ನವದೆಹಲಿ: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಭಾನುವಾರ ನಡೆದ ಐದನೇ ಮಹಿಳಾ ಟಿ 20 ವಿಶ್ವಕಪ್ ಪ್ರಶಸ್ತಿಗಾಗಿ ಆಸ್ಟ್ರೇಲಿಯಾ ಭಾರತವನ್ನು 99 ರನ್ ಗಳಿಗೆ ಆಲೌಟ್ ಮಾಡಿ 85 ರನ್ ಗಳಿಸಿ ಫೈನಲ್ ಗೆದ್ದುಕೊಂಡಿತು.


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ಆಸೀಸ್ ತಂಡವು ಭರ್ಜರಿ ಶುಭಾರಂಭವನ್ನೇ ಕಂಡಿತು. ಮೊದಲ ವಿಕೆಟ್ ಗೆ 115 ರನ್ ಗಳಿಸುವ ಮೂಲಕ ಪಂದ್ಯದ ಮೇಲೆ ನಿಯತ್ರಣವನ್ನು ಸಾಧಿಸಿತು.ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿಯರಾದ ಅಲಿಸಾ ಹೀಲಿ ಮತ್ತು ಬೆತ್ ಮೂನಿ ಅವರಿಂದ ಅರ್ಧಶತಕಗಳ ನೆರವಿನಿಂದ ಭಾರಿ ಮೊತ್ತವನ್ನು ದಾಖಲಿಸಿತು. ಹೀಲಿ 39 ಎಸೆತಗಳಲ್ಲಿ 75 ರನ್ ಗಳಿಸಿದರೆ, ಮೂನಿ ಅಜೇಯ 78 ರನ್ ಗಳಿಸಿದರು.



185 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತ ತಂಡಕ್ಕೆ ಆರಂಭದಲ್ಲಿಯೇ ಆಘಾತ ಎದುರಾಗಿತ್ತು, 30 ರನ್ ಗಳಿಗೆ ನಾಲ್ಕು ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಸೋಲಿನ ಹಾದಿ ಹಿಡಿಯಿತು, ಭಾರತದ ಪರವಾಗಿ ದೀಪ್ತಿ ಶರ್ಮಾ ಅವರು 33 ರನ್ ಗಳನ್ನು ದಾಖಲಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರ್ತಿಯೂ ಕೂಡ 30 ಗಡಿ ದಾಟಲಿಲ್ಲ. ಕೊನೆಗೆ ಆಸೀಸ್ ತಂಡದ ಪರಿಣಾಮ ಕಾರಿ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತೀಯ ಮಹಿಳಾ ತಂಡ 99 ರನ್ ಗಳಿಗೆ ಸರ್ವಪತನವನ್ನು ಕಂಡಿತು.



ಆಸ್ಟ್ರೇಲಿಯಾದ ಪರವಾಗಿ ಮೆಗನ್ ಸ್ಚುಟ್ ಹಾಗೂ ಜೆಸ್ಸ್ ಜೋನಾಸನ್ ಅವರು ಕ್ರಮವಾಗಿ 4,3 ವಿಕೆಟ್ ಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾದ ಗೆಲುವಿಗೆ ಕಾರಣರಾದರು. ಈಗ ಆಸೀಸ್ ಮಹಿಳಾ ಕ್ರಿಕೆಟ್ ತಂಡವು ದಾಖಲೆಯ 5ನೇ ವಿಶ್ವಕಪ್ ಟೂರ್ನಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.