ನವದೆಹಲಿ: ICC Test Ranking: ಟೀಂ ಇಂಡಿಯಾ ನಾಯಕ ಮತ್ತು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್ ಶ್ರೇಯಾಂಕ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ್ದಾರೆ. ವಿರಾಟ್ (Virat Kohli) ಈಗ ಎರಡನೇ ಸ್ಥಾನಕ್ಕೆ ಬಂದಿದ್ದಾರೆ. ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದ ಬಗ್ಗೆ ಹೇಳುವುದಾದರೆ ಟೀಮ್ ಇಂಡಿಯಾದ ಚೇತೆಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಕೂಡ ಟಾಪ್ -10 ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪೂಜಾರ ಏಳನೇ ಸ್ಥಾನದಲ್ಲಿದ್ದರೆ, ಪೂಜಾರ 10 ನೇ ಸ್ಥಾನದಲ್ಲಿದ್ದಾರೆ. ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ. ಸ್ಮಿತ್ 911 ಅಂಕಗಳನ್ನು ಹೊಂದಿದ್ದರೆ, ವಿರಾಟ್ 886 ಅಂಕಗಳನ್ನು ಹೊಂದಿದ್ದಾರೆ.
ಇದನ್ನು ಓದಿ- Virat Kohli ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ


ICC Women's Cricket World Cup: ವೇಳಾಪಟ್ಟಿ ಬಿಡುಗಡೆ, ಈ ತಂಡಗಳ ವಿರುದ್ಧ ಟೀಂ ಇಂಡಿಯಾ ಸೆಣೆಸಾಟ



COMMERCIAL BREAK
SCROLL TO CONTINUE READING

ಆರ್ ಅಶ್ವಿನ್ 756 ಅಂಕಗಳೊಂದಿಗೆ 9 ನೇ ಸ್ಥಾನದಲ್ಲಿದ್ದಾರೆ. ಅಗ್ರ -10 ಬೌಲರ್‌ಗಳಲ್ಲಿ ಕೇವಲ ಇಬ್ಬರು ಭಾರತೀಯ ಆಟಗಾರರಾಗಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 904 ಅಂಕಗಳೊಂದಿಗೆ ನಂ .1 ಟೆಸ್ಟ್ ಬೌಲರ್ ಆಗಿ ಮುಂದುವರೆದಿದ್ದಾರೆ. ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಅವರ ನಂತರದ ಸ್ಥಾನದಲ್ಲಿದ್ದಾರೆ ಮತ್ತು ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್ ಮೂರನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಆಲ್‌ರೌಂಡರ್‌ಗಳ ಬಗ್ಗೆ ಹೇಳುವುದಾದರೆ, ಬೆನ್ ಸ್ಟೋಕ್ಸ್ ನಂಬರ್ -1, ಜೇಸನ್ ಹೋಲ್ಡರ್ -2 ನೇ ಸ್ಥಾನ ಮತ್ತು ರವೀಂದ್ರ ಜಡೇಜಾ -3 ನೇ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ಶ್ರೇಯಾಂಕ ಪಟ್ಟಿಯಲ್ಲಿ ಆರ್ ಅಶ್ವಿನ್ ಆರನೇ ಸ್ಥಾನದಲ್ಲಿದ್ದಾರೆ.