ICC T20 World Cup 2024: ಈ 16 ವರ್ಷ ವಯಸ್ಸಿನ ಹುಡುಗನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿಯಂತೆ ಹರಡುತ್ತಿದೆ! Watch Video
T20 World Cup 2024: ಪ್ರಸ್ತುತ ರಾಕಿ ವಯಸ್ಸು 16 ವರ್ಷ ಹಾಗೂ ಈತ ತನ್ನ ತಂದೆಯಂತೆಯೇ ದೂರ ದೂರಕ್ಕೆ ಚಂಡನ್ನು ಬೌಂಡರಿ ಗೆರೆ ದಾಟಿಸುವಲ್ಲಿ ನಿಷ್ಣಾತನಾಗಿದ್ದಾನೆ.
ICC T20 World Cup 2024: ನಿಮ್ಮೆಲ್ಲರಿಗೂ 2007ರ ಟಿ20 ವಿಶ್ವಕಪ್ ನೆನಪಿರಬಹುದು. ಇಂಗ್ಲೆಂಡ್ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಆಂಡ್ರ್ಯೂ ಫ್ಲಿಂಟಾಫ್ ಯುವರಾಜ್ ಸಿಂಗ್ ಗೆ ಹೇಳಿದ ಒಂದು ಮಾತಿನಿಂದ ಕೋಪಗೊಂಡ ಯುವಿ ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್ನಲ್ಲಿ ಆರು ಸಿಕ್ಸ್ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಆದರೆ ಆಂಡ್ರ್ಯೂ ಫ್ಲಿಂಟಾಫ್ ಕೂಡ ಯುವರಾಜ್ ಸಿಂಗ್ ಅವರಂತೆ ದೊಡ್ಡ ಸಿಕ್ಸರ್ ಬಾರಿಸುತ್ತಿದ್ದರು ಮತ್ತು ಬೌಲರ್‌ಗಳನ್ನು ಅಜ್ಜಿ ನೆನಪಾಗುವಂತೆ ಮಾಡುತ್ತಿದ್ದರು.
T20 World Cup 2024: Andrew Flintoff Son Rocky Flintopp Viral Video: ಇದೀಗ ಇಂಗ್ಲೆಂಡ್‌ನ ದಿಗ್ಗಜ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅವರ ಕಿರಿಯ ಪುತ್ರ ರಾಕಿ ಫ್ಲಿಂಟಾಫ್ ಅವರ ವಿಡಿಯೋ ಇಂಟರ್ನೆಟ್ ನಲ್ಲಿ ಬೆಂಕಿಯಂತೆ ಪಸರಿಸುತ್ತಿದೆ. ವೀಡಿಯೊದಲ್ಲಿ ಅವರ ಅದ್ಭುತ ಸಿಕ್ಸರ್‌ಗಳನ್ನು ನೋಡಿ, ನಿಮಗೆ ಮತ್ತು ಸ್ವತಃ ತಂದೆಯಾಗಿರುವ ಆಂಡ್ರ್ಯೂ ಫ್ಲಿಂಟಾಫ್ ಗೂ ಕೊಡ ಆಟ ಆಂಡ್ರ್ಯೂ ಫ್ಲಿಂಟಾಪ್ ಮಗ ಎನಿಸಲಿದೆ. ರಾಕಿ 16 ವರ್ಷ ವಯಸ್ಸಿನವನಾಗಿದ್ದಾನೆ ಮತ್ತು ತನ್ನ ತಂದೆಯಂತೆಯೇ ದೂರದೂರಕ್ಕೆ ಸಿಕ್ಸರ್ ಗಳನ್ನು ಬಾರಿಸುತ್ತಾರೆ. ಲಂಕಾಶೈರ್‌ನ ಎರಡನೇ ತಂಡಕ್ಕಾಗಿ ಆಡುವಾಗ ಡರ್ಹಾಮ್ ವಿರುದ್ಧ ರಾಕಿ ಸಿಕ್ಸರ್‌ಗಳು ಅಭಿಮಾನಿಗಳಿಗೆ ಅವರ ತಂದೆ ಆಂಡ್ರ್ಯೂ ಫ್ಲಿಂಟಾಫ್ ನೆನಪಾಗುವಂತೆ ಮಾಡಿವೆ. ರಾಕಿ ಹೊಡೆದಿರುವ ಸಿಕ್ಸರ್ ಗಳ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಕಿ ಸಿಕ್ಸರ್ ಬಾರಿಸುವ ರೀತಿ ಅವರ ತಂದೆಯಂತೆಯೇ ಇದೆ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಿದ್ದಾರೆ. ಈ ವಿಡಿಯೋ ಕುರಿತು ಹೇಳುವುದಾದರೆ ರಾಕಿ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆದಾಗ್ಯೂ, ಆ ಸಿಕ್ಸರ್‌ಗಳಲ್ಲಿ ಒಂದು ಆಂಡ್ರ್ಯೂ ಅವರ ಟ್ರೇಡ್‌ಮಾರ್ಕ್ ಸಿಕ್ಸರ್ (ಪುಲ್ ಶಾಟ್) ಅನ್ನು ಹೋಲುತ್ತದೆ, ಈ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ರಾಕಿ ಮಿಂಚಿನಂತೆ ಚೆಂಡನ್ನು ಹೊಡೆಯುತ್ತಾರೆ ಮತ್ತು ಅವರ ಹೊಡೆತಗಳನ್ನು ನೋಡಿದರೆ ಖಂಡಿತವಾಗಿಯೂ ಅವರು ತಮ್ಮ ತಂದೆಯ ಹಾದಿಯನ್ನು ಅನುಸರಿಸುತ್ತಿದ್ದಾರೆ ಎಂದು ಎಂದು ನೀವೂ ಹೇಳಬಹುದು.
ಇದನ್ನೂ ಓದಿ-IPL 2024: ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಸ್ಕೋರ್ ಗಳಿಸಿದ ಐದು ತಂಡಗಳಿವು!!
ಡರ್ಹಾಮ್ ವಿರುದ್ಧದ ಪಂದ್ಯದಲ್ಲಿ ತಂದೆಯಂತೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರಾಕಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ಪೂರೈಸಿದ್ದಾರೆ. ಅಷ್ಟರಲ್ಲಿ ಮಳೆ ಶುರುವಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಆ ವೇಳೆಗೆ ಲಂಕಾಶೈರ್ ಮೊದಲ ಇನಿಂಗ್ಸ್‌ನಲ್ಲಿ 391 ರನ್ ಗಳಿಸಿತ್ತು. ಆಂಡ್ರ್ಯೂ ಫ್ಲಿಂಟಾಫ್ ಅವರ ಹಿರಿಯ ಪುತ್ರ ಕೋರಿ ಫ್ಲಿಂಟಾಫ್ ಕೂಡ ಈ ಪಂದ್ಯದಲ್ಲಿ ಲಂಕಾಶೈರ್ ಪರ ಆಡುತ್ತಿದ್ದಾರೆ. ಆಂಡ್ರ್ಯೂ ಉರ್ಫ್ ಫ್ರೆಡ್ಡಿ ಅವರ ಇಬ್ಬರು ಪುತ್ರರು ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ, ಇದರಿಂದಾಗಿ ಇಂಗ್ಲೆಂಡ್ ಅಭಿಮಾನಿಗಳು ಸಾಕಷ್ಟು ಸಂತೋಷಪಟ್ಟಿದ್ದಾರೆ.
ಇದನ್ನೂ ಓದಿ-KL Rahul: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ತಂದೆ-ತಾಯಿ ಯಾರು? ಏನ್ ಕೆಲಸ ಮಾಡ್ತಾರೆ ಗೊತ್ತಾ?
ಆಂಡ್ರ್ಯೂ ಫ್ಲಿಂಟಾಫ್ ಅವರ ವೃತ್ತಿಜೀವನದ ಕುರಿತು ಹೇಳುವುದಾದರೆ, ಅವರು ಇಂಗ್ಲೆಂಡ್ ಪರ 227 ಪಂದ್ಯಗಳಲ್ಲಿ 400 ವಿಕೆಟ್ ಪಡೆದಿದ್ದಾರೆ. ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಒಟ್ಟಿಗೆ 7 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಇಂಗ್ಲೆಂಡ್ ಪರ 79 ಟೆಸ್ಟ್, 141 ODI ಮತ್ತು 7 T-20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.