2023ರ ವರ್ಷದ ಅತೀ ಹೆಚ್ಚು ಟೆಸ್ಟ್ ಸ್ಕೋರ್ ಗಳಿಸಿದವರ ಪಟ್ಟಿ ! ಆಸಿಸ್ ಆಟಗಾರರೇ ಮೇಲುಗೈ ..
2023 icc test score : ಐಸಿಸಿ 2023ರ ಅತ್ಯಧಿಕ ಟೆಸ್ಟ್ ರನ್‌ಗಳಿಸಿದವರ ಪಟ್ಟಿಯನ್ನು ಬಿಡುಗಡೆಮಾಡಿದೆ. ಈ ಸಾಲಿನಲ್ಲಿ ಆಸಿಸ್ ಆಟಗಾರ ಮೇಲುಗೈ ಸಾಧಿಸಿದ್ದು, ಅಗ್ರ ನಾಲ್ಕು ಸ್ಥಾನಗಳನ್ನು ಆಸ್ಟ್ರೇಲಿಯಾ ತಂಡದ ಆಟಗಾರರೇ ಅಲಂಕರಿಸಿದ್ಧಾರೆ. ಅಷ್ಟೇ ಅಲ್ಲದೇ ಭಾರತದ ಪರ ಏಕೈಕ ಬ್ಯಾಟ್ಸ್ಮನ್ ಆಗಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ಧಾರೆ.
2023 highest test scorer : ಐಸಿಸಿಯು 2023ರ ವರ್ಷದಲ್ಲಿ ಟೆಸ್ಟ್‌ನಲ್ಲಿ ಅತೀ ಹೆಚ್ಚು ಶತಕ ಗಳಿಸಿದವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಆಸಿಸ್ ತಂಡದ ನಾಲ್ವರು ಆಟಗರಾರು ಅಗ್ರ ನಾಲ್ಕೂ ಸ್ಥಾನವನ್ನು ಅಲಂಕರಿಸಿದ್ಧಾರೆ. ಈ ಸಾಲಿನಲ್ಲಿ ಭಾರತ ಓರ್ವ ಆಟಗಾರನಿಗೂ ಸ್ಥಾನ ದೊರೆತಿದೆ.
ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ಧಾರೆ. ಅಷ್ಟೇ ಅಲ್ಲದೇ ಅಗ್ರ ಹತ್ತರರೊಳಗಿನ ಪಟ್ಟಿಯಲ್ಲಿ ಭಾರತ ಏಕೈಕ ಆಟಗಾರರಾಗಿ ಸ್ಥಾನ ಪಡೆದಿದ್ದಾರೆ. ಕೇವಲ 12 ಇನ್ನಿಂಗ್ಸ್‌ಗಳನ್ನು ಆಡಿದ್ದು, 671 ರನ್ ಕಲೆಹಾಕಿದ್ದಾರೆ. ಆಸ್ಟ್ರೇಲಿಯಾ ವಿರುದ್ದ ಗಳಿಸದ 186 ರನ್‌ಗಳು ಇವರ ಅತ್ಯಧಿಕ ರನ್ ಆಗಿದೆ.
ಇದನ್ನೂ ಓದಿ-T20 ವಿಶ್ವಕಪ್ ನಲ್ಲಿ ಈ ಆಟಗಾರನಿಗೆ ಸಿಗಲಿ ಟೀಂ ಇಂಡಿಯಾ ಕ್ಯಾಪ್ಟನ್ ಪಟ್ಟ : ಗಂಗೂಲಿಯ ಆಯ್ಕೆ ಇವರೇ !
ಇನ್ನೂ ಅಗ್ರ ನಾಲ್ಕು ಸ್ಥಾನಗಳನ್ನು ಕ್ರಮವಾಗಿ ಆಸ್ಟ್ರೇಲಿಯಾ ಆಟಗಾರರಾದ ಉಸ್ಮನ್ ಖವಾಜ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್ ಹಾಗೂ ಮಾರ್ನಸ್ ಲಬುಶೇನ್ ಅಲಂಕರಿಸಿದ್ದಾರೆ. 5ನೇ ಸ್ಥಾನದಲ್ಲಿ ಇಂಗ್ಲೆಂಡ್ ಆಟಗಾರ ಜೋ ರೂಟ್ ಹೆಸರು ಕಂಡುಬಂದಿದೆ.
2023ರ ಅತಧಿಕ ರನ್‌ಗಳಿಸಿದವರ ಪಟ್ಟಿಯಲ್ಲಿ ಉಸ್ಮನ್ ಖವಾಜ ಮೊದಲ ಸ್ಥಾನದಲ್ಲಿದ್ದು 24 ಇನ್ನಿಂಗ್ಸ್‌ಗಳಿಂದ ಇವರು ಗಳಿಸಿದ್ದ ಬರೊಬ್ಬರಿ 1210 ರನ್‌ಗಳಾಗಿವೆ. 195 ಇವರ ಅತ್ಯಧಿಕ ಸ್ಕೋರ್ ಆಗಿದ್ದು, 3 ಶತಕಗಳನ್ನು ಹಾಗೂ 6 ಅರ್ಧಶತಕಗಳನ್ನು ದಾಖಲಿಸಿದ್ಧಾರೆ. ಅಷ್ಟೇ ಅಲ್ಲದೇ 2023ರ ಟೆಸ್ಟ್ ನಲ್ಲಿ 52.60 ರ ಸರಾಸರಿಯನ್ನು ಹೊಂದಿದ್ಧಾರೆ.
ಇದನ್ನೂ ಓದಿ-
ಇನ್ನೂ ಎರಡನೇ ಸ್ಥಾನವನ್ನು ಅದೇ ಆಸಿಸ್ ತಂಡದ ಆಟಗಾರ ಸ್ಠಿವನ್ ಸ್ಮಿತ್ ಅಲಂಕರಿಸಿದ್ದಾರೆ. ಒಟ್ಟು 24 ಇನ್ನಿಂಗ್ಸ್‌ಗಲನ್ನು ಆಡಿದ್ದು 929ರನ್ ಗಳಿಸಿದ್ಧಾರೆ. ಅಷ್ಟೇ ಅಲ್ಲದೇ 3 ಶತಕ ಹಾಗೂ 3 ಅರ್ಧ ಶತಕಗಳಿಸಿದ್ದಾರೆ.
2023ರ ಅತ್ಯಧಿಕ ಟೆಸ್ಟ್ ಸ್ಕೋರ್ ಪಟ್ಟಿ :
ಉಸ್ಮನ್ ಖವಾಜ - 1210 (24 ಇನ್ನಿಂಗ್ಸ್) , ಸ್ಟೀವ್ ಸ್ಮಿತ್ - 929 (24 ಇನ್ನಿಂಗ್ಸ್), ಟ್ರಾವಿಸ್ ಹೆಡ್ - 919(23 ಇನ್ನಿಂಗ್ಸ್), ಮಾರ್ನಸ್ ಲುಬುಶೇನ್ 803 (25 ಇನ್ನಿಂಗ್ಸ್), ಜೋ ರೂಟ್ 787 (14 ಇನ್ನಿಂಗ್ಸ್), ಹ್ಯಾರಿ ಬ್ರೂಕ್ 701 (14 ಇನ್ನಿಂಗ್ಸ್), ಕೇನ್ ವಿಲಿಯಂಸನ್ 695 (13 ಇನ್ನಿಂಗ್ಸ್), ವಿರಾಟ್ ಕೊಹ್ಲಿ 671 (12 ಇನ್ನಿಂಗ್ಸ್), ಬೆನ್ ಡಕೆತ್ 654 ( 15 ಇನ್ನಿಂಗ್ಸ್), ಕರುಣಾರತ್ನೆ 608 (10 ಇನ್ನಿಂಗ್ಸ್).
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.