27 ಕೋಟಿಯಲ್ಲಿ ರಿಷಬ್ ಪಂತ್ ಕೈ ಸೇರುವ ಹಣ ತೀರಾ ಕಡಿಮೆ..! ಒಂದು ವೇಳೆ ಆಟಕ್ಕೆ ಗೈರಾದ್ರೆ ಸಂಭಾವನೆ ಸಿಗುತ್ತಾ..?
Rishabh Pant : ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ ರಿಷಬ್ ಪಂತ್ ದಾಖಲೆ ಬರೆದಿದ್ದಾರೆ.. ಈ ಕ್ರಿಕೆಟಿಗ ಪಡೆದ ಸಂಭಾವನೆ ಎಷ್ಟು ಗೊತ್ತಾ..? ಅದಕ್ಕೆ ತಗಲುವ ತೆರಿಗೆ ಎಷ್ಟು? ಒಂದು ವೇಳೆ ವೈಯಕ್ತಿಕ ಕಾರಣಗಳಿಂದ ಪಂದ್ಯಗಳನ್ನು ಆಡದಿದ್ದರೆ ಹಣದ ವಿಚಾರ ಹೇಗೆ..? ಬನ್ನಿಇ ಈ ಕುರಿತು ಸಂಪೂರ್ಣ ವಿಚಾರ ತಿಳಿಯೋಣ..
Rishabh Pant in LSG : ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಅತ್ಯಧಿಕ ಬೆಲೆಗೆ ಬಿಡ್ ಮಾಡಿದ್ದು ಗೊತ್ತೇ ಇದೆ. ಪಂತ್ ಅವರನ್ನು 27 ಕೋಟಿಗೆ ಲಕ್ನೋ ಖರೀದಿಸಿದೆ. ಆದರೆ ಈ ಸುದ್ದಿ ತಿಳಿದ ನಂತರ ಹಲವರಿಗೆ ಅನುಮಾನ ಮೂಡಿದೆ. ರಿಷಬ್ ಪಂತ್ ಕೈಗೆ 27 ಕೋಟಿ ಸಿಗುತ್ತಾ ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ.
ವಾಸ್ತವವಾಗಿ, ಪಂತ್ 27 ಕೋಟಿ ರೂ.ಗಳನ್ನು ಪಡೆಯುವುದಿಲ್ಲ, 8.1 ಕೋಟಿ ರೂ. ತೆರಿಕೆ ಕಟ್ ಆಗಿ, 18.9 ಕೋಟಿ ಮಾತ್ರ ಸಿಗಲಿದೆ. ಆದರೆ ಟೂರ್ನಿಗೂ ಮುನ್ನ ಪಂತ್ ಗಾಯಗೊಂಡರೆ ಹಣ ಸಿಗುವುದಿಲ್ಲ. ಅಲ್ಲದೆ ವೈಯಕ್ತಿಕ ಕಾರಣಗಳಿಂದ ಐಪಿಎಲ್ ನಿಂದ ಹಿಂದೆ ಸರಿದರೂ ಹಣ ದೊರೆಯುವುದಿಲ್ಲ. ಪಂದ್ಯಾವಳಿಯ ಮಧ್ಯದಲ್ಲಿ ಗಾಯಗೊಂಡು ಉಳಿದ ಪಂದ್ಯಗಳನ್ನು ತಪ್ಪಿಸಿದರೆ, ಹಣ ನೀಡಲಾಗುತ್ತದೆ. ಭಾರತದ ಪಂದ್ಯಗಳಲ್ಲಿ ಆಡುವಾಗ ಗಾಯಗೊಂಡರೂ ಹಣ ನೀಡಲಾಗುತ್ತದೆ.
ಇದನ್ನೂ ಓದಿ:ಆಸ್ಟ್ರೇಲಿಯಾ ಪ್ರವಾಸದ ಮಧ್ಯೆಯೇ ಟೀಂ ಇಂಡಿಯಾ ತೊರೆದು ಭಾರತಕ್ಕೆ ಬಂದ ಕೋಚ್ ಗೌತಮ್ ಗಂಭೀರ್! ಕಾರಣವೇನು?
ಇತ್ತೀಚೆಗೆ ರಿಷಬ್ ಪಂತ್ ಇನ್‌ಸ್ಟಾಗ್ರಾಮ್‌ನಲ್ಲಿ ಹೃದಯಸ್ಪರ್ಶಿ ಪೋಸ್ಟ್ ಮೂಲಕ ದೆಹಲಿ ಫ್ರಾಂಚೈಸಿಗೆ ವಿದಾಯ ಹೇಳಿದ್ದಾರೆ. ದೆಹಲಿ ಫ್ರಾಂಚೈಸಿ ಜೊತೆಗಿನ 9 ವರ್ಷಗಳ ಪ್ರಯಾಣವನ್ನು ಪಂತ್ ನೆನಪಿಸಿಕೊಂಡಿದ್ದಾರೆ. ಲಕ್ನೋ ಸೂಪರ್‌ಜೈಂಟ್ಸ್‌ಗೆ ಸೇರುವ ಮೊದಲು ಅವರು ಅಭಿಮಾನಿಗಳಿಗೆ ವಿದಾಯ ಹೇಳಿದರು.
ಪಂತ್ 27 ಕೋಟಿ ರೂಪಾಯಿಗೆ ಬಿಡ್ ಆಗಿ ಲಕ್ನೋ ತಂಡ ಸೇರಿಕೊಂಡಿದ್ದಾರೆ. ಮೆಗಾ ಹರಾಜಿನಲ್ಲಿ ಪಂತ್‌ಗಾಗಿ ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಎಲ್‌ಎಸ್‌ಜಿ ಮತ್ತು ಡಿಸಿ ಪೈಪೋಟಿ ನಡೆಸಿದ್ದವು. RCB, LSG ಮತ್ತು SRH ಬಿಡ್ಡಿಂಗ್ ವಾರ್ 20.50 ಕೋಟಿಗೆ ಏರಿತು. ಡೆಲ್ಲಿ ಕೊನೆಯ ಕ್ಷಣದಲ್ಲಿ ಬಿಡ್ ಮಾಡಲು ಬಂತು. ಆದ್ರೆ ಕೊನೆಯಲ್ಲಿ LSG ಯ ದಾಖಲೆಯ ಹರಾಜು ರೂ. 27 ಕೋಟಿಗೆ ಪಂತ್ ಖರೀದಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.