ನವದೆಹಲಿ: ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಆಗಸ್ಟ್ 15, 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದಾಗ ಎಲ್ಲರನ್ನು ದಿಗ್ಭ್ರಮೆಗೊಳಿಸಿದರು ಮತ್ತು ಧೋನಿಯ ಘೋಷಣೆಯ ಸುಮಾರು ಅರ್ಧ ಘಂಟೆಯ ನಂತರ ಮತ್ತೊಬ್ಬ ಭಾರತದ ಸ್ಟಾರ್ ಸುರೇಶ್ ರೈನಾ ಕೂಡ ತಮ್ಮ ನಿವೃತ್ತಿ ಘೋಷಿಸಿದರು.ಈ ನಿರ್ಧಾರಕ್ಕೆ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಉಂಡ ಮನೆಯ ಗಳ ಇರಿಯುವ ಜಮೀರ್ ಅಹ್ಮದ್: ಜೆಡಿಎಸ್ ಆಕ್ರೋಶ


ರೈನಾ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಎರಡು ವರ್ಷಗಳು ಕಳೆದಿವೆ, ಈಗ ಸ್ಪೋರ್ಟ್ಸ್ ತಕ್‌ಗೆ ನೀಡಿದ ಸಂದರ್ಶನದಲ್ಲಿ ರೈನಾ, “ನಾವು ಒಟ್ಟಿಗೆ ಅನೇಕ ಪಂದ್ಯಗಳನ್ನು ಆಡಿದ್ದೇವೆ. ಭಾರತಕ್ಕಾಗಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಗಾಗಿ ಅವರೊಂದಿಗೆ ಆಡಲು ನಾನು ಅದೃಷ್ಟಶಾಲಿಯಾಗಿದ್ದೆ.ನಮಗೆ ತುಂಬಾ ಪ್ರೀತಿ ಸಿಕ್ಕಿತು. ನಾನು ಗಾಜಿಯಾಬಾದ್‌ನಿಂದ ಬಂದಿದ್ದೇನೆ, ಧೋನಿ ರಾಂಚಿಯಿಂದ ಬಂದಿದ್ದರು. ನಾನು ಎಂಎಸ್ ಧೋನಿ ಪರ ಆಡಿದ್ದೆ, ನಂತರ ದೇಶಕ್ಕಾಗಿ ಆಡಿದ್ದೇನೆ. ಅದೇ ನಮ್ಮಿಬ್ಬರ ನಂಟು, ನಾವು ಅನೇಕ ಫೈನಲ್ ಪಂದ್ಯಗಳನ್ನು ಆಡಿದ್ದೇವೆ ಮತ್ತು ವಿಶ್ವಕಪ್ ಗೆದ್ದಿದ್ದೇವೆ.ಅವರೊಬ್ಬ ಮಹಾನ್ ನಾಯಕ ಮತ್ತು ಶ್ರೇಷ್ಠ ವ್ಯಕ್ತಿ ಎಂದು ರೈನಾ ಧೋನಿ ಅವರನ್ನು ಕೊಂಡಾಡಿದ್ದಾರೆ.


ಇದನ್ನೂ ಓದಿ: “ಮುಸ್ಲಿಂ ಸಮುದಾಯಕ್ಕೆ ಜಮೀರ್ ಗಿಂತ ದೊಡ್ಡ ಶತ್ರು ಬೇರೆ ಯಾರೂ ಇಲ್ಲ”- ಎಚ್.ಡಿ.ಕುಮಾರಸ್ವಾಮಿ


ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ರೈನಾ ಐಪಿಎಲ್ 2021 ರಲ್ಲಿ ಆಡಿದರು ಆದರೆ ನಂತರ ಅವರು ಐಪಿಎಲ್‌ನಿಂದಲೂ ನಿವೃತ್ತರಾಗಲು ನಿರ್ಧರಿಸಿದರು. ರೈನಾ 2011 ರ ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಉತ್ತಮ ಪ್ರದರ್ಶನ ನೀಡಿದರು ಮತ್ತು ತಂಡದ ಗೆಲುವಿನಲ್ಲಿ ಕೆಲವು ಮಹತ್ವದ ಪಾತ್ರವನ್ನು ವಹಿಸಿದರು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ರೈನಾ, 18 ಟೆಸ್ಟ್‌ಗಳು, 226 ಏಕದಿನ ಪಂದ್ಯಗಳು ಮತ್ತು 78 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.