ಬೌಲರ್ ಹ್ಯಾರಿಸ್ ರಾಫ್‌ರವರ ವರ್ತನೆ ಎಲ್ಲರ ಅಪಹಾಸ್ಯಕ್ಕೆ ಕಾರಣವಾಯಿತು.ಏಕೆಂದರ ಈ ಆಟಗಾರ ಬ್ಯಾಟಿಂಗ್ ಮಾಡಲು ಗ್ಲೌಸ್ ಮತ್ತು ಪ್ಯಾಡ್ ಗಳನ್ನು ಧರಿಸದೆ ಮೈದಾನಕ್ಕೆ ಬಂದಿದ್ದರು. ಹಂಪೈರ್‌ಗಳು ಪ್ಯಾಡ್‌ಗಳನ್ನು ಧರಿಸುವಂತೆ ಅವರಿಗೆ ಸೂಚನೆ ನೀಡಿದ ನಂತರ ಅವರು ಪ್ಯಾಡ್‌ ಧರಿಸಲು ಮುಂದಾದರು. 


ಇದನ್ನು ಓದಿ-ಪಾಕಿಸ್ತಾನ ಕ್ರಿಕೇಟ್‌ ಮಂಡಳಿ ವಿರುಧ್ದ ಗುಡುಗಿದ "ಡ್ಯಾನಿಶ್ ಕನೇರಿಯಾ" !


ಹ್ಯಾರಿಸ್ ರಾಫ್‌ ಅವರ  ಹೆಸರು 2022 ರ ಟಿ20 ಏಷ್ಯಾಕಪ್ ನಿಂದ ಭಾರಿ ಫೇಮಸ್‌ ಆಗಿತ್ತು. ಭಾರತದ ಮೇಲಿನ ಪಂದ್ಯದಲ್ಲಿ 18 ಒವರ್‌ ಮಾಡಿದ ಇವರಿಗೆ ವಿರಾಟ್‌ ಕೋಹ್ಲಿ ಅಧ್ಬುತ 2 ಸಿಕ್ಸರ್‌ ದಾಖಲಿಸಿದ್ದರು, ಅದರಲ್ಲಿ ಸ್ಟ್ರೇಟ್‌ ಲಾಂಗ್‌ ಭಾರಿಸಿದ ಸಿಕ್ಸರ್‌ ಸರ್ವಕಾಲಿನ ಶ್ರೇಷ್ಠ ಸಿಕ್ಸ್‌ ಎಂದು ಗುರುತಿಸಿಕೊಂಡಿದೆ. ಆ ಪಂದ್ಯದಿಂದ ಅವರು ಭಾರಿ ಸುದ್ದಿಯಾಗಿದ್ದರು, ಈಗ ಬಿಬಿಎಲ್‌ ಬ್ಯಾಟಿಂಗ್‌ ಮಾಡುವ ಬರದಲ್ಲಿ ಪ್ಯಾಡ್‌ ಬಿಟ್ಟುಬಂದು ಮತ್ತೆ ಸುಧ್ದಿಯಾಗಿದ್ದಾರೆ. 


 ಮೆಲ್ಬೋರ್ನ್ ಸ್ಟಾರ್ಸ್ ನ ಪ್ರಮುಖ ಆಟಗಾರ ವಿಕೆಟ್‌ ಪತನವಾಗುತ್ತಿದಂತೆ ಹ್ಯಾರಿಸ್ ರಾಫ್‌ ಅಂಕಣಕ್ಕೆ ಇಳಿದರು. ಆದರೆ ಅವರು ತಮ್ಮ ಗ್ಲೌಸ್‌ ಮತ್ತು ಪ್ಯಾಡ್‌ಗಳನ್ನು ಬಿಟ್ಟುಬಂದಿದ್ದರು, ತಾವು ಬ್ಯಾಟಿಂಗ್‌ ಮಾಡಲು ಸಿದ್ದರಾಗಿರಲಿಲ್ಲ ಹಾಗು ವಿಕೆಟ್‌ ಬೀಳುವ ನಿರೀಕ್ಷೆಯು ಇಲ್ಲದ ಅವರು ಈ ಎಡವಟ್ಟು ಮಾಡಿದ್ಧರೆ. ಗ್ಲೌಸ್‌ ಮತ್ತು ಪ್ಯಾಡ್‌ಗಳನ್ನು ಧರಿಸುತ್ತ ಕುಳಿತರೆ ಹೆಚ್ಚು ಸಮಯ ಹಿಡಿಯುತ್ತದೆ. ಇದರಿಂದ ತಮ್ಮನ್ನು ಟೈಮ್‌ ಔಟ್‌ ಎಂಬ ನಿರ್ಧಾರವನ್ನು ಹಂಪೈರ್‌ ತೆಗೆದುಕೊಳ್ಳುತ್ತಾರೆ ಎಂಬ ಭಯಕ್ಕೆ ಸುರಕ್ಷಿತ ಕವಚ ಧರಿಸದೆ ಹಾಗೆ ಅಂಕನಕ್ಕೆ ಬಂದಿದ್ಧಾರೆ. ಆ ನಂತರ ಹಂಪೈರ್‌ ಗಳು ಸುರಕ್ಷಿತ ಕವಚ ಧರಿಸುವಂತೆ ತಿಳಿಸಿದರು.


ಇದನ್ನು ಓದಿ-ಮುಂಬೈ ಇಂಡಿಯನ್ಸ್ ಗೆ ಬಿಗ್ ಶಾಕ್ ! ಇಡೀ ಸೀಸನ್ ತಂಡದಿಂದ ಹೊರಗುಳಿಯಲಿದ್ದಾರೆ ಈ ಮ್ಯಾಚ್ ವಿನ್ನರ್ !


ವಿಶ್ವಕಪ್‌ ಸಮಯದಲ್ಲಿ ಶ್ರೀಲಂಕಾ ಬಾಟ್ಸ್‌ಮನ್‌ ಮ್ಯಾಥೀವ್‌ ಇದೇ ರೀತಿ ಟೈಮ್‌ ಔಟ್‌ ನಿರ್ಣಯದಿಂದ ಔಟ್‌ ಆಗಿದ್ದರು. ಬಾಂಗ್ಲದೇಶದ ವಿರುಧ್ದ ಪಂದ್ಯದಲ್ಲಿ ಮ್ಯಾಥೀವ್‌ ಬ್ಯಾಟಿಂಗ್‌ ಆಡಲು ಮುಂದದಾಗ ಅವರ ಹೆಲ್ಮೆಟ್‌ ಧರಿಸುವ ದಾರ ಹರಿದು ಹೋಗಿತ್ತು ಆದರಿಂದ ಅವರು ಬ್ಯಾಟಿಂಗ್‌ ಆರಂಭಿಸಲು ಸ್ವಲ್ಪ ಸಮಯ ತೆಗೆದುಕೊಂಡಿದ್ದರು, ಇದನ್ನೆ ಚಾನ್ಸ್‌ ಮಾಡಿಕೊಂಡ ಬಾಂಗ್ಲ ಆಟಗಾರ ಶಕಿಬ್‌ ಅಲ್‌ ಹಸನ್‌ ಅಫೀಲ್‌ ಮಾಡಿ ಅವರನ್ನು ಟೈಮ್‌ ಔಟ್‌ ನಿರ್ಣಯದಿಂದ ಪೆವಿಲಿಯನ್‌ ಗೆ ಕಳಿಸಿದರು.


ಹ್ಯಾರಿಸ್ ರಾಫ್‌ ಕೂಡ ಇದೇ ಕಾರಣಕ್ಕೆ ಸುಕ್ಷಿತ ಕವಚವನ್ನು ತೊರೆದು ಮೈದಾನಕ್ಕೆ ಬ್ಯಾಟಿಂಗ್‌ ಮಾಡಲು ಮುಂದಾದದರು. ಈ ಫೋಟೋಗಳು ಸಕ್ಕತ್‌ ವೈರಲ್‌ ಆಗಿದ್ದು, ರಾಫ್‌ ಈ ರೀತಿಯ ವರ್ತನೆಗೆ ಕ್ರಿಕೇಟ್‌ ಫ್ಯಾನ್ಸ್‌ಗಳು ಎಲ್ಲೆಡ ಹಾಸ್ಯ ಮಾಡುತ್ತಿದ್ಧಾರೆ. ಅಷ್ಟೇ ಅಲ್ಲದೆ ಇದು ಅನೇಕ ಚರ್ಚೆಗಳಿಗೆ ಕಾರಣವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.