ನವದೆಹಲಿ: ಜಾಗತಿಕ ಅಥ್ಲೆಟಿಕ್ಸ್‌'ನಲ್ಲಿ ಭಾರತದ ಹೊಸ ಆಶಾಕಿರಣವಾದ ಅಸ್ಸಾಂನ ರೈತನ ಮಗಳು ಹಿಮಾ ದಾಸ್ ಇದೀಗ ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ಸಂಚಲನವನ್ನೇ ಮೂಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಫಿನ್ಲೆಂಡ್‌'ನ ತಂಪೆರೆಯಲ್ಲಿ ನಡೆದ ಐಎಎಎಫ್‌ ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ ಮಹಿಳೆಯರ 400 ಮೀಟರ್‌ ಓಟದ ಸ್ಪರ್ಧೆಯನ್ನು 51.46 ಸೆಕೆಂಡ್‌ಗಳಲ್ಲಿ ಕ್ರಮಿಸಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದ ಹಿಮಾ ದಾಸ್‌ ಅವರಿಗಾಗಿ ಪ್ರತಿಷ್ಠಿತ ಕ್ರೀಡಾ ಸಲಕರಣೆಗಳು ಮತ್ತು ಉತ್ಪನ್ನಗಳ ಕಂಪನಿ 
ಆ್ಯಡಿಡಾಸ್ ವಿಶೇಷ ಶೂ ಸಿದ್ಧಪಡಿಸಿ, ಅವರಿಗೆ ನೀಡಿದೆ. 


ಹಿಮಾದಾಸ್ ಹೆಸರಿನಲ್ಲಿ ಆ್ಯಡಿಡಾಸ್ ಸಿದ್ದಪಡಿಸಿರುವ ವಿಶೇಷ ಶೂ ಮೇಲೆ ಅವರ ಹೆಸರು ದಾಖಲಿಸಲಾಗಿದ್ದು, ಮತ್ತೊಂದು ಕಡೆಯಲ್ಲಿ ‘ಇತಿಹಾಸ ರಚಿಸಲು ಇಲ್ಲಿದ್ದೇನೆ’ ಎಂಬ ಶೀರ್ಷಿಕೆ ಹಾಕಲಾಗಿದೆ. ಆಡಿಡಾಸ್ ನೀಡಿರುವ ಈ ಶೂ ಚಿತ್ರಗಳನ್ನು ಹಿಮಾದಾಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.