ಇಂದು ಸಂಜೆ 7ಕ್ಕೆ ಮಹಾರಾಷ್ಟ್ರದ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ T20I ನಲ್ಲಿ ಮುಖಾಮುಖಿಯಾಗಲಿವೆ. ಕಳೆದ ಕೆಲವು ದಿನಗಳಿಂದ ನಾಗ್ಪುರದಲ್ಲಿ ಮಳೆಯಾಗುತ್ತಿದ್ದು, ಗುರುವಾರದಂದು ಸಹ ಎರಡೂ ತಂಡಗಳ ಅಭ್ಯಾಸವನ್ನು ರದ್ದುಗೊಳಿಸಲಾಗಿತ್ತು. ಇದೀಗ ಟೀಂ ಇಂಡಿಯಾ ಗೆಲ್ಲಲೇ ಬೇಕಾದ ಅನಿವಾರ್ಯತೆ ಹೊಂದಿರುವ ಈ ಪಂದ್ಯಕ್ಕೂ ವರುಣ ಅಡ್ಡಿಪಡಿಸುವ ಸಾಧ್ಯತೆಯಿದೆ. ಆದರೆ ಅಕ್ಯುವೆದರ್ ತಿಳಿಸಿರುವ ಪ್ರಕಾರ ಇಂದಿನ ಹವಾಮಾನವು ಆಶಾದಾಯಕವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Ind vs Aus : ವರ್ಕ್ ಔಟ್ ಆಗುತ್ತಿಲ್ಲ ರೋಹಿತ್- ದ್ರಾವಿಡ್  Playing 11


ಆಕ್ಯುವೆದರ್ ಪ್ರಕಾರ, ಈ ದಿನದ ಸರಾಸರಿ ತಾಪಮಾನವು 29 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ, 64 ಪ್ರತಿಶತದಷ್ಟು ಮೋಡದ ಕವಿದ ವಾತಾವರಣ ಇರಲಿದೆ.


ನಿರ್ದಿಷ್ಟವಾಗಿ ಪಂದ್ಯದ ಸಮಯದ ಬಗ್ಗೆ ಮಾತನಾಡುವುದಾದರೆ, ಟಾಸ್ 6:30 ಕ್ಕೆ ನಡೆಯುತ್ತದೆ. ನಿಖರವಾಗಿ ಅರ್ಧ ಗಂಟೆಯ ನಂತರ ಪಂದ್ಯ ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ, ಅಕ್ಯುವೆದರ್ ಪ್ರಕಾರ ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಈ ಮಧ್ಯೆ, ಆಟದ ಕೊನೆಯ ಭಾಗದಲ್ಲಿ ತಾಪಮಾನವು ಸುಮಾರು 25 ಡಿಗ್ರಿ ಸೆಲ್ಸಿಯಸ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.


ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಸೋತ ನಂತರ ಭಾರತವು ಇದೀಗ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿದೆ. ಸದ್ಯ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ.  


ಮೊದಲ ಟಿ 20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್ (2 ವಿಕೆಟ್), ಹಾರ್ದಿಕ್ ಪಾಂಡ್ಯ ನಿರೀಕ್ಷಿಸಿದಂತೆ ಬೌಲಿಂಗ್ ಮಾಡಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 208 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾಗೆ ನೀಡಿತ್ತು. ಆದರೆ ಆಸ್ಟ್ರೇಲಿಯಾ ಪರ ಆಡಿದ ಕ್ಯಾಮರೂನ್ ಗ್ರೀನ್ (61) ಮತ್ತು ಮ್ಯಾಥ್ಯೂ ವೇಡ್ (45*) ಭರ್ಜರಿ ಆಟ ಪ್ರದರ್ಶಿಸಿದ್ದರು. ಬಳಿಕ 211 ರನ್ ಬಾರಿಸುವ ಮೂಲಕ ಪಂದ್ಯ ಗೆದ್ದುಬೀಗಿತು. 


ಇದನ್ನೂ ಓದಿ: IND vs AUS : ಟೀಂ ಇಂಡಿಯಾದಲ್ಲಿ ಈ 2 ಬದಲಾವಣೆ ಖಚಿತ : ಈ 11 ಆಟಗಾರರೊಂದಿಗೆ ನಾಗ್ಪುರಕ್ಕೆ!


ಕೆಎಲ್ ರಾಹುಲ್ 35 ಎಸೆತಗಳಲ್ಲಿ 55 ರನ್ ಗಳಿಸಿದ್ದು, ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ ಔಟಾಗದೆ 71 ರನ್ ಗಳಿಸಿ ಭಾರತ 20 ಓವರ್‌ಗಳಲ್ಲಿ 208/6 ರನ್ ಗಳಿಸಲು ನೆರವಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.