T20 World Cup 2022 : ಟಿ20 ವಿಶ್ವಕಪ್‌ಗೆ ಮುನ್ನವೇ ಟೀಂ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಭಾರಿ ಭವಿಷ್ಯವನ್ನು ನುಡದಿದ್ದಾರೆ. ಟಿ20 ವಿಶ್ವಕಪ್ ಗೆ ಇನ್ನೂ ಮೂರು ದಿನಗಳು ಮಾತ್ರ ಬಾಕಿ ಇದೆ ಅಂದರೆ, ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. 2007 ರಲ್ಲಿ ಭಾರತವು ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಆದರೆ ಅಂದಿನಿಂದ ಟೀಂ ಇಂಡಿಯಾ ಈ ಪಂದ್ಯಾವಳಿಯಲ್ಲಿ ಅಂತ ಹೇಳಿಕೊಳ್ಳುವಂತಹ ಪ್ರದರ್ಶನವೇನು ನೀಡಿಲ್ಲ.
ಟಿ20 ವಿಶ್ವಕಪ್‌ಗೂ ಮುನ್ನ ರವಿ ಶಾಸ್ತ್ರಿ ಭವಿಷ್ಯ
ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ, ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಸೆಮಿಫೈನಲ್‌ಗೆ ಕೊಂಡೊಯ್ಯುವಲ್ಲಿ ದೊಡ್ಡ ಪಾತ್ರ ವಹಿಸುವ ಆಟಗಾರರು ಯಾರು ಎಂದು ಹೇಳಿದ್ದಾರೆ. ಇತ್ತೀಚೆಗೆ ಸೂರ್ಯಕುಮಾರ್ ಯಾದವ್ ಮತ್ತು ಅನುಭವಿ ಫಿನಿಶರ್ ದಿನೇಶ್ ಕಾರ್ತಿಕ್ ಮಧ್ಯಮ ಕ್ರಮಾಂಕದಲ್ಲಿ ಮರಳುವುದರೊಂದಿಗೆ ಭಾರತದ ಬ್ಯಾಟಿಂಗ್ ಲೈನ್ ಅಪ್ ಉತ್ತಮಗೊಳಿಸಿದ್ದಾರೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದ ಕಾರಣದಿಂದ ಗೈರುಹಾಜರಾಗಿದ್ದರೂ, ಭಾರತೀಯ ಬ್ಯಾಟ್ಸ್‌ಮನ್‌ಗಳು ಈ ಬಾರಿ ತಂಡವನ್ನು ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಸಹಾಯ ಮಾಡಬಹುದು ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : Virat Kohli : T20 ವಿಶ್ವಕಪ್‌ಗೂ ಮುನ್ನ ವೈರಲ್ ಆಯ್ತು ಕಿಂಗ್ ಕೊಹ್ಲಿ ನ್ಯೂ ಲುಕ್.!
'ಈ ಆಟಗಾರರು ಟೀಂ ಅನ್ನು ಸೆಮಿಫೈನಲ್‌ಗೆ ಕೊಂಡೊಯ್ಯಬಹುದು'
ಈ ಬಗ್ಗೆ ಮಾತನಾಡಿದ ಮಾಜಿ ಕೋಚ್ ರವಿಶಾಸ್ತ್ರಿ, 'ಕಳೆದ ಆರು-ಏಳು ವರ್ಷಗಳಿಂದ ಈ ತಂಡದ ಭಾಗವಾಗಿದ್ದೇನೆ. ಟಿ20 ಕ್ರಿಕೆಟ್‌ನಲ್ಲಿ ಭಾರತ ಹೊಂದಿದ್ದಂತೆ ಇದು ಉತ್ತಮ ಲೈನ್‌ಅಪ್ ಎಂದು ನಾನು ಭಾವಿಸುತ್ತೇನೆ. "ಸೂರ್ಯಕುಮಾರ್ ಯಾದವ್ ನಂ. 4, ಹಾರ್ದಿಕ್ ಪಾಂಡ್ಯ ನಂ. 5 ಮತ್ತು ರಿಷಬ್ ಪಂತ್ ಅಥವಾ ದಿನೇಶ್ ಕಾರ್ತಿಕ್ ನಂ. 6, ಇದು ಭಾರಿ ವ್ಯತ್ಯಾಸವನ್ನು ಉಂಟು ಮಾಡಿದೆ. ಏಕೆಂದರೆ ಇದು ಅಗ್ರ ಕ್ರಮಾಂಕಕ್ಕೆ ಅವರು ಬೇಕಾದ ರೀತಿಯಲ್ಲಿ ಆಡಲು ಅನುವು ಮಾಡಿಕೊಡುತ್ತದೆ" ಎಂದು ಹೇಳಿದರು.
ಭಾರತಕ್ಕೆ ಈ ಕ್ಷೇತ್ರದಲ್ಲಿ ಸುಧಾರಣೆಯ ಅಗತ್ಯವಿದೆ
ಇನ್ನೂ ಮುಂದುವರೆದು ಮಾತನಾಡಿದ ರವಿಶಾಸ್ತ್ರಿ, ಭಾರತವು ಮೊದಲಿನಿಂದಲೂ ಸುಧಾರಿಸಬೇಕಾದ ಒಂದು ಕ್ಷೇತ್ರವೆಂದರೆ ಫೀಲ್ಡಿಂಗ್. 'ನೀವು ಉಳಿಸುವ ಆ 15-20 ರನ್‌ಗಳು ಕೊನೆಯಲ್ಲಿ ಭಾರಿ ವ್ಯತ್ಯಾಸವನ್ನು ಉಂಟುಮಾಡಬಹುದು, ಏಕೆಂದರೆ ನೀವು ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದಾಗ, ನೀವು 15-20 ಹೆಚ್ಚುವರಿ ರನ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Team India: ವಿರಾಟ್-ರೋಹಿತ್‌ಗಿಂತ ಮುಂದಿದ್ದರೂ ಅವಕಾಶಕ್ಕಾಗಿ ಹಾತೊರೆಯುತ್ತಿರುವ ಈ ಆಟಗಾರ!
ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.