ನವದೆಹಲಿ:ಉದ್ದಿಪನ ಮದ್ದು ಪರೀಕ್ಷೆಯಲ್ಲಿ ನಡೆಯುತ್ತಿರುವ ತಾರತಮ್ಯದ ಬಗ್ಗೆ ತಮ್ಮನ್ನು ಬಲಿಪಶು ಮಾಡಲಾಗಿದೆ ಎಂದು ಸೆರೆನಾ ವಿಲಿಯಮ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

23 ಬಾರಿ ಗ್ರ್ಯಾ೦ಡ್ ಸ್ಲಾಮ್  ಗೆದ್ದಿರುವ ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅಮೆರಿಕಾದ ಉದ್ದೀಪನ ಮದ್ದು ಪರೀಕ್ಷಾ ಸಂಸ್ಥೆಯು ತಮ್ಮನ್ನು ಈ ವರ್ಷ ಹಲವಾರು ಬಾರಿ ಪರೀಕ್ಷೆಗೆ ಒಳಪಡಿಸಿದ್ದಕ್ಕೆ ಸಂಸ್ಥೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.



ಮಂಗಳವಾರದಂದು ಉದ್ದಿಪನ ಮದ್ದು ಅಧಿಕಾರಗಳು ಮಂಗಳವಾರದಂದು ಮತ್ತೆ ಭೇಟಿಯಾದ ನಂತರ ಟ್ವೀಟ್ ಮಾಡಿರುವ ಸೆರೆನಾ ವಿಲಿಯಮ್ಸ್ " ಎಲ್ಲ ಆಟಗಾರರಲ್ಲಿ  ನನಗೆ ಅಧಿಕವಾಗಿ ಪರೀಕ್ಷೆ ನಡೆಸಲಾಗಿದೆ. ಇದು ತಾರತಮ್ಯ ಅಂತಾ ಅನಿಸುತ್ತದೆ ಇದರ ಮೂಲಕವಾದರ ನಾನು ಕ್ರೀಡೆಯನ್ನು ಪಾರದರ್ಶಕವಾಗಿಡುತ್ತಿದ್ದೇನೆ" ಎಂದು ಅವರು ತಿಳಿಸಿದರು.


ಸೆರೆನಾ ವಿಲಿಯಮ್ಸ್ 10 ತಿಂಗಳ ಹಿಂದೆ ಒಲಂಪಿಯಾ ಎನ್ನುವ  ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು ಈಗ ಮತ್ತೆ ಸಕ್ರೀಯವಾಗಿ ಟೆನಿಸ್ ಗೆ ಬರುತ್ತಿದ್ದಾರೆ ಈ ತಿಂಗಳ ಡಬ್ಲ್ಯೂಟಿಓ  ರ್ಯಾಂಕ್ ನಲ್ಲಿ 30ನೆ ಸ್ಥಾನವನ್ನು ಪಡೆದಿದ್ದಳು.