2ನೇ ಟಿ-20ಯಲ್ಲಿಯೂ ಭಾರತ ಸೋತರೆ ಹೆಗಲೇರಲಿದೆ ಇತಿಹಾಸದಲ್ಲೇ ಕಂಡಿರದ ಈ ಕಳಪೆ ದಾಖಲೆ!
India vs West Indies 2nd T20: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಮತ್ತೆ ಸೋಲನುಭವಿಸಿದರೆ, ವೆಸ್ಟ್ ಇಂಡೀಸ್ ವಿರುದ್ಧ ಟಿ20ಯಲ್ಲಿ ಏಷ್ಯನ್ ತಂಡವಾಗಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ತಂಡವಾಗಿ ಜಂಟಿಯಾಗಿ ಮೊದಲ ಸ್ಥಾನವನ್ನು ತಲುಪುತ್ತದೆ.
India vs West Indies 2nd T20: ಟ್ರಿನಿಡಾಡ್’ನಲ್ಲಿ ನಡೆದ ಮೊದಲ T20 ಪಂದ್ಯದಲ್ಲಿ ಸೋಲಿನ ನಂತರ ಟೀಂ ಇಂಡಿಯಾ ಎರಡನೇ T20 ಗೆದ್ದು ಸರಣಿಗೆ ಮರಳುವ ನಿರೀಕ್ಷೆಯಲ್ಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕಳೆದ ಪಂದ್ಯದ ಪ್ರದರ್ಶನವನ್ನು ಗಯಾನಾದಲ್ಲೂ ಪುನರಾವರ್ತಿಸಲು ಕೆರಿಬಿಯನ್ ತಂಡ ಉತ್ಸುಕವಾಗಿದೆ. ಹೀಗಿರುವಾಗ ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿದರೆ ಕಳಪೆ ದಾಖಲೆಯೊಂದು ತನ್ನ ಹೆಸರಿನಲ್ಲಿ ದಾಖಲಾಗುತ್ತದೆ.
ಇದನ್ನೂ ಓದಿ: CSK ತಂಡದಲ್ಲಿದ್ದೇ ನಾಯಕ ಧೋನಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ಆ 3 ಕ್ರಿಕೆಟಿಗರು ಯಾರು?
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಮತ್ತೆ ಸೋಲನುಭವಿಸಿದರೆ, ವೆಸ್ಟ್ ಇಂಡೀಸ್ ವಿರುದ್ಧ ಟಿ20ಯಲ್ಲಿ ಏಷ್ಯನ್ ತಂಡವಾಗಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ತಂಡವಾಗಿ ಜಂಟಿಯಾಗಿ ಮೊದಲ ಸ್ಥಾನವನ್ನು ತಲುಪುತ್ತದೆ. ಸರಣಿಯಲ್ಲಿ ಭಾರತ ಇನ್ನೆರಡು ಪಂದ್ಯಗಳನ್ನು ಸೋತರೆ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಇದುವರೆಗೆ 8 ಪಂದ್ಯಗಳಲ್ಲಿ ಸೋಲು ಕಂಡಿದೆ.
ಬಾಂಗ್ಲಾದೇಶ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಏಷ್ಯನ್ ತಂಡವಾಗಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಸೋತ ದಾಖಲೆಯನ್ನು ಹೊಂದಿದೆ. ವೆಸ್ಟ್ ಇಂಡೀಸ್ ತಂಡ ಇದುವರೆಗೆ ಟಿ20 ಮಾದರಿಯಲ್ಲಿ ಬಾಂಗ್ಲಾದೇಶವನ್ನು 9 ಬಾರಿ ಸೋಲಿಸಿದೆ. ಶ್ರೀಲಂಕಾ 7, ಅಫ್ಘಾನಿಸ್ತಾನ 4 ಮತ್ತು ಪಾಕಿಸ್ತಾನ ಕೇವಲ 3 ಟಿ20 ಪಂದ್ಯಗಳಲ್ಲಿ ಸೋಲು ಕಂಡಿದೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲಿದೆ ಈ 4 ತಂಡಗಳು! ಭವಿಷ್ಯ ನುಡಿದ ದಿಗ್ಗಜ ಆಟಗಾರ
ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 6 ವಿಕೆಟ್’ಗೆ 149 ರನ್ ಗಳಿಸಿತು ನಂತರ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು. 150 ರನ್’ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಕೇವಲ 5 ರನ್’ಗಳಲ್ಲಿ ಶುಭಮನ್ ಗಿಲ್ ಅವರನ್ನು ಅಕಿಲ್ ಹುಸೇನ್ ಔಟ್ ಮಾಡಿದಾಗ ಆರಂಭಿಕ ಹೊಡೆತವನ್ನು ಪಡೆಯಿತು. ಇಶಾನ್ ಕಿಶನ್ ಕೂಡ 9 ಎಸೆತಗಳಲ್ಲಿ 6 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 21 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 21 ರನ್ ಸೇರಿಸಿದರು. ತಿಲಕ್ ವರ್ಮಾ 22 ಎಸೆತಗಳಲ್ಲಿ 39 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇದರಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸೇರಿವೆ. ನಾಯಕ ಹಾರ್ದಿಕ್ ಪಾಂಡ್ಯ 19, ಸಂಜು ಸ್ಯಾಮ್ಸನ್ 12 ರನ್ ಕೊಡುಗೆ ನೀಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ