ನವದೆಹಲಿ: 2010 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ತೆಂಡೂಲ್ಕರ್ ತಮ್ಮ ಚೊಚ್ಚಲ ಏಕದಿನ ದ್ವಿಶತಕ ಬಾರಿಸಿದರು ಆದರೆ ವೇಗದ ಬೌಲರ್ ಡೇಲ್ ಸ್ಟೇನ್ ಅವರು ಸಚಿನ್ 190 ರನ್ ಗಳಿಸಿದ ಸಂದರ್ಭದಲ್ಲಿ ಅಂಪೈರ್ ಔಟ್ ಕೊಡಲಿಲ್ಲ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

'ಸಚಿನ್ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಡಬಲ್ ಸೆಂಚುರಿ ಗಳಿಸಿದರು, ಮತ್ತು ಇದು ಗ್ವಾಲಿಯರ್‌ನಲ್ಲಿ ನಮ್ಮ ವಿರುದ್ಧವಾಗಿತ್ತು. ಮತ್ತು ನಾನು ನಿಜವಾಗಿ ನೆನಪಿದೆ - ಸಚಿನ್ ಸುಮಾರು 190 ರನ್ ಗಳಿಸಿದ್ದಾಗ ನಾನು ಅವನನ್ನು ಎಲ್ಬಿಡಬ್ಲ್ಯೂನಿಂದ ಹೊರಹಾಕಿದೆ. ಆಗ ಇಯಾನ್ ಗೌಲ್ಡ್ ಅಂಪೈರ್ ಆಗಿದ್ದರು, ಮತ್ತು ಅವರು ನಾಟ್ ಔಟ್ ನೀಡಿದರು, ”ಎಂದು ಜೇಮ್ಸ್ ಆಂಡರ್ಸನ್ ಅವರೊಂದಿಗೆ ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಪಾಡ್ಕ್ಯಾಸ್ಟ್ ಸಮಯದಲ್ಲಿ ಡೇಲ್ ಸ್ಟೈನ್ ಹೇಳಿದರು.


ಇದಾದ ನಂತರ ಡೇಲ್ ಸ್ಟೆನ್  ಅಂಪೈರ್ ಇಯಾನ್ ಗೌಲ್ಡ್ ಗೆ ನೀವು ಯಾಕೆ ಔಟ್ ಕೊಡಲಿಲ್ಲ ಎಂದು ಕೇಳಿದಾಗ, ಅದಕ್ಕೆ ಅವರು ಸುತ್ತಲೂ ನೋಡಿ ನಾನು ಔಟ್ ಕೊಟ್ಟರೆ ನಾನು ಹೋಟೆಲ್‌ಗೆ ಹಿಂತಿರುಗುವುದಿಲ್ಲ' ಎಂದು ಹೇಳಿದರು'  ಎಂದು ಅವರು ಸ್ಮರಿಸಿಕೊಂಡರು. ಫೆಬ್ರವರಿ 24 ರಂದು ಗ್ವಾಲಿಯರ್‌ನಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಸಚಿನ್ ಕ್ರಿಕೆಟ್ ಇತಿಹಾಸದಲ್ಲಿ ಏಕದಿನ ದ್ವಿಶತಕ ಗಳಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.