Sunrisers Hyderabad vs Kolkata Knight Riders IPL Final: ಐಪಿಎಲ್ 2024 ಮುಕ್ತಾಯದ ಹಂತಕ್ಕೆ ಬಂದಿದೆ. ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್’ರೈಸರ್ಸ್ ಹೈದರಾಬಾದ್ ನಡುವೆ ಪ್ರಶಸ್ತಿ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ. ಒಂದೆಡೆ ಪ್ಯಾಟ್ ಕಮಿನ್ಸ್ ಸಾರಥ್ಯದ ಹೈದರಾಬಾದ್ ಎರಡನೇ ಕ್ವಾಲಿಫೈಯರ್’ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದರೆ, ಶ್ರೇಯಸ್ ಅಯ್ಯರ್ ಸಾರಥ್ಯದ ಕೆಕೆಆರ್ ಮೊದಲ ಕ್ವಾಲಿಫೈಯರ್’ನಲ್ಲಿ ಹೈದರಾಬಾದ್ ತಂಡವನ್ನು ಮಣಿಸಿ ಫೈನಲ್’ಗೆ ನೇರ ಟಿಕೆಟ್ ಗಿಟ್ಟಿಸಿಕೊಂಡಿತ್ತು. ಈಗ ಉಭಯ ತಂಡಗಳು ಟ್ರೋಫಿಯತ್ತ ಕಣ್ಣಿಟ್ಟಿವೆ. ಒಂದು ವೇಳೆ ಹೈದರಾಬಾದ್ ಈ ಸೀಸನ್ ವಿಜೇತರಾದರೆ ತಂಡವು ಇತಿಹಾಸವನ್ನು ಸೃಷ್ಟಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಂದೆ ಯಾರು ಗೊತ್ತಾ? ಇವರು ದೇಶದ ಪ್ರಖ್ಯಾತ ಕವಿ ಮತ್ತು ಬರಹಗಾರ


ಐಪಿಎಲ್ 2024ರಲ್ಲಿ, ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಬ್ಯಾಟ್ಸ್‌ಮನ್‌’ಗಳು ಅದ್ಭುತ ಫಾರ್ಮ್ ಮೂಲಕ ರನ್ ಮಳೆ ಸುರಿಸಿದ್ದರು. ಆದರೆ ಪ್ಲೇಆಫ್ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಶೇಷವೇನೂ ಆಗಿರಲಿಲ್ಲ. ಒಂದು ವೇಳೆ ಇಂದು ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಬ್ಯಾಟ್ ಮಾಡಿ ಮಿಂಚಿದರೆ ಕೆಕೆಆರ್ ಬೌಲರ್’ಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ.


ಅಷ್ಟೇ ಅಲ್ಲದೆ, ಹೈದರಾಬಾದ್ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾದರೆ, ಮೊದಲ ಕ್ವಾಲಿಫೈಯರ್‌’ನಲ್ಲಿ ಸೋತ ನಂತರ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾದ ಎರಡನೇ ತಂಡವಾಗಲಿದೆ. ಮುಂಬೈ ಇಂಡಿಯನ್ಸ್ ಮಾತ್ರ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಪ್ಯಾಟ್ ಕಮಿನ್ಸ್ ಲಕ್ಕಿ ಮ್ಯಾನ್ ಆಗಿ ಹೊರಹೊಮ್ಮೋದು ಗ್ಯಾರಂಟಿ. ಪ್ಯಾಟ್ ನಾಯಕತ್ವದಲ್ಲಿ ಟೆಸ್ಟ್ ಚಾಂಪಿಯನ್ಶಿಪ್ ಜೊತೆ ಏಕದಿನ ವಿಶ್ವಕಪ್ ಕೂಡ ಗೆದ್ದ ಕೀರ್ತಿ ಆಸ್ಟ್ರೇಲಿಯಾ ತಂಡಕ್ಕಿದೆ.


ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿದ್ದ ಮುಂಬೈ ಇಂಡಿಯನ್ಸ್ ಎರಡು ಬಾರಿ ಕ್ವಾಲಿಫೈಯರ್-1 ಸೋತ ನಂತರವೂ ಐಪಿಎಲ್ ಟ್ರೋಫಿ ಗೆದ್ದು ಪವಾಡ ಮಾಡಿತ್ತು. ತಂಡ 2013 ಮತ್ತು 2017ರಲ್ಲಿ ಈ ಸಾಧನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಎರಡೂ ಸೀಸನ್‌’ಗಳಲ್ಲಿ ಮುಂಬೈ ತಂಡ ಕ್ವಾಲಿಫೈಯರ್-1ರಲ್ಲಿ ಸೋತಿದ್ದು, ನಂತರ ಕ್ವಾಲಿಫೈಯರ್-2 ಹಾಗೂ ಫೈನಲ್‌’ನಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. 2013ರ ಫೈನಲ್‌’ನಲ್ಲಿ ಮುಂಬೈ ತಂಡ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದರೆ, 2017ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಮುಂಬೈ ಟ್ರೋಫಿ ಎತ್ತಿ ಹಿಡಿದಿತ್ತು.


ಇದನ್ನೂ ಓದಿ: ಸನಾ ಗಂಗೂಲಿ-ಸಾರಾ ತೆಂಡೂಲ್ಕರ್ ವಿದ್ಯಾಭ್ಯಾಸ ಪಡೆದ ಈ ಪ್ರತಿಷ್ಠಿತ ಕಾಲೇಜಿನ ಫೀಜ್ ಎಷ್ಟು ಗೊತ್ತಾ?


ಸನ್‌ರೈಸರ್ಸ್ ಹೈದರಾಬಾದ್ ತಂಡವು ಫೈನಲ್‌’ನಲ್ಲಿ ಗೆಲುವು ಸಾಧಿಸುವ ಮೂಲಕ ಎರಡನೇ ಐಪಿಎಲ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. 2016 ರಲ್ಲಿ, ತಂಡವು ಮೊದಲ ಬಾರಿಗೆ ಐಪಿಎಲ್ ಫೈನಲ್ ತಲುಪಿ, ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆರ್‌’ಸಿಬಿಯನ್ನು ಸೋಲಿಸುವ ಮೂಲಕ ಹೈದರಾಬಾದ್ ಈ ಋತುವಿನಲ್ಲಿ ಚಾಂಪಿಯನ್ ಆಗಿತ್ತು. ಅದಾದ ಎರಡು ವರ್ಷಗಳ ನಂತರ, ತಂಡವು ಮತ್ತೊಮ್ಮೆ ಫೈನಲ್‌’ಗೆ ತಲುಪಿತು, ಆದರೆ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಗೆದ್ದಿತ್ತು. ಇದೀಗ ಮೂರನೇ ಬಾರಿಗೆ ಹೈದರಾಬಾದ್ ಐಪಿಎಲ್ ಫೈನಲ್ ಪಂದ್ಯವನ್ನು ಆಡಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.