ನವದೆಹಲಿ: ಮುಂದಿನ 48 ಗಂಟೆಗಳಲ್ಲಿ ಉತ್ತರ ಭಾರತಾದ್ಯಂತ ಭಾರಿ ಮಳೆ ಸಂಭವಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


COMMERCIAL BREAK
SCROLL TO CONTINUE READING

ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿರುವಂತೆ ಭಾರಿ ಮಳೆ ಹಿಮಾಚಲ ಪ್ರದೇಶ ಉತ್ತರಪ್ರದೇಶ ಪೂರ್ವ ರಾಜಸ್ಥಾನ,ಪಶ್ಚಿಮ ಮದ್ಯಪ್ರದೇಶ ಗಂಗಾವಲಯದ ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ,ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ್, ಮಿಜೋರಾಂ ತ್ರಿಪುರಾಗಳಲ್ಲಿ ಸುರಿಯಲಿದೆ ಎನ್ನಲಾಗಿದೆ.



ಮಾನ್ಸೂನ ಮಾರುತಗಳು ಮದ್ಯಪ್ರದೇಶದ  ಉತ್ತರ ಭಾಗದಲ್ಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಸಮುದ್ರ ಮಟ್ಟಕ್ಕಿಂತ 5.8 ಕೀ,ಮಿ ಎತ್ತರದಲ್ಲಿವೆ ಎಂದು ತಿಳಿದು ಬಂದಿದೆ.


ಪೂರ್ವ ಭಾಗದ ಮಾನ್ಸೂನಗಳು ಉತ್ತರ ಭಾಗಕ್ಕೆ ತಿರುಗಿ ಫಿರೋಜ್ ಪುರ ಕೈಥಾಲ್, ಮೀರತ್, ಹರ್ದೊಇ,ಪಾಟ್ನಾ, ಗೋಲಪಾರಾಮೂಲಕ ಹಾದುಹೋಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.