Virat Kohli ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ

ಲಿಯೋನೆಲ್ ಮೆಸ್ಸಿ ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಆಟಗಾರ. ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Last Updated : Dec 15, 2020, 02:10 PM IST
  • ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರ
  • ಫೋರ್ಬ್ಸ್ ಪಟ್ಟಿಯ ಪ್ರಕಾರ ವಿರಾಟ್ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗಿಂತ ಹಿಂದುಳಿದಿದ್ದಾರೆ
Virat Kohli ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ title=

ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೋರ್ಬ್ಸ್ ಪಟ್ಟಿಯ ಪ್ರಕಾರ ವಿರಾಟ್ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗಿಂತ ಹಿಂದುಳಿದಿದ್ದಾರೆ. ಅದೇ ಸಮಯದಲ್ಲಿ, ಮಹೇಂದ್ರ ಸಿಂಗ್ ಧೋನಿ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರ 100ರಲ್ಲಿ ಸ್ಥಾನ ಪಡೆದಿದ್ದಾರೆ.

ವಿರಾಟ್ ಗಿಂತ 5 ಪಟ್ಟು ಹೆಚ್ಚು ಗಳಿಸುವ ಮೆಸ್ಸಿ  
virat vs messi
ವಿರಾಟ್ ಕೊಹ್ಲಿ (Virat Kohli) ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗನಾಗಿರಬಹುದು ಆದರೆ ಇನ್ನೂ ಅವನ ಗಳಿಕೆ ಮೆಸ್ಸಿಗಿಂತ 5 ಪಟ್ಟು ಕಡಿಮೆ.

ವಿರಾಟ್ ಮತ್ತು ಮೆಸ್ಸಿ ಗಳಿಕೆಯ ನಡುವಿನ ವ್ಯತ್ಯಾಸವೇನು?
virat kohli income
ವಿರಾಟ್ ಕಳೆದ 1 ವರ್ಷದಲ್ಲಿ 175 ಕೋಟಿ ರೂ. ಗಳಿಸಿದ್ದಾರೆ. ಇದೇ ವೇಳೆ ಲಿಯೋನೆಲ್ ಮೆಸ್ಸಿಯ ಒಂದು ವರ್ಷದ ಒಟ್ಟು ಆದಾಯ 889 ಕೋಟಿ ರೂ. ಆಗಿದೆ.

ಮೆಸ್ಸಿ ವಿಶ್ವದ ಅತ್ಯಂತ ಶ್ರೀಮಂತ ಆಟಗಾರ
messi richest playerಫೋರ್ಬ್ಸ್ ಆಟಗಾರರ ಪಟ್ಟಿಯಲ್ಲಿ (Forbes list) ಲಿಯೋನೆಲ್ ಮೆಸ್ಸಿ 1 ನೇ ಸ್ಥಾನದಲ್ಲಿದ್ದಾರೆ.

ವರ್ಷಕ್ಕೆ ಮೆಸ್ಸಿ 880 ಕೋಟಿ ರೂ. ಗಳಿಸುತ್ತಾರೆ 
messi incomeಲಿಯೋನೆಲ್ ಮೆಸ್ಸಿಯ ಒಂದು ವರ್ಷದ ಆದಾಯ ಒಟ್ಟು ಮೊತ್ತ 889 ಕೋಟಿ ರೂ. ಮೆಸ್ಸಿ ಕಳೆದ ವರ್ಷ ಜಾಹೀರಾತುಗಳಿಂದ ಸುಮಾರು 644 ಕೋಟಿ ರೂ. ಗಳಿಸಿದ್ದಾರೆ. ಅದೇ ಸಮಯದಲ್ಲಿ ಸಂಬಳ ಅಥವಾ ವಿಜೇತ ಬಹುಮಾನದಿಂದ ಅವರ ವಾರ್ಷಿಕ ಆದಾಯ 245 ಕೋಟಿ ರೂ.

ವಿರಾಟ್ ಅವರ ಆದಾಯ 175 ಕೋಟಿ ರೂ.
virat richest cricketer
ವಿರಾಟ್ ಕೊಹ್ಲಿ ಅವರ ಒಂದು ವರ್ಷದ ಒಟ್ಟು ಆದಾಯ 175 ಕೋಟಿ ರೂ. ಕಳೆದ ಒಂದು ವರ್ಷದಲ್ಲಿ ಅವರು ಜಾಹೀರಾತುಗಳಿಂದ ಸುಮಾರು 147 ಕೋಟಿ ಗಳಿಸಿದ್ದಾರೆ. ಅದೇ ಸಮಯದಲ್ಲಿ ಸಂಬಳ ಅಥವಾ ವಿಜೇತ ಬಹುಮಾನದಿಂದ ಅವರ ವಾರ್ಷಿಕ ಆದಾಯ 28 ಕೋಟಿ ರೂ. ಆಗಿದೆ.

Flashback 2020: Cricket Controversies 2020 ಗಾವಸ್ಕರ್ ನಿಂದ ಹಿಡಿದು ರೈನಾವರೆಗೆ ಕ್ರಿಕೆಟ್ ಲೋಕದ ವಿವಾದಗಳು ಇಲ್ಲಿವೆ

ಚಿನ್ನದ ವಿನ್ಯಾಸ ಐಫೋನ್ ಹೊಂದಿರುವ ಮೆಸ್ಸಿ
messi iphone
ಲಿಯೋನೆಲ್ ಮೆಸ್ಸಿ (Lionel Messi) ಚಿನ್ನದ ವಿನ್ಯಾಸದ ಐಫೋನ್ ಎಕ್ಸ್‌ಎಸ್ ಹೊಂದಿದ್ದಾರೆ. ಅವನ ಹೆಸರಿನ ಜೊತೆಗೆ ಅವನ ಮಕ್ಕಳ ಹೆಸರು ಮತ್ತು ಹೆಂಡತಿಯ ಹೆಸರನ್ನು ಅದರ ಮೇಲೆ ಬರೆಯಲಾಗಿದೆ.

ಮೆಸ್ಸಿಯ ನೆಚ್ಚಿನ ಕಾರು-  Land Rover :
messi cars
ಮೆಸ್ಸಿಗೆ ಕಾರುಗಳೆಂದರೆ ಬಲು ಮೆಚ್ಚು. ಅವರ ಬಳಿ  Ferrari 335 S Spider Scaglietti, Ferrari F430 Spyder, Maserati Gran Turismo MC Stradale, Land Rover ಸೇರಿದಂತೆ ಹಲವು ಐಶಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಕೊಹ್ಲಿಯ 'ವಿರಾಟ್' ಸಂಗ್ರಹ:
virat kohli carsವಿರಾಟ್ ಕೊಹ್ಲಿ ಬಳಿ Audi Q7, Audi RS5, Audi RS6, A8 L, R8 V10 LMX, Bentley Continental GT ಮತ್ತು Range Rover Vogue ನಂತಹ ಉತ್ತಮ ಕಾರುಗಳನ್ನು ಹೊಂದಿದ್ದಾರೆ.

Top 25 Global Instagram Influencer ಪಟ್ಟಿ ಸೇರಿದ ವಿರಾಟ್ - ಅನುಷ್ಕಾ

ಮೆಸ್ಸಿಯ ಐಷಾರಾಮಿ ಬಂಗಲೆ:
messi house
ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾದಲ್ಲಿ ಅದ್ಭುತ ಬಂಗಲೆ ಹೊಂದಿದ್ದಾರೆ. ಅವನ ಮನೆ ಯಿಂದ ಸಮುದ್ರವನ್ನು ಕಾಣಬಹುದು.  ಅವನ ಮನೆಯಲ್ಲಿ ಒಂದು ಸಣ್ಣ ಫುಟ್ಬಾಲ್ ಮೈದಾನವೂ ಇದೆ.

ವಿರಾಟ್ ಕೊಹ್ಲಿಯ ಐಷಾರಾಮಿ ಬಂಗಲೆ:
virat kohli house
ಕೊಹ್ಲಿಯ ಮನೆ ಕೋಟಿ ಮೌಲ್ಯದ್ದಾಗಿದೆ ಮತ್ತು ಇದು ಬಹಳ ಸುಂದರವಾಗಿದೆ. ವಿರಾಟ್ ಅವರ ಐಶಾರಾಮಿ ಬಂಗಲೆ ಯಾವುದೇ ಅರಮನೆಗಿಂತ ಕಡಿಮೆಯಿಲ್ಲ.

Trending News