Asia Cup 2023 Final Race: ಭಾರತೀಯ ಕ್ರಿಕೆಟ್ ತಂಡ ಏಷ್ಯಾ ಕಪ್-2023ರ ಫೈನಲ್‌’ಗೆ ಪ್ರವೇಶಿಸಿದೆ. ಸ್ಫೋಟಕ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸಾರಥ್ಯದ ತಂಡ ಮಂಗಳವಾರ ರಾತ್ರಿ ನಡೆದ ಸೂಪರ್-4 ಸುತ್ತಿನ ಪಂದ್ಯದಲ್ಲಿ ಶ್ರೀಲಂಕಾವನ್ನು 41 ರನ್‌’ಗಳಿಂದ ಸೋಲಿಸಿತು. ಈ ಮಧ್ಯೆ ಒಂದು ತಂಡವು ಫೈನಲ್‌’ನ ರೇಸ್‌’ನಿಂದ ಸಂಪೂರ್ಣವಾಗಿ ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ಭಾರತ ಗೆಲುವಿನ ಹೀರೋಗಳು ಈ ಇಬ್ಬರು ಆಟಗಾರರು”… ಸಂತಸದಲ್ಲಿ ರೋಹಿತ್ ಶರ್ಮಾ ಹೇಳಿಕೆ


ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಸೂಪರ್-4 ಸುತ್ತಿನ ಪಂದ್ಯದಲ್ಲಿ ಭಾರತ 41 ರನ್‌’ಗಳಿಂದ ಶ್ರೀಲಂಕಾವನ್ನು ಸೋಲಿಸಿತು. ಈ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡುತ್ತಿರುವ ಟೀಂ ಇಂಡಿಯಾ 11ನೇ ಬಾರಿಗೆ ಏಷ್ಯಾಕಪ್ ಫೈನಲ್‌’ಗೆ ಟಿಕೆಟ್ ಗಿಟ್ಟಿಸಿಕೊಂಡಿದೆ. ಈಗ ಭಾರತವು ಏಷ್ಯಾ ಕಪ್-2023 ಪ್ರಶಸ್ತಿಗಾಗಿ ಪಾಕಿಸ್ತಾನ ಅಥವಾ ಶ್ರೀಲಂಕಾವನ್ನು ಎದುರಿಸಲಿದೆ. ಈ ಫೈನಲ್ ಪಂದ್ಯ ಸೆಪ್ಟೆಂಬರ್ 17 ರಂದು ನಡೆಯಲಿದ್ದು, ಎಂಟನೇ ಟ್ರೋಫಿ ಎತ್ತಿಹಿಡಿಯಲು ಟೀಂ ಇಂಡಿಯಾ ಕಾತುರದಿಂದ ಕಾಯುತ್ತಿದೆ.


ಬಾಂಗ್ಲಾದೇಶ ತಂಡ ಏಷ್ಯಾಕಪ್‌’ನ ಫೈನಲ್‌’ಗೆ ತಲುಪುವ ರೇಸ್‌’ನಿಂದ ಸಂಪೂರ್ಣವಾಗಿ ಹೊರಗುಳಿದಿದೆ. ಸೂಪರ್-4 ಸುತ್ತಿನಲ್ಲಿ ಬಾಂಗ್ಲಾದೇಶ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಈಗಾಗಲೇ 2 ಪಂದ್ಯಗಳನ್ನು ಆಡಿರುವ ಬಾಂಗ್ಲಾಗೆ, ಸೆಪ್ಟೆಂಬರ್ 15ರಂದು ಭಾರತ ಸವಾಲೆಸೆಯಲಿದೆ.


ಇದನ್ನೂ ಓದಿ: ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಯಾರು?


ಪಾಕಿಸ್ತಾನಕ್ಕೂ ಅಪಾಯ:


ಇದೇ ವೇಳೆ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವೂ ಹೊರಬೀಳುವ ಭೀತಿಯಲ್ಲಿದೆ. ಸೆಪ್ಟೆಂಬರ್ 14 ಗುರುವಾರದಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಸೂಪರ್-4 ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು 2023 ರ ಏಷ್ಯಾಕಪ್‌’ನ ಫೈನಲ್ ಅನ್ನು ಸೆಪ್ಟೆಂಬರ್ 17 ರಂದು ಭಾರತದ ವಿರುದ್ಧ ಆಡಲಿದೆ. ಭಾರತ ತನ್ನ ಕೊನೆಯ ಪಂದ್ಯದಲ್ಲಿ ಎರಡೂ ತಂಡಗಳನ್ನು ಸೋಲಿಸಿದೆ. ಇನ್ನು ಶ್ರೀಲಂಕಾ ತಂಡ ಪಾಕಿಸ್ತಾನವನ್ನು ಸೋಲಿಸಿದರೆ ಫೈನಲ್‌’ಗೆ ನೇರ ಟಿಕೆಟ್ ಪಡೆಯುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ