Hitman Rohit Sharma: ಇತ್ತೀಚೆಗಿನ ವರ್ಷದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ಭರವಸೆ ಮೂಡಿಸಿರುವ ಆಟಗಾರ ಎಂದರೆ ರೋಹಿತ್ ಶರ್ಮಾ. ಆದರೆ ಈ ಒಂದು ವಿಷಯದಲ್ಲಿ ರೋಹಿತ್ ಶರ್ಮಾ ಅವರು ಧೋನಿ ಮತ್ತು ಕೊಹ್ಲಿ ಅವರಂತೆ ನತದೃಷ್ಟ ಕೂಡ ಹೌದು.


COMMERCIAL BREAK
SCROLL TO CONTINUE READING

ನಿನ್ನೆ ಅಡಿಲೇಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯವನ್ನು ಸೋಲುವುದರ ಮೂಲಕ ಭಾರತ ಕ್ರಿಕೆಟ್ ತಂಡ ಸರಣಿಯನ್ನು ಕಳೆದುಕೊಂಡಿದೆ. ಅದು ಭಾರತಕ್ಕೆ ಆದ ಹೀನಾಯ ಸೋಲು (10 ವಿಕೆಟ್ ಗಳ ಅಂತರದ ಸೋಲು) ಎನ್ನುವುದು ಒಂದುಕಡೆಯಾದರೆ ನಾಯಕ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಪಾಲಿಗಂತೂ ದುಸ್ವಪ್ನದಂತೆ ಕಾಡುವ ದಿನವಾಗಿ ಪರಿಣಮಿಸಿದೆ. ವೈಯಕ್ತಿಕವಾಗಿ ಬ್ಯಾಟಿಂಗ್ ನಲ್ಲಿ ಮತ್ತು ತಂಡವನ್ನು ಮುನ್ನಡೆಸುವುದರಲ್ಲಿ ಎರಡರಲ್ಲೂ ರೋಹಿತ್ ಶರ್ಮಾ ಅವರಿಗೆ ಕಹಿ ಅನುಭವವಾಗಿದೆ.


ಕ್ರಿಕೆಟ್ ನಲ್ಲಿ ಕೆಲವೊಮ್ಮೆ ದಾಖಲೆಗಳು ನಕಾರಾತ್ಮಕವಾಗಿಯೂ ರೂಪುಗೊಳ್ಳುತ್ತವೆ. ಭಾನುವಾರ ರೋಹಿತ್ ಶರ್ಮಾ ಪಾಲಿಗೆ ಆದಾದದ್ದು ಅದೇ. ಅವರು ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರು ಮಾಡಿದ್ದ ದಾಖಲೆಯನ್ನು ಮಾಡಿದರು. ಆದರದು ನಕಾರಾತ್ಮಕವಾದ ದಾಖಲೆ ಎನ್ನುವುದು ಬೇಸರದ ವಿಚಾರ.


ನತದೃಷ್ಟ ರೋಹಿತ್ ಶರ್ಮಾ!
ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಅವರ ಆಟದಲ್ಲಿ ಅಥವಾ ನಾಯಕತ್ವದಲ್ಲಿ ಏನೂ ಕೊರತೆ ಇರಲಿಲ್ಲ. ಆದರೂ ಈ ಮಹಾನ್ ಆಟಗಾರರು ತಮ್ಮ ನಾಯಕತ್ವದಲ್ಲಿ ಸತತವಾಗಿ ನಾಲ್ಕು ಟೆಸ್ಟ್ ಗಳನ್ನು ಸೋತ ದಾಖಲೆ ಬರೆದಿದ್ದರು. ಅವರಂತೆ ಈಗ ಸತತವಾಗಿ ನಾಲ್ಕು ಟೆಸ್ಟ್ ಸೋತ ಇನ್ನೊಬ್ಬ ನತದೃಷ್ಟ ನಾಯಕ ರೋಹಿತ್ ಶರ್ಮಾ. ರೋಹಿತ್ ಶರ್ಮಾ ಇದಕ್ಕೂ ಮೊದಲು ಇದೇ ಅಕ್ಟೋಬರ್-ನವೆಂಬರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸತತವಾಗಿ ಮೂರು ಟೆಸ್ಟ್ ಗಳನ್ನು ಸೋತಿದ್ದರು. 


ಇದನ್ನೂ ಓದಿ- ಇನ್ಮುಂದೆ ಇವರೇ ಬಿಸಿಸಿಐ ಕಾರ್ಯದರ್ಶಿ... ಜಯ್‌ ಶಾ ಸ್ಥಾನಕ್ಕೆ ಅಧಿಕಾರ ವಹಿಸಿದಕೊಂಡವರ ಹಿನ್ನೆಲೆ


ಭಾರತದಲ್ಲಿ ಮೊದಲು ಇಂಥ ನಕಾರಾತ್ಮಕ ದಾಖಲೆಯನ್ನು ಮಾಡಿದವರು ದತ್ತಾ ಗಾಯಕ್ವಾಡ್. ಅವರ ನಾಯಕತದಲ್ಲಿ ಭಾರತ ಕ್ರಿಕೆಟ್ ತಂಡ 1959ರಲ್ಲಿ ಇಂಗ್ಲೆಂಡ್ ವಿರುದ್ಧ ಸತತ ನಾಲ್ಕು ಟೆಸ್ಟ್ ಗಳನ್ನು ಸೋತಿತ್ತು. ನಂತರ 1967-68ರಲ್ಲಿ ಭಾರತ ಮತ್ತೆ ಪಟೌಡಿಯ ನಾಯಕತ್ವದಲ್ಲಿ ಸತತವಾಗಿ ಆರು ಟೆಸ್ಟ್ ಗಳನ್ನು ಸೋತಿತ್ತು. ಇದಾದ ಮೇಲೆ ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ 1999-2000ರಲ್ಲಿ ಭಾರತ ಕ್ರಿಕೆಟ್ ತಂಡ ಸತತವಾಗಿ ಐದು ಟೆಸ್ಟ್ ಗಳನ್ನು ಪರಾಭವಗೊಂಡಿತ್ತು. 


ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ತಂಡ 2011 ಮತ್ತು 2014ರಲ್ಲಿ ಸತತವಾಗಿ ಎರಡು ಬಾರಿ ನಾಲ್ಕು ಟೆಸ್ಟ್ ಗಳನ್ನು ಕಳೆದುಕೊಂಡಿತು. ಇದಾದ ಮೇಲೆ ಟೆಸ್ಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಕೂಡ 2020-21ರಲ್ಲಿ ತಮ್ಮ ನೇತೃತ್ವದಲ್ಲಿ ನಾಲ್ಕು ಬ್ಯಾಕ್‌-ಟು-ಬ್ಯಾಕ್‌ ಟೆಸ್ಟ್ ಗಳನ್ನು ಸೋತಿದೆ.


ಇದನ್ನೂ ಓದಿ- ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧು ಅಕ್ಕ ಯಾರು ಗೊತ್ತೇ? ತಂಗಿಯ ಪ್ರತಿಹೆಜ್ಜೆಗೂ ನೆರಳಾಗಿ ನಿಂತ ಈಕೆಯೂ ಭಾರತದ ಸ್ಟಾರ್‌ ಪ್ಲೇಯರ್ ಕೂಡ ಹೌದು


ಸತತವಾಗಿ ಅತಿ ಹೆಚ್ಚು ಟೆಸ್ಟ್‌ಗಳಲ್ಲಿ ಸೋತಿರುವ ಭಾರತೀಯ ನಾಯಕರು
6 – MAK ಪಟೌಡಿ (1967-68)
5 – ಸಚಿನ್ ತೆಂಡೂಲ್ಕರ್ (1999-00)
4 – ದತ್ತಾ ಗಾಯಕ್ವಾಡ್ (1959)
4 – MS ಧೋನಿ (2011)
4 – MS ಧೋನಿ (2014)
4 -  ವಿರಾಟ್ ಕೊಹ್ಲಿ (2020-21)
4 – ರೋಹಿತ್ ಶರ್ಮಾ (2024)

 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.