“ಭಾರತ ಗೆಲುವಿನ ಹೀರೋಗಳು ಈ ಇಬ್ಬರು ಆಟಗಾರರು”… ಫೈನಲ್ ಪ್ರವೇಶದ ಸಂತಸದಲ್ಲಿ ರೋಹಿತ್ ಶರ್ಮಾ ಹೇಳಿಕೆ

Rohit Sharma Statement: ಮಂಗಳವಾರ ನಡೆದ ಸೂಪರ್-4 ಪಂದ್ಯದಲ್ಲಿ ಶ್ರೀಲಂಕಾವನ್ನು 41 ರನ್‌’ಗಳಿಂದ ಸೋಲಿಸುವ ಮೂಲಕ ಭಾರತ ಏಷ್ಯಾಕಪ್‌’ನ ಫೈನಲ್‌ ಪ್ರವೇಶಿಸಿದೆ. ಇದೀಗ ಏಷ್ಯಾ ಕಪ್ 2023 ರ ಅಂತಿಮ ಪಂದ್ಯವು ಸೆಪ್ಟೆಂಬರ್ 17 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಪಾಕಿಸ್ತಾನ ಅಥವಾ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

Written by - Bhavishya Shetty | Last Updated : Sep 13, 2023, 11:37 AM IST
    • ಭಾರತ 11ನೇ ಬಾರಿಗೆ ಏಷ್ಯಾಕಪ್ ಫೈನಲ್ ತಲುಪಿದೆ
    • ಶ್ರೀಲಂಕಾವನ್ನು 41 ರನ್‌’ಗಳಿಂದ ಸೋಲಿಸುವ ಮೂಲಕ ಭಾರತ ಏಷ್ಯಾಕಪ್‌’ನ ಫೈನಲ್‌ ಪ್ರವೇಶಿಸಿದೆ
    • ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 213 ರನ್’ಗಳ ಸಾಧಾರಣ ಮೊತ್ತ ಕಲೆಹಾಕಿತು
“ಭಾರತ ಗೆಲುವಿನ ಹೀರೋಗಳು ಈ ಇಬ್ಬರು ಆಟಗಾರರು”… ಫೈನಲ್ ಪ್ರವೇಶದ ಸಂತಸದಲ್ಲಿ ರೋಹಿತ್ ಶರ್ಮಾ ಹೇಳಿಕೆ title=
Rohit Sharma

Rohit Sharma Statement: ಭಾರತ 11ನೇ ಬಾರಿಗೆ ಏಷ್ಯಾಕಪ್ ಫೈನಲ್ ತಲುಪಿದೆ. ಈ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಖುಷಿಯಿಂದ ಕುಣಿದಾಡಿದ್ದಾರೆ. ಮಂಗಳವಾರ ನಡೆದ ಸೂಪರ್-4 ಪಂದ್ಯದಲ್ಲಿ ಶ್ರೀಲಂಕಾವನ್ನು 41 ರನ್‌’ಗಳಿಂದ ಸೋಲಿಸುವ ಮೂಲಕ ಭಾರತ ಏಷ್ಯಾಕಪ್‌’ನ ಫೈನಲ್‌ ಪ್ರವೇಶಿಸಿದೆ. ಇದೀಗ ಏಷ್ಯಾ ಕಪ್ 2023 ರ ಅಂತಿಮ ಪಂದ್ಯವು ಸೆಪ್ಟೆಂಬರ್ 17 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಪಾಕಿಸ್ತಾನ ಅಥವಾ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: ಏಷ್ಯಾಕಪ್ ಫೈನಲ್’ಗೆ ಭಾರತ.. ಸೋಲಿನ ಭೀತಿಯಲ್ಲಿದ್ದ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದೇ ಈ 5 ಟ್ವಿಸ್ಟ್’ಗಳು

ಏಷ್ಯಾಕಪ್‌ ಫೈನಲ್‌ ಪ್ರವೇಶಿಸಿದ ಬಳಿಕ ಮಾತನಾಡಿದ ರೋಹಿತ್, “ಇದೊಂದು ಉತ್ತಮ ಪಂದ್ಯವಾಗಿತ್ತು. ಸವಾಲಿನ ಪಿಚ್‌’ನಲ್ಲಿ ಒತ್ತಡದಲ್ಲಿ ಆಡಿದ್ದು, ಗೆಲುವು ನಮಗೆ ಬಹಳ ಮುಖ್ಯವಾಗಿತ್ತು. ಹಲವು ಅಂಶಗಳಲ್ಲಿ ಸವಾಲನ್ನು ಎದುರಿಸಿದ್ದೇವೆ. ಖಂಡಿತವಾಗಿಯೂ ನಾವು ಇದೇ ರೀತಿಯ ಪಿಚ್‌’ಗಳಲ್ಲಿ ಆಡಲು ಬಯಸುತ್ತೇವೆ. ಭವಿಷ್ಯದಲ್ಲಿ ನಾವು ಏನನ್ನು ಸಾಧಿಸಬಹುದು ಎಂಬುದನ್ನು ನೋಡಲು ನಾವು ಇದೇ ರೀತಿಯ ಪಿಚ್‌’ಗಳಲ್ಲಿ ಆಡಬೇಕು” ಎಂದಿದ್ದಾರೆ.

“ಕಳೆದ ಕೆಲವು ವರ್ಷಗಳಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌’ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಯಶಸ್ಸು ರಾತ್ರೋರಾತ್ರಿ ಆಗುವಂಥದ್ದಲ್ಲ. ಹಾರ್ದಿಕ್ ಪಾಂಡ್ಯ ಪ್ರತಿ ಎಸೆತದಲ್ಲಿ ವಿಕೆಟ್ ಕಬಳಿಸುತ್ತಿರುವಂತೆ ತೋರುತ್ತಿತ್ತು. ಈ ಪಿಚ್‌’ನಲ್ಲಿ ಗುರಿಯನ್ನು ರಕ್ಷಿಸುವುದು ಸುಲಭವಲ್ಲ, ಏಕೆಂದರೆ ಕೊನೆಯಲ್ಲಿ ಪಿಚ್ ಬ್ಯಾಟಿಂಗ್‌’ಗೆ ಸುಲಭವಾಯಿತು. ನಾವು ಸ್ಥಿರವಾಗಿ ಉತ್ತಮವಾಗಿ ಬೌಲಿಂಗ್ ಮಾಡಬೇಕಾಗಿತ್ತು. ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ನಾನು ಭಾವಿಸುತ್ತೇನೆ” ಎಂದರು.

ಮಾತು ಮುಂದುವರೆಸಿದ ರೋಹಿತ್, “ಕಳೆದ ಒಂದು ವರ್ಷದಿಂದ ಕುಲದೀಪ್ ಯಾದವ್ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ತಮ್ಮ ಲಯಕ್ಕೆ ಬರಲು ಶ್ರಮಿಸಿದ್ದಾರೆ. ಕೊನೆಯ 10 ಏಕದಿನ ಪಂದ್ಯಗಳಲ್ಲಿ ಅವರ ಆಟದ ವೈಖರಿಯನ್ನು ನಾವು ನೋಡಬಹುದು” ಎಂದು ಕೊಂಡಾಡಿದ್ದಾರೆ. 

ಇದನ್ನೂ ಓದಿ: Asia Cup 2023: ಶ್ರೀಲಂಕಾ ಮಣಿಸಿ ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ!

ಈ ಆಟಗಾರರ ಬಲದಿಂದ ಗೆದ್ದ ಭಾರತ:

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 213 ರನ್’ಗಳ ಸಾಧಾರಣ ಮೊತ್ತ ಕಲೆಹಾಕಿತು. ಶ್ರೀಲಂಕಾ ಪರ ದುನಿತ್ ವೆಲಾಲಗೆ ಗರಿಷ್ಠ 5 ವಿಕೆಟ್ ಪಡೆದರು. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದ ಪಿಚ್‌’ನಲ್ಲಿ ಶುಭ್ಮನ್ ಗಿಲ್ (19), ವಿರಾಟ್ ಕೊಹ್ಲಿ (3), ರೋಹಿತ್ ಶರ್ಮಾ (53), ಕೆಎಲ್ ರಾಹುಲ್ (39) ಮತ್ತು ಹಾರ್ದಿಕ್ ಪಾಂಡ್ಯ (5) ರನ್ ಗಳಿಸಲಷ್ಟೇ ಶಕ್ತರಾದರು, ಇನ್ನು ಈ ಆರಂಭಿಕ ದಿಗ್ಗಜರನ್ನು ಪೆವಿಲಿಯನ್’ಗೆ ಕಳುಹಿಸಿದ್ದು, 20 ಹರೆಯದ ಸ್ಪಿನ್ನರ್ ದುನಿತ್ ವೆಲಾಲಗೆ. ಇನ್ನು ಭಾರತ ನೀಡಿದ ಗುರಿಯನ್ನು ಬೆನ್ನತ್ತಿದ ಲಂಕಾ, 172 ರನ್‌’ಗಳಿಗೆ ಕುಸಿದಿತ್ತು. ಶ್ರೀಲಂಕಾ ಪರ ದುನಿತ್ ವೆಲಾಲಗೆ ಅಜೇಯ 42 ರನ್ ಗಳಿಸಿದರೆ, ಧನಂಜಯ್ ಡಿ ಸಿಲ್ವಾ 41 ರನ್ ಕಲೆಹಾಕಿದ್ದರು. ಇವರಿಬ್ಬರು 7ನೇ ವಿಕೆಟ್‌’ಗೆ 63 ರನ್‌’ಗಳ ಜೊತೆಯಾಟ ನೀಡಿದರು. ಭಾರತದ ಪರ ಕುಲದೀಪ್ ಯಾದವ್ 4, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2, ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಕಬಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News