Rishabh Pant price in IPL Auction 2025 : ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ರಿಷಬ್ ಪಂತ್ ಅವರನ್ನು 27 ಕೋಟಿಗೆ ಖರೀದಿಸಿದೆ. ಕೇವಲ 15 ನಿಮಿಷಗಳಲ್ಲಿ ಪಂತ್ ಅವರು ಶ್ರೇಯಸ್ ಅಯ್ಯರ್ ಅವರ 26.75 ಕೋಟಿ ರೂಪಾಯಿಗಳ ದಾಖಲೆಯನ್ನು ಮುರಿದು,  ಐಪಿಎಲ್ 2025ರ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  


COMMERCIAL BREAK
SCROLL TO CONTINUE READING

ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ ರೀತಿ ಮೆಚ್ಚುವಂಥದ್ದು. ಒಂದು ಕಾಲದಲ್ಲಿ ಕ್ರಿಕೆಟ್‌ಗಾಗಿ ಗುರುದ್ವಾರದಲ್ಲಿ ಮಲಗಿದ್ದ ರಿಷಬ್ ಪಂತ್ ಇಂದು ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. 


ಇದನ್ನೂ ಓದಿ :  IND vs AUS: ವಿಶ್ವ ದಾಖಲೆ ಬರೆದ ರಿಷಬ್‌ ಪಂತ್‌..! ಈ ಸಾಧನೆ ಮಾಡಿದ ಮೊದಲ ವಿಕೆಟ್‌ ಕೀಪರ್‌ ಟೀಂ ಇಂಡಿಯಾದ ಆಟಗಾರ


ರಿಷಬ್ ಪಂತ್ ಆಸ್ತಿ  : 
ಉತ್ತರಾಖಂಡದ ರೂರ್ಕಿಯಲ್ಲಿ ಜನಿಸಿದ ರಿಷಬ್ ಪಂತ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಅತ್ಯುತ್ತಮ ವಿಕೆಟ್ ಕೀಪಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.  ಐಷಾರಾಮಿ ಮನೆ,ಐಷಾರಾಮಿ ಕಾರುಗಳ ಒಡೆಯ ಪಂತ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆ.  


ಪಂತ್ 100 ಕೋಟಿ ರೂ.ಗಳ ಮಾಲೀಕ :  
ವರದಿಗಳ ಪ್ರಕಾರ, 2024ರ ವೇಳೆಗೆ ಪಂತ್ ಒಟ್ಟು ಆಸ್ತಿ ಸುಮಾರು 100 ಕೋಟಿ ರೂ.  ಐಪಿಎಲ್-2025ರಲ್ಲಿ 27 ಕೋಟಿಗೆ ಮಾರಾಟವಾದ ಪಂತ್ ಆಸ್ತಿ ಈಗ 127 ಕೋಟಿಗೆ ಏರಿಕೆಯಾಗಿದೆ.ಅವರ ಆದಾಯದ ಮುಖ್ಯ ಮೂಲವೆಂದರೆ ಕ್ರಿಕೆಟ್.


ಒಬ್ಬ ವ್ಯಕ್ತಿಯು ಎಲ್ಲಿ ಎಷ್ಟು ಹಣವನ್ನು ಗಳಿಸುತ್ತಾನೆ?  :
ಪಂತ್, ಬಿಸಿಸಿಐನಿಂದ ಪ್ರತಿ ವರ್ಷ 3 ಕೋಟಿ ರೂ. ಆದಾಯ ಗಳಿಸುತ್ತಾರೆ. ಇದರಲ್ಲಿ  ಟೆಸ್ಟ್ ಪಂದ್ಯ ಆಡಲು ಅವರು ಪಡೆಯುವ ಮೊತ್ತ 15 ಲಕ್ಷ ರೂ. ಏಕದಿನ ಪಂದ್ಯಕ್ಕೆ ಪಡೆಯುವ ಮೊತ್ತ 6 ಲಕ್ಷ ರೂ. ಟಿ20 ಪಂದ್ಯಕ್ಕೆ ಪಡೆಯುವ ಆದಾಯ 3 ಲಕ್ಷ ರೂ. ಇದಲ್ಲದೆ, ಅಡಿಡಾಸ್, JSW, Dream11, Realme, Cadbury ಮತ್ತು Zomato ನಂತಹ ದೊಡ್ಡ ಬ್ರ್ಯಾಂಡ್‌ಗಳ ಪ್ರಚಾರಗಳನ್ನು ಹೊಂದಿದ್ದಾರೆ.  


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಕೋಟ್ಯಂತರ ಮೌಲ್ಯದ ಮನೆ, ಐಷಾರಾಮಿ ಕಾರು :   
ರಿಷಬ್ ಪಂತ್ ದೆಹಲಿ ಮತ್ತು ರೂರ್ಕಿಯಲ್ಲಿ ಎರಡು ಮನೆಗಳನ್ನು ಹೊಂದಿದ್ದಾರೆ.  ಇದರ ಮೌಲ್ಯ 2 ರಿಂದ 3 ಕೋಟಿ ಎಂದು ಅಂದಾಜಿಸಲಾಗಿದೆ. ಇದಲ್ಲದೇ ಇನ್ನೂ ಅನೇಕ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಕಾರಿನ ಹೊರತಾಗಿ ಆಡಿ A8, Ford Mustang ಮತ್ತು Mercedes Benz GLE ನಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ