ತ್ರಿಕೋನ ಸರಣಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿದ ಬಾಬರ್ ಅಜಮ್ ಮುಂದಾಳತ್ವದ ಪಾಕಿಸ್ತಾನ ತಂಡವು ಉತ್ತಮ ಫಾರ್ಮ್ ನಲ್ಲಿ ಮುನ್ನಡೆಯುತ್ತಿದೆ. ಎಡಗೈ ಬ್ಯಾಟರ್ ಮೊಹಮ್ಮದ್ ನವಾಜ್ ಕೇವಲ 22 ಎಸೆತಗಳಲ್ಲಿ 38 ರನ್ ಗಳಿಸಿ ಪಾಕಿಸ್ತಾನವನ್ನು 164 ರನ್ ಬೆನ್ನಟ್ಟಲು ಸಹಾಯ ಮಾಡಿದರು. ಮುಂಬರುವ T20 ವಿಶ್ವಕಪ್‌ನ ಮುಂದೆ ಈ ಗೆಲುವು ಬೂಸ್ಟರ್ ಆಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ. ಆದರೆ ಹ್ಯಾರಿಸ್ ರೌಫ್ ಬೌಲಿಂಗ್, ನ್ಯೂಜಿಲೆಂಡ್ ತಂಡವನ್ನು ತತ್ತರಿಸುವಂತೆ ಮಾಡಿದೆ ಎನ್ನಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ನೀವು ಒಂದೇ ದಿನದಲ್ಲಿ ಅಂಬಾನಿ ಅಥವಾ ನರೇಂದ್ರ ಮೋದಿ ಆಗುವುದಿಲ್ಲ"


ಹ್ಯಾರಿಸ್ ರೌಫ್ ಬೌಲಿಂಗ್ ಶೈಲಿಗೆ ಗ್ಲೆನ್ ಫಿಲಿಪ್ಸ್ ಅವರ ಬ್ಯಾಟ್ ಮುರಿದು ಹೋಗಿದೆ. 143kmph ಎಸೆತವು ಫಿಲಿಪ್ಸ್‌ನ ಬ್ಯಾಟ್‌ನ ಕೆಳ ಅಂಚಿಗೆ ಬಡಿದಿದ್ದು, ತುಂಡಾಗಿ ಹೋಗಿದೆ.  


ರೌಫ್ ನಾಲ್ಕು ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ. ಡೆವೊನ್ ಕಾನ್ವೇ ಮತ್ತು ಇಶ್ ಸೋಧಿ ಅವರ ಪ್ರಮುಖ ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಕೇನ್ ವಿಲಿಯಮ್ಸನ್ 59 ರನ್ ಗಳಿಸಿ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲು ನೆರವಾದರು.


"ಕೆ.ಎಲ್ ರಾಹುಲ್ T20 ವಿಶ್ವ ಕಪ್ 2022 ನಲ್ಲಿ ಅಗ್ರರನ್ ಗಳಿಸುವವರಾಗಬಹುದು"


ಪಾಕಿಸ್ತಾನ ತನ್ನ T20 ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪ್ರಾರಂಭಿಸಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.