ದುಬೈ: ICC T20 Rules - ಟಿ20 ಕ್ರಿಕೆಟ್‌ನಲ್ಲಿ (T20 Cricket) ನಿಧಾನಗತಿಯ ಓವರ್‌ರೇಟ್‌ಗೆ ಕಠಿಣ ಶಿಕ್ಷೆ ವಿಧಿಸಲಾಗುವುದು, ನಿಗದಿತ ಸಮಯದೊಳಗೆ ಓವರ್‌ಗಳನ್ನು ಪೂರ್ಣಗೊಳಿಸದ ತಂಡವು 30 ಯಾರ್ಡ್‌ಗಳ ವೃತ್ತದ ಹೊರಗೆ ಒಬ್ಬ ಫೀಲ್ಡರ್ ಅನ್ನು ಕಡಿಮೆ ಇರಿಸಬೇಕಾಗುತ್ತದೆ ಎಂದು ಐಸಿಸಿ ಘೋಷಿಸಿದೆ. ಈ ತಿಂಗಳಿನಿಂದ ಈ ನಿಯಮ ಅನ್ವಯವಾಗಲಿದೆ. ICCಯು ಪರಿಷ್ಕೃತ ನಿಯಮಗಳು ಮತ್ತು ಆಟದ ಷರತ್ತುಗಳ ಅಡಿಯಲ್ಲಿ ದ್ವಿಪಕ್ಷೀಯ T20 ಅಂತರಾಷ್ಟ್ರೀಯ (T20 International) ಕ್ರಿಕೆಟ್ ಪಂದ್ಯಗಳಲ್ಲಿ ಇನ್ನಿಂಗ್ಸ್‌ಗಳ ನಡುವೆ ಐಚ್ಛಿಕ ಪಾನೀಯ ವಿರಾಮಗಳನ್ನು ಕೂಡ ಸೇರಿಸಿದೆ.


COMMERCIAL BREAK
SCROLL TO CONTINUE READING

ಐಸಿಸಿ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ
ಆಟಗಾರರು ಮತ್ತು ಬೆಂಬಲ ಸಿಬ್ಬಂದಿಗೆ ICC ನೀತಿ ಸಂಹಿತೆಯ ಸೆಕ್ಷನ್ 2.22 ರ ಅಡಿಯಲ್ಲಿ ನಿಧಾನಗತಿಯ ಓವರ್-ರೇಟ್‌ಗಳಿಗೆ ICC ನಿಬಂಧನೆಗಳು ಯಥಾಸ್ಥಿತಿಯಲ್ಲಿರಲಿವೆ. ಇದು ಡಿಮೆರಿಟ್ ಅಂಕಗಳು ಮತ್ತು ತಂಡ ಮತ್ತು ನಾಯಕನ ಮೇಲೆ ವಿತ್ತೀಯ ದಂಡವನ್ನು ಒಳಗೊಂಡಿರುತ್ತದೆ. "ಆಟದ ನಿಯಮಗಳು ಮತ್ತು ಷರತ್ತುಗಳ ವಿಭಾಗ 13.8ರಲ್ಲಿ  ಓವರ್-ರೇಟ್‌ನ ನಿಯಮಗಳನ್ನು ಒಳಗೊಂಡಿದೆ, ಇದರ ಅಡಿಯಲ್ಲಿ ಫೀಲ್ಡಿಂಗ್ ತಂಡವು ಕೊನೆಯ ಓವರ್‌ನ ಮೊದಲ ಚೆಂಡನ್ನು ನಿಗದಿತ ಸಮಯದೊಳಗೆ ಬೌಲ್ ಮಾಡಬೇಕು" ಎಂದು ಐಸಿಸಿ ಹೇಳಿದೆ. ಹಾಗೆ ಮಾಡಲು ವಿಫಲವಾದರೆ ಇನ್ನಿಂಗ್ಸ್‌ನ ಉಳಿದ ಭಾಗದಲ್ಲಿ 30-ಯಾರ್ಡ್ ವೃತ್ತದ ಹೊರಗೆ ಒಬ್ಬ ಕಡಿಮೆ ಫೀಲ್ಡರ್ ಇರಲಿದ್ದಾನೆ. 


ಇದನ್ನೂ ಓದಿ-IND vs SA : ಟೀಂ ಇಂಡಿಯಾದ ಈ ಆಟಗಾರ ಮುಂದಿನ ಟೆಸ್ಟ್‌ನಿಂದ ಔಟ್! ಸುಳಿವು ನೀಡಿದ ರಾಹುಲ್


ಹೊಸ ಫೀಲ್ಡಿಂಗ್ ನಿಯಮಗಳು ಹೀಗಿರುತ್ತವೆ
ಸಾಮಾನ್ಯವಾಗಿ ಮೊದಲ ಆರು ಓವರ್‌ಗಳ ನಂತರ ಐವರು ಫೀಲ್ಡರ್‌ಗಳನ್ನು 30 ಯಾರ್ಡ್‌ಗಳ ಹೊರಗೆ ಇರಿಸಬಹುದು. ಓವರ್ ಸ್ಪೀಡ್ ನಿಯಮ ಪಾಲಿಸದಿದ್ದರೆ ನಾಲ್ವರು ಫೀಲ್ಡರ್ ಗಳನ್ನು ಮಾತ್ರ ಇರಿಸುವ ಅಧಿಕಾರ ಕ್ಯಾಪ್ಟನ್ ಗೆ ಇರಲಿದೆ. ಬೌಲರ್‌ ಎಂಡ್ ನಲ್ಲಿ ಅಂಪೈರ್ ಫೀಲ್ಡಿಂಗ್ ತಂಡ, ಬ್ಯಾಟ್ಸ್‌ಮನ್ ಮತ್ತು ಇತರ ಅಂಪೈರ್‌ಗೆ ಇನ್ನಿಂಗ್ಸ್‌ನ ಪ್ರಾರಂಭದ ಮೊದಲು ನಿಗದಿತ ಸಮಯವನ್ನು ಮತ್ತು ಯಾವುದೇ ಹಸ್ತಕ್ಷೇಪದ ಸಂದರ್ಭದಲ್ಲಿ ಹೊಸ ಸಮಯವನ್ನು ತಿಳಿಸಲಿದ್ದಾರೆ. 


ಇದನ್ನೂ ಓದಿ-IPL 2022 Mega Auction : ಹಾರ್ದಿಕ್ ಪಾಂಡ್ಯನನ್ನ ಮುಂಬೈ ಇಂಡಿಯನ್ಸ್ ಏಕೆ ಉಳಿಸಿಕೊಳ್ಳಲಿಲ್ಲ? ಹಿಂದಿನ ಕಾರಣ ಬಹಿರಂಗ


ಎರಡೂವರೆ ನಿಮಿಷಗಳ ಪಾನೀಯಗಳ ವಿರಾಮದ ಅವಕಾಶ
ICC ಯ ಕ್ರಿಕೆಟ್ ಸಮಿತಿಯು ಈ ಬದಲಾವಣೆಯನ್ನು ಶಿಫಾರಸು ಮಾಡಿದೆ, ಇದು ಸ್ವರೂಪಗಳಾದ್ಯಂತ ಆಟದ ವೇಗವನ್ನು ಕಾಪಾಡಿಕೊಳ್ಳುವ ವಿಧಾನಗಳನ್ನು ಪರಿಶೀಲಿಸುವುದನ್ನು ಮುಂದುವರೆಸಿದೆ. ಇದರೊಂದಿಗೆ, ಇನ್ನಿಂಗ್ಸ್ ನಡುವೆ ಎರಡೂವರೆ ನಿಮಿಷಗಳ ಪರ್ಯಾಯ ಪಾನೀಯಗಳ ವಿರಾಮದ ಅವಕಾಶವೂ ಇದೆ. ಆದರೆ, ಪ್ರತಿ ಸರಣಿಯ ಪ್ರಾರಂಭದ ಮೊದಲು ಸದಸ್ಯರ ನಡುವೆ ಇದಕ್ಕೆ ಸಂಬಂಧಿಸಿದಂತೆ ಒಪ್ಪಂದ ಮೂಡಬೇಕು. ಹೊಸ ನಿಯಮಗಳ ಪ್ರಕಾರ, ಜನವರಿ 16 ರಂದು ಸಬಿನಾ ಪಾರ್ಕ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಇದೇ ವೇಳೆ  ಮಹಿಳೆಯರ ವಿಭಾಗದ ಮೊದಲ ಪಂದ್ಯವು ಜನವರಿ 18 ರಂದು ಸೆಂಚೂರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿದೆ.


ಇದನ್ನೂ ಓದಿ-ವಿದ್ಯಾ ಬಾಲನ್ ಅವರನ್ನು ತುಂಬಾ ಪ್ರೀತಿಸುತ್ತಾರಂತೆ ಈ ಭಾರತೀಯ ಕ್ರಿಕೆಟಿಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.