ನವದೆಹಲಿ: ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ 2022 ಮೆಗಾ ಹರಾಜಿನ ಮೊದಲು ಬಿಡುಗಡೆಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರರಲ್ಲಿ ಯುಜ್ವೇಂದ್ರ ಚಹಾಲ್ ಕೂಡ ಒಬ್ಬರಾಗಿದ್ದಾರೆ.


COMMERCIAL BREAK
SCROLL TO CONTINUE READING

ಚಹಾಲ್ ಐಪಿಎಲ್ 2014 ರಿಂದ ಐಪಿಎಲ್ 2021 ರವರೆಗೆ  ಆರ್ಸಿಬಿಗಾಗಿ ಆಡಿದ್ದಾರೆ.ಈ ಅವಧಿಯಲ್ಲಿ ಅವರು 139 ವಿಕೆಟ್ ಗಳನ್ನು ಪಡೆದಿದ್ದಾರೆ.ಆ ಮೂಲಕ ಬೆಂಗಳೂರು ಪರವಾಗಿ ಅತಿ ಹೆಚ್ಚು ವಿಕೆಟ್ ಗಳನ್ನು ಪಡೆದ ಬೌಲರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಇದನ್ನೂ ಓದಿ- WATCH: ಫೋಟೋ ತೆಗೆಯುತ್ತಿದ್ದವರ ಮೇಲೆ ಅಟ್ಯಾಕ್ ಮಾಡಿದ ಘೇಂಡಾಮೃಗ


ಇದೆ ವೇಳೆ ಅವರು ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಶೋ "ಡಿಆರ್ಎಸ್ ವಿತ್ ಆಶ್" ಜೊತೆಗಿನ ಸಂವಾದದಲ್ಲಿ ಮಾತನಾಡುತ್ತಾ ತಾವು ಆರ್ಸಿಬಿ ಜೊತೆಗೆ ಉಳಿಯುವ ಅಭಿಪ್ರಾಯ ವ್ಯಕ್ತಪಡಿಸುವುದರ ಜೊತೆಗೆ ಇನ್ನೂಳಿದ ತಂಡಗಳ ಜೊತೆಗೆ ಸೇರುವುದಕ್ಕ್ಕೂಸಿದ್ಧ ಎಂದು ಹೇಳಿದರು.


"ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಇಲ್ಲದಿರುವ ಕಾರಣ ನಾನು ಎಲ್ಲಿಯಾದರೂ ಹೋಗಬಹುದೆಂದು ನನಗೆ ಮೊದಲ ಬಾರಿಗೆ ಅನಿಸುತ್ತಿದೆ. ಕಳೆದ ಬಾರಿ (2018) ಆರ್‌ಟಿಎಂ ಲಭ್ಯವಿತ್ತು ಮತ್ತು ಆರ್‌ಟಿಎಂ ಬಳಸಿ ನನ್ನನ್ನು ಖರೀದಿಸುವುದಾಗಿ ಅವರು (ಆರ್‌ಸಿಬಿ) ನನಗೆ ಸ್ಪಷ್ಟವಾಗಿ ಹೇಳಿದ್ದರು. ಹರಾಜಿನಲ್ಲಿ ಏನೇ ಇರಲಿ... ಆದರೆ ಈ ಬಾರಿ ಗಂಭೀರವಾಗಿ, ವೃತ್ತಿಪರ ಆಟಗಾರನಾಗಿ ನಾನು ಯಾವುದೇ ತಂಡಕ್ಕೆ ಹೋಗಲು ಸಿದ್ಧನಿದ್ದೇನೆ" ಎಂದು ಚಹಾಲ್ ಹೇಳಿದರು.


ಇದನ್ನೂ ಓದಿ-Virat Kohli : ನಾಯಕತ್ವ ತೊರೆದ ಬಳಿಕ ಟೀಂನಲ್ಲಿ ಕೊಹ್ಲಿ ಈ ಪಾತ್ರವೇನು? ಧೋನಿಗೂ ಈ ಜವಾಬ್ದಾರಿ ಇದೆ! 


"ನಿಸ್ಸಂಶಯವಾಗಿ, ನಾನು  ಆರ್ಸಿಬಿಗೆ ಹೋಗಲು ಬಯಸುತ್ತೇನೆ, ಏಕೆಂದರೆ ನಾನು ಅಲ್ಲಿ 8 ವರ್ಷಗಳಿಂದ ಇದ್ದೇನೆ ಆದರೆ ನಾನು ಬೇರೆಡೆಗೆ ಹೋದರೆ ನನಗೆ ಕೆಟ್ಟ ಭಾವನೆ ಉಂಟಾಗುತ್ತದೆ ಏಕೆಂದರೆ ಪ್ರತಿಯೊಬ್ಬರೂ ಹೊಸ ತಂಡವನ್ನು ಮಾಡಬೇಕಾಗಿದೆ ಮತ್ತು ಇದು ಯಾವಾಗಲೂ ಪರ್ಸ್ ನಿರ್ಬಂಧಗಳಿರುವ ಪ್ರಮುಖ ಹರಾಜಾಗಿದೆ... ಯಾವುದೇ ತಂಡ ನನ್ನನ್ನು ತೆಗೆದುಕೊಂಡರೂ, ನಾನು ನನ್ನ 100% ರಷ್ಟು ಶ್ರಮವನ್ನು ಹಾಕುತ್ತಲೇ ಇರುತ್ತೇನೆ. ಹೊಸ ಫ್ರಾಂಚೈಸಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.ಆದರೆ ಅದಕ್ಕಾಗಿಯೇ ನಾವು ನಮ್ಮನ್ನು ವೃತ್ತಿಪರ ಆಟಗಾರರು ಎಂದು ಕರೆಯುತ್ತೇವೆ," ಎಂದು ಅವರು ಹೇಳಿದರು.


ಇದನ್ನೂ ಓದಿ : IND vs WI :ಕೆಎಲ್ ರಾಹುಲ್ ನಾಯಕತ್ವದಿಂದ ಕೆಳಗಿಳಿದರೆ ಈ ಆಟಗಾರನ ವೃತ್ತಿಜೀವನ ಅಂತ್ಯ!


 ಇದೇ ವೇಳೆ ಐಪಿಎಲ್ 2022 ರ ಹರಾಜಿನಲ್ಲಿ ಅವರು ಸಹಿ ಹಾಕಲು ಬಯಸುತ್ತಿರುವ ಮೊತ್ತದ ಬಗ್ಗೆ 31 ವರ್ಷದ ಚಹಾಲ್ ಅವರನ್ನು ಅಶ್ವಿನ್ ಕೇಳಿದಾಗ, ಇದಕ್ಕೆ ಉತ್ತರಿಸಿದ ಚಹಾಲ್, "ನನಗೆ 15 ಕೋಟಿ ಅಥವಾ 17 ಕೋಟಿ ಬೇಕು ಎಂದು ನಾನು ಹೇಳಲು ಬಯಸುವುದಿಲ್ಲ. ನಿಮಗೆ ಗೊತ್ತಾ, ನನಗೆ 8 ಕೋಟಿ ಸಾಕು!" ಎಂದು ಅವರು ಹೇಳಿದರು.


ಚಹಲ್ ಐಪಿಎಲ್ ಇತಿಹಾಸದಲ್ಲಿ 114 ಪಂದ್ಯಗಳಿಂದ 22.28 ಸರಾಸರಿಯಲ್ಲಿ 139 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಒಂಬತ್ತನೇ ಸ್ಥಾನದಲ್ಲಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.