IPL 2024 Tickets Online Booking: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕಳೆದ ವಾರ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಆವೃತ್ತಿಯ ಮೊದಲ ಅರ್ಧ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ವರ್ಷ ಚುನಾವಣೆ ನಡೆಯಲಿರುವುದರಿಂದ ಚುನಾವಣಾ ದಿನಾಂಕಗಳು ಪ್ರಕಟವಾದ ನಂತರ ಉಳಿದ ಸ್ಪರ್ಧೆಗಳ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಅಧಿಸೂಚನೆಯ ಪ್ರಕಾರ, ಐಪಿಎಲ್ 2024ರ ಮೊದಲ ಪಂದ್ಯವು ಮಾರ್ಚ್ 22 ರಂದು ಪ್ರಾರಂಭವಾಗಲಿದ್ದು, ಈ ಲೀಗ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಾಡಲಿದೆ. ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.


ಇದನ್ನೂ ಓದಿ: ಅಕಾಯ್ ಜೊತೆ ಅನುಷ್ಕಾ… ವಾಮಿಕಾ ಜೊತೆ ವಿರಾಟ್: ಲಂಡನ್ ಹೊಟೇಲ್’ನಲ್ಲಿ ಊಟ ಮಾಡುತ್ತಿರುವ ಫೋಟೋ ವೈರಲ್


ಐಪಿಎಲ್ 2024ರ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಪಂದ್ಯಗಳು 10 ಕ್ರೀಡಾಂಗಣಗಳಲ್ಲಿ 17 ದಿನಗಳ ಕಾಲ ನಡೆಯಲಿದ್ದು, ಮಾರ್ಚ್ 22 ರಿಂದ ಏಪ್ರಿಲ್ 7 ರವರೆಗೆ ನಡೆಯಲಿವೆ. ಐಪಿಎಲ್ 2024 ರ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಲೋಕಸಭೆ ಚುನಾವಣೆ ದಿನಾಂಕಗಳನ್ನು ಪ್ರಕಟಿಸಿದ ನಂತರ ಪ್ರಕಟಿಸಲಾಗುತ್ತದೆ. ಇವೆಲ್ಲದರ ಮಧ್ಯೆ, ಮೇ 26ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ.


ಇನ್ನು ಐಪಿಎಲ್ 2024 ಪಂದ್ಯಗಳಿಗೆ ಟಿಕೆಟ್ ಖರೀದಿಸುವುದು ಹೇಗೆ ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನಾವಿಂದ ಇದರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.


ಐಪಿಎಲ್ ಟಿಕೆಟ್‌’ಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಬೇಡಿಕೆ ಇರುತ್ತದೆ. ಅದರಲ್ಲೂ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯುವುದರಿಂದ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮಾರ್ಚ್ 22 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಲಿದ್ದು, ಮಾರ್ಚ್ ಮೊದಲ ವಾರದಿಂದ ಟಿಕೆಟ್ ಮಾರಾಟ ಪ್ರಾರಂಭವಾಗುವ ನಿರೀಕ್ಷೆಯಿದೆ. ಐಪಿಎಲ್ 2024 ರ ಟಿಕೆಟ್ ಮಾರಾಟದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಕಳೆದ ವರ್ಷದಂತೆ, ಅಭಿಮಾನಿಗಳು IPL ವೆಬ್‌ಸೈಟ್ ಅಥವಾ BookMyShow ಪ್ಲಾಟ್‌ಫಾರ್ಮ್‌’ಗಳ ಮೂಲಕ ಬುಕ್ ಮಾಡಲು ಸಾಧ್ಯವಾಗುತ್ತದೆ.


ಇದನ್ನೂ ಓದಿ:  ವಿಶ್ವಕಪ್ ಸಮೀಪಿಸುತ್ತಿದ್ದಂತೆ ಸ್ಟಾರ್ ಕ್ರಿಕೆಟಿಗನಿಂದ ನಿವೃತ್ತಿ ಘೋಷಣೆ: 12 ವರ್ಷಗಳ ದೀರ್ಘ ವೃತ್ತಿಜೀವನಕ್ಕೆ ಫುಲ್ ಸ್ಟಾಪ್


IPL 2024 ಪಂದ್ಯಗಳ ಟಿಕೆಟ್ ಬೆಲೆ:


ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಟಿಕೆಟ್ ಬೆಲೆಗಳನ್ನು ಆಸನದ ಪ್ರಕಾರ, ಪಂದ್ಯದ ಪ್ರಾಮುಖ್ಯತೆ ಮತ್ತು ಸ್ಥಳದಂತಹ ಅಂಶಗಳ ಮೇಲೆ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ, ಟಿಕೆಟ್ ದರವು ಸಾವಿರದಿಂದ ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಅಭಿಮಾನಿಗಳು ತಮ್ಮ ಆದ್ಯತೆಗೆ ಅನುಗುಣವಾಗಿ ಟಿಕೆಟ್ ಬುಕ್ ಮಾಡಬಹುದು. ಆಯಾ ತಂಡಗಳ ಮ್ಯಾನೇಜ್‌ಮೆಂಟ್ ಐಪಿಎಲ್ ಪಂದ್ಯಗಳಿಗೆ ಟಿಕೆಟ್‌’ಗಳ ಮಾರಾಟವನ್ನು ಒಪ್ಪಿಕೊಳ್ಳುತ್ತದೆ. ಎಷ್ಟು ಟಿಕೆಟ್‌ಗಳನ್ನು ಮತ್ತು ಯಾವ ಬೆಲೆಗೆ ಮಾರಾಟ ಮಾಡಬೇಕೆಂದು ಅವರು ನಿರ್ಧರಿಸುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.