ಟೆಸ್ಟ್ ಶತಕ ಸಿಡಿಸಿದ್ದೇ ತಡ ICC Rankingನಲ್ಲಿ ಕೊಹ್ಲಿ ಲಾಂಗ್ ಜಂಪ್: ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ ವಿರಾಟ್?
Virat Kohli: ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 186 ರನ್‌ಗಳ ಇನಿಂಗ್ಸ್ ಆಡಿದ್ದರು. ಇದರ ನಂತರ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್’ನಲ್ಲಿ ದೊಡ್ಡ ಲಾಭವನ್ನು ಪಡೆದಿದ್ದಾರೆ. ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಕೊಹ್ಲಿ 8 ಸ್ಥಾನಗಳ ಲಾಂಗ್ ಜಂಪ್ ಮಾಡಿದ್ದು, ಇದೀಗ 13ನೇ ಸ್ಥಾನಕ್ಕೆ ತಲುಪಿದ್ದಾರೆ. ಆದರೆ ಅವರು ಇನ್ನೂ ಟಾಪ್-10 ಪಟ್ಟಿಯಿಂದ ಹೊರಗಿದ್ದಾರೆ. ಕೇವಲ ಒಂದು ಶತಕದೊಂದಿಗೆ 54 ರೇಟಿಂಗ್ ಪಡೆದು ರ್ಯಾಂಕಿಂಗ್ ಪಟ್ಟಿಯಲ್ಲಿ 705 ಪಾಯಿಂಟ್‌ಗಳನ್ನು ಹೊಂದಿದ್ದಾರೆ.
Virat kohli Latest Test Ranking: ಇತ್ತೀಚೆಗೆಯಷ್ಟೇ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಪಂದ್ಯ ಮುಕ್ತಾಯಗೊಂಡಿದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಟ್ರೋಫಿ ಗೆದ್ದುಕೊಂಡಿದೆ. ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಕೊಹ್ಲಿಯ ಬ್ಯಾಟಿಂಗ್ ಸದ್ದು ಮಾಡಿರಲಿಲ್ಲ. ಆದರೆ ನಾಲ್ಕನೇ ಪಂದ್ಯದಲ್ಲಿ 186 ರನ್‌ಗಳ ಬಿರುಸಿದ ಪ್ರದರ್ಶನ ತೋರಿದ್ದಾರೆ. ಅವರ ಇನ್ನಿಂಗ್ಸ್‌ನಿಂದಾಗಿ ಸದ್ಯ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ದೊಡ್ಡ ಲಾಭವನ್ನು ಪಡೆದಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯದ ಐಪಿಎಲ್‌ನ ಐದು ವಿವಾದಗಳು ಇವು !
ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಜಿಗಿತ:
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 186 ರನ್‌ಗಳ ಇನಿಂಗ್ಸ್ ಆಡಿದ್ದರು. ಇದರ ನಂತರ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್’ನಲ್ಲಿ ದೊಡ್ಡ ಲಾಭವನ್ನು ಪಡೆದಿದ್ದಾರೆ. ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಕೊಹ್ಲಿ 8 ಸ್ಥಾನಗಳ ಲಾಂಗ್ ಜಂಪ್ ಮಾಡಿದ್ದು, ಇದೀಗ 13ನೇ ಸ್ಥಾನಕ್ಕೆ ತಲುಪಿದ್ದಾರೆ. ಆದರೆ ಅವರು ಇನ್ನೂ ಟಾಪ್-10 ಪಟ್ಟಿಯಿಂದ ಹೊರಗಿದ್ದಾರೆ. ಕೇವಲ ಒಂದು ಶತಕದೊಂದಿಗೆ 54 ರೇಟಿಂಗ್ ಪಡೆದು ರ್ಯಾಂಕಿಂಗ್ ಪಟ್ಟಿಯಲ್ಲಿ 705 ಪಾಯಿಂಟ್‌ಗಳನ್ನು ಹೊಂದಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ಇತ್ತೀಚಿನ ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಬುಶೆನ್ ನಂಬರ್-1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು 915 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸ್ಮಿತ್ 872 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಇನ್ನು ಟಾಪ್-10ರಲ್ಲಿ ಇಬ್ಬರು ಟೀಂ ಇಂಡಿಯಾದ ಬ್ಯಾಟ್ಸ್‌ಮನ್’ಗಳು ಇದ್ದಾರೆ. ರಿಷಬ್ ಪಂತ್ ಒಂದು ಸ್ಥಾನ ಕೆಳಗಿಳಿದು 9ನೇ ಸ್ಥಾನದಲ್ಲಿದ್ದರೆ, ನಾಯಕ ರೋಹಿತ್ ಶರ್ಮಾ ಒಂದು ಸ್ಥಾನ ಮೇಲೇರಿ 10ನೇ ಸ್ಥಾನಕ್ಕೆ ತಲುಪಿದ್ದಾರೆ.
ಇದನ್ನೂ ಓದಿ: RCB : ಆರ್ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ : ನಿಮಗಿದೆ ಆಟಗಾರರನ್ನು ಭೇಟಿ ಮಾಡುವ ಅವಕಾಶ!
ಕೊಹ್ಲಿ ವೃತ್ತಿಜೀವನದ 28ನೇ ಶತಕ:
ನಾಲ್ಕನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ 28 ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಈ ಶತಕವನ್ನು ಪೂರ್ಣಗೊಳಿಸಲು ಅವರು 241 ಎಸೆತಗಳನ್ನು ಎದುರಿಸಿದ್ದಾರೆ. ಇನ್ನು 28ನೇ ಶತಕ ಪೂರೈಸಿದ ಅವರು ಕೇವಲ 5 ಬೌಂಡರಿಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ಇದು ಅವರ ವೃತ್ತಿಜೀವನದ ಎರಡನೇ ನಿಧಾನಗತಿಯ ಶತಕವಾಗಿದೆ. ಇದಕ್ಕೂ ಮೊದಲು, ಇಂಗ್ಲೆಂಡ್ ವಿರುದ್ಧ ಅವರು ಶತಕ ಸಿಡಿಸಿದ್ದರು. ಇದರಲ್ಲಿ ಅವರು ಶತಕವನ್ನು ಪೂರ್ಣಗೊಳಿಸಲು ಗರಿಷ್ಠ 289 ಎಸೆತಗಳನ್ನು ಎದುರಿಸಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.