ಪಂಜಾಬ್ ವೇಗಿ ಹರ್ಷಲ್ ಪಟೇಲ್ ಯಾರ್ಕರ್’ಗೆ ಧೋನಿ ಗೋಲ್ಡನ್ ಡಕ್! ಅರೆಕ್ಷಣ ಅಚ್ಚರಿಗೊಳಗಾದ ಫ್ಯಾನ್ಸ್
MS Dhoni Golden Duck IPL 2024: ಪಂಜಾಬ್ ಕಿಂಗ್ಸ್ ವೇಗಿ ಹರ್ಷಲ್ ಪಟೇಲ್, ಧೋನಿ ಮುಂದೆ ಮೊದಲ ಎಸೆತವನ್ನು ನಿಧಾನವಾದ ಯಾರ್ಕರ್’ನಲ್ಲಿ ಬೌಲ್ ಮಾಡಿದರು, ಅದಕ್ಕೆ ಮಹಿ ಯಾವುದೇ ಬ್ಯಾಟ್ ಬೀಸಿರಲಿಲ್ಲ, ಆದರೆ ಆ ಚೆಂಡು ನೇರವಾಗಿ ಸ್ಟಂಪ್’ಗೆ ಬಡಿಯಿತು. ಈ ವಿಕೆಟ್‌ನೊಂದಿಗೆ ಸಿ ಎಸ್ ಕೆ ಮತ್ತು ಧೋನಿ ಅಭಿಮಾನಿಗಳ ಮುಖದಲ್ಲಿ ನಿರಾಸೆ ಮೂಡಿತ್ತು
MS Dhoni Golden Duck IPL 2024: ಎಂಎಸ್ ಧೋನಿ.. ಮೈದಾನಕ್ಕೆ ಬಂದ್ರೆ ಸಾಕು ಅಭಿಮಾನಿಗಳಲ್ಲಿ ಖುಷಿಯೋ ಖುಷಿ. ಇಂದು ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಋತುವಿನ 53 ನೇ ಪಂದ್ಯ ನಡೆದಿತ್ತು. ಈ ಸಂದರ್ಭದಲ್ಲಿ, ಬ್ಯಾಟಿಂಗ್’ಗೆ ಬಂದ ಧೋನಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಇದನ್ನು ಕಂಡ ಅಭಿಮಾನಿಗಳು ಅರೆಕ್ಷಣ ಶಾಕ್ ಆಗಿದ್ದು ಸುಳ್ಳಲ್ಲ.
ಇದನ್ನೂ ಓದಿ: ಬೇಸಿಗೆಯಲ್ಲಿ ದಾಳಿಂಬೆ ಜ್ಯೂಸ್ ಕುಡಿಯಿರಿ: ದೇಹಕ್ಕೆ ಸಿಗುತ್ತೆ ಈ ಎಲ್ಲಾ ಪ್ರಯೋಜನ
ಪಂಜಾಬ್ ಕಿಂಗ್ಸ್ ವೇಗಿ ಹರ್ಷಲ್ ಪಟೇಲ್, ಧೋನಿ ಮುಂದೆ ಮೊದಲ ಎಸೆತವನ್ನು ನಿಧಾನವಾದ ಯಾರ್ಕರ್’ನಲ್ಲಿ ಬೌಲ್ ಮಾಡಿದರು, ಅದಕ್ಕೆ ಮಹಿ ಯಾವುದೇ ಬ್ಯಾಟ್ ಬೀಸಿರಲಿಲ್ಲ, ಆದರೆ ಆ ಚೆಂಡು ನೇರವಾಗಿ ಸ್ಟಂಪ್’ಗೆ ಬಡಿಯಿತು. ಈ ವಿಕೆಟ್‌ನೊಂದಿಗೆ ಸಿ ಎಸ್ ಕೆ ಮತ್ತು ಧೋನಿ ಅಭಿಮಾನಿಗಳ ಮುಖದಲ್ಲಿ ನಿರಾಸೆ ಮೂಡಿತ್ತು.
ಸಿ ಎಸ್ ಕೆ ಬ್ಯಾಟಿಂಗ್’ನಲ್ಲಿ ಎಂಎಸ್ ಧೋನಿ ಇನ್ನಿಂಗ್ಸ್’ನ 19ನೇ ಓವರ್’ನಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್’ಗೆ ಬಂದರು. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಅಭಿಮಾನಿಗಳು ಮಹಿ ಅವರನ್ನು ಸಂತಸದಿಂದಲೇ ಸ್ವಾಗತಿಸಿದರು.
ಇದನ್ನೂ ಓದಿ: ಪಂದ್ಯ ಗೆಲ್ಲುತ್ತಿದ್ದಂತೆ ಪತ್ನಿ ಅನುಷ್ಕಾ ಶರ್ಮಾಗೆ ಸನ್ನೆ ಮಾಡಿ ಹೀಗಂದ ವಿರಾಟ್ ಕೊಹ್ಲಿ! ವಿಡಿಯೋ
ಧೋನಿ ಎರಡನೇ ಬಾರಿಗೆ ಔಟ್
ಐಪಿಎಲ್ 2024 ರಲ್ಲಿ ಅಬ್ಬರಿಸುತ್ತಿರುವ ಧೋನಿ, ಈ ಋತುವಿನಲ್ಲಿ ಎರಡನೇ ಬಾರಿಗೆ ಔಟಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಎರಡು ರನ್ ಗಳಿಸುವ ಯತ್ನದಲ್ಲಿ ರನೌಟ್ ಆಗಿದ್ದರು. ಈ ಋತುವಿನಲ್ಲಿ ಧೋನಿ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನಿಂಗ್ಸ್‌ನ ಕೊನೆಯ ಓವರ್‌ಗಳಲ್ಲಿ ಬ್ಯಾಟಿಂಗ್’ಗೆ ಬಂದು ಬೌಂಡರಿ, ಸಿಕ್ಸರ್‌ಗಳಿಂದ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಾರೆ. ಇದುವರೆಗೆ ಅವರ 7 ಇನ್ನಿಂಗ್ಸ್‌ಗಳಲ್ಲಿ 110 ರನ್’ಗಳು ಬಂದಿವೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 229 ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ