Cricket News: Corona ಹಿನ್ನೆಲೆ 2021-22ರ ಸೀಜನ್ ನ ಒಟ್ಟು ಮೂರು ಟೂರ್ನಿಗಳನ್ನು ರದ್ದುಗೊಳಿಸಿದ BCCI

Cricket News: 2022 ರ ರಣಜಿ ಟ್ರೋಫಿ (Ranji Trophy) ಪ್ರಾರಂಭವಾಗುವ ಮೊದಲೇ ಅದನ್ನು ಮುಂದೂಡಲಾಗಿದೆ. ಹಲವಾರು ಆಟಗಾರರು ಕೊರೊನಾ (Covid-19) ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲಾಗಿದೆ. 

Written by - Nitin Tabib | Last Updated : Jan 4, 2022, 10:28 PM IST
  • ಕೊರೊನಾ ಹಿನ್ನೆಲೆ ಒಟ್ಟು 3 ಪಂದ್ಯಾವಳಿಗಳನ್ನು ಮುಂದೂಡಿದ BCCI
  • ರಣಜಿ ಟ್ರೋಫಿ ಜನವರಿ 13 ರಂದು ಪ್ರಾರಂಭವಾಗಬೇಕಿತ್ತು.
  • ಸಿನಿಯರ್ ಮಹಿಳಾ ಟಿ20 ಲೀಗ್ ಫೆಬ್ರುವರಿಯಲ್ಲಿ ಆರಂಭವಾಗಬೇಕಿತ್ತು.
Cricket News: Corona ಹಿನ್ನೆಲೆ 2021-22ರ ಸೀಜನ್ ನ ಒಟ್ಟು ಮೂರು ಟೂರ್ನಿಗಳನ್ನು ರದ್ದುಗೊಳಿಸಿದ BCCI title=
Cricket News (File Photo)

Cricket News: 2022 ರ ರಣಜಿ ಟ್ರೋಫಿ (Ranji Trophy) ಪ್ರಾರಂಭವಾಗುವ ಮೊದಲೇ ಅದನ್ನು ಮುಂದೂಡಲಾಗಿದೆ. ಹಲವಾರು ಆಟಗಾರರು ಕೊರೊನಾ (Covid-19) ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲಾಗಿದೆ. ಹೀಗಾಗಿ ರಣಜಿ ಟ್ರೋಫಿ  ಜನವರಿ 13 ರಿಂದ ಪ್ರಾರಂಭವಾಗುವುದಿಲ್ಲ. ಬಿಸಿಸಿಐ (BCCI) ತಕ್ಷಣವೇ ಜಾರಿಗೆ ಬರುವಂತೆ ರಣಜಿ ಟ್ರೋಫಿ ಸೇರಿದಂತೆ ಎಲ್ಲಾ ದೇಶೀಯ ಪಂದ್ಯಾವಳಿಗಳನ್ನು ಸ್ಥಗಿತಗೊಳಿಸಿದೆ. ಆದರೂ ಕೂಡ ನಿಗದಿತ ವೇಳಾಪಟ್ಟಿಯಂತೆ ಕೂಚ್ ಬಿಹಾರ್ ಅಂಡರ್ -19 ನಾಕ್ ಔಟ್ ಪಂದ್ಯಗಳನ್ನು ಮುಂದುವರಿಸಲು ಮಂಡಳಿ ನಿರ್ಧರಿಸಿದೆ.

ಇದನ್ನೂ ಓದಿ-Cricket News: ಭಾರತದ ಮಾಜಿ ಕ್ರಿಕೆಟಿಗ ಜಡೇಜಾ ನಿಧನ, ಕೊರೊನಾದಿಂದ ಸಾವು, ಶೋಕಸಾಗರದಲ್ಲಿ ಕ್ರಿಕೆಟ್ ಜಗತ್ತು

ದೇಶದಲ್ಲಿ ಕೋವಿಡ್-19 ಪ್ರಕರಣಗಳು (Covid-19 Cases In India) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2021-22ರ ಋತುವಿನ ರಣಜಿ ಟ್ರೋಫಿ, ಕರ್ನಲ್ ಸಿಕೆ ನಾಯುಡು (Colonel CK Naidu Trophy) ಟ್ರೋಫಿ ಮತ್ತು ಸೀನಿಯರ್ ಮಹಿಳಾ ಟಿ20 ಲೀಗ್ (Senior Women T20 League) ಅನ್ನು ಮುಂದೂಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಬಿಡುಗಡೆ ಮಾಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ರಣಜಿ ಟ್ರೋಫಿ ಮತ್ತು ಕರ್ನಲ್ ಸಿಕೆ ನಾಯುಡು ಟ್ರೋಫಿ ಈ ತಿಂಗಳು ಪ್ರಾರಂಭವಾಗಬೇಕಿತ್ತು, ಆದರೆ ಸೀನಿಯರ್ ಮಹಿಳಾ ಟಿ20 ಲೀಗ್ ಫೆಬ್ರವರಿಯಲ್ಲಿ ಪ್ರಾರಂಭವಾಗಬೇಕಿತ್ತು.

ಇದನ್ನೂ ಓದಿ-Virat Kohli Controversy : ಕೊಹ್ಲಿ ಮತ್ತು BCCI ನಡುವಿನ ಮನಸ್ತಾಪ : ವಿರಾಟ್‌ಗೆ ಇದ್ದಕ್ಕಿದ್ದಂತೆ ಏಕೆ ಬೆನ್ನು ನೋವು?

'ಆಟಗಾರರು, ಸಹಾಯಕ ಸಿಬ್ಬಂದಿ, ಪಂದ್ಯದ ಅಧಿಕಾರಿಗಳು ಮತ್ತು ಇತರ ಭಾಗವಹಿಸುವವರ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳಲು ಮಂಡಳಿಯು ಬಯಸುವುದಿಲ್ಲ ಮತ್ತು ಮುಂದಿನ ಆದೇಶದವರೆಗೆ ಎಲ್ಲಾ ಮೂರು ಪಂದ್ಯಾವಳಿಗಳನ್ನು ತಡೆಹಿಡಿಯಲು ನಿರ್ಧರಿಸಲಾಗಿದೆ' ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬಿಸಿಸಿಐ ಪರಿಸ್ಥಿತಿಯ ಅವಲೋಕನ ಮುಂದುವರೆಸಲಿದ್ದು, ಅದರ ಪ್ರಕಾರ ಪಂದ್ಯಾವಳಿಯನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಮಂಡಳಿ ಹೇಳಿದೆ. ನಡೆಯುತ್ತಿರುವ 2021-22 ರ ದೇಶೀಯ ಋತುವಿನಲ್ಲಿ 11 ಪಂದ್ಯಾವಳಿಗಳಲ್ಲಿ 700 ಕ್ಕೂ ಹೆಚ್ಚು ಪಂದ್ಯಗಳನ್ನು ಆಯೋಜಿಸಲು ತಮ್ಮ ಅತ್ಯುತ್ತಮ ಕೊಡುಗೆ ನೀಡಿದ ಎಲ್ಲರ ಪ್ರಯತ್ನಗಳನ್ನು ಬಿಸಿಸಿಐ ಪ್ರಶಂಸಿಸುತ್ತದೆ ಎಂದು ಮಂಡಳಿ ತಿಳಿಸಿದೆ.

ಇದನ್ನೂ ಓದಿ-MS Dhoni ಬಳಿಕ ಈ ಆಟಗಾರರಾಗಲಿದ್ದಾರೆ CSK ತಂಡದ ಮುಂದಿನ ನಾಯಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News