ನವದೆಹಲಿ: ಟೀಮ್ ಇಂಡಿಯಾ ವಿಶ್ವಕಪ್ ಟಿ20 ಸೆಮಿಫೈನಲ್ ನಲ್ಲಿ ಸೋಲನ್ನು ಅನುಭವಿಸಿದ ನಂತರ ಈಗ ತಂಡವನ್ನು ಮರಳಿ ರಚಿಸುವುದರ ಬಗ್ಗೆ ಆಡಳಿತ ಮಂಡಳಿ ಯೋಚಿಸುತ್ತಿದೆ.


COMMERCIAL BREAK
SCROLL TO CONTINUE READING

ಈಗ ಮುಂಬರುವ ವಿಶ್ವಕಪ್ ಟೂರ್ನಿಗಾಗಿ ಭಾರತ ತಂಡವನ್ನು ರಚಿಸುವ ನಿಟ್ಟಿನಲ್ಲಿ ಮಾತನಾಡಿದ ಟೀಮ್ ಇಂಡಿಯಾದ ಮಾಜಿ ಆಟಗಾರ ಮಹಮ್ಮದ್ ಕೈಫ್, "ಇತ್ತೀಚೆಗೆ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಸರಾಸರಿ ವಯಸ್ಸು 31, ಆದ್ದರಿಂದ ತಂಡಕ್ಕೆ ಅನುಭವಿ ಆಟಗಾರರನ್ನು ಹೊಂದುವುದು ನಿಜವಾಗಿಯೂ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.


ಇದನ್ನೂ ಓದಿ : India vs Bangladesh : ಬಾಂಗ್ಲಾ ಟೀಂಗೆ ಬಿಗ್ ಶಾಕ್ : ಸರಣಿಯಿಂದ ವೇಗದ ಬೌಲರ್ ಔಟ್!


ಭಾರತವು ವಿಶ್ವಕಪ್‌ಗೆ ತಯಾರಿಯನ್ನು ಮಾಡಲು ಬಯಸಿದರೆ ಅದನ್ನು ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದಲೇ ಮಾಡಬೇಕಾಗಿದೆ, ಏಕೆಂದರೆ 25 ರ ವಿಶ್ವಕಪ್ ವರೆಗೆ ಹೆಚ್ಚಿನ ಏಕದಿನ ಪಂದ್ಯಗಳು ಕೈಯಲ್ಲಿ ಇಲ್ಲ ಎಂದು ಕೈಫ್ ಹೇಳಿದರು.


ಇದನ್ನೂ ಓದಿ : Team India : ಟೀಂ ಇಂಡಿಯಾದಲ್ಲಿ ಈ ಆಟಗಾರನ ವೃತ್ತಿಜೀವನ ಬಹುತೇಕ ಅಂತ್ಯ! 


ಇದೆ ವೇಳೆ ಬೌಲಿಂಗ್ ಅನ್ನು ಪ್ರಮುಖ ಸಮಸ್ಯೆ ಎಂದ ಹೇಳಿದ ಕೈಫ್ 'ಮುಖ್ಯ ಸಮಸ್ಯೆ ಬೌಲಿಂಗ್ ಆಗಿದೆ.ಶಾರ್ದೂಲ್ ಠಾಕೂರ್ 2 ನೇ ಏಕದಿನ ಪಂದ್ಯವನ್ನು ಆಡುತ್ತಿಲ್ಲ, ಮೊಹಮ್ಮದ್ ಸಿರಾಜ್ ಅವರನ್ನು ಮನೆಗೆ ಕಳುಹಿಸಿದ್ದೀರಿ, ಅವರು ಏಕದಿನ ಪಂದ್ಯಗಳಲ್ಲಿ ಆಡಬಹುದಿತ್ತು" ಎಂದು ಅವರು ಹೇಳಿದರು. 


ಇನ್ನೂ ಮುಂದುವರೆದು ಮಾತನಾಡಿದ ಕೈಫ್ ಭುವನೇಶ್ವರ್ ಕುಮಾರ್ ತಂಡದಲ್ಲಿ ಏಕೆ ಇಲ್ಲ, ನನಗೆ ಯಾವುದೇ ಸುಳಿವು ಇಲ್ಲ. ಅವರು ನಿಜವಾಗಿಯೂ ಉತ್ತಮ ಬೌಲರ್, ಆದರೆ ಅವರು ತಂಡದ ಭಾಗವಾಗಿಲ್ಲ. ಹೊಸ ಆಟಗಾರರ ಹುಡುಕಾಟದಲ್ಲಿ, ನಾವು ಹಳೆಯ ಆಟಗಾರರನ್ನು ಕಳೆದುಕೊಳ್ಳುತ್ತಿದ್ದೇವೆ. ಅದೇನೋ ಅಂತಾರಲ್ಲ ವಜ್ರಗಳನ್ನು ಹುಡುಕಲು ಹೋಗಿ ಚಿನ್ನವನ್ನು ಕಳೆದುಕೊಂಡಿದ್ದೇವೆ' ಎಂದು ಅವರು ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.