ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ 3 ಪಂದ್ಯಗಳನ್ನು ಆಡಲಾಗಿದೆ. ಈ ಪೈಕಿ ಮೊದಲೆರಡು ಪಂದ್ಯಗಳನ್ನು ಗೆದ್ದು ಟೀಂ ಇಂಡಿಯಾ ಮುನ್ನಡೆ ಸಾಧಿಸಿತ್ತು. ಆದರೆ 3ನೇ ಪಂದ್ಯದಲ್ಲಿ ಆಸೀಸ್ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಸರಣಿಯಲ್ಲಿ 2-1ರ ಅಂತರ ಕಾಯ್ದುಕೊಂಡಿದೆ.


COMMERCIAL BREAK
SCROLL TO CONTINUE READING

ಭಾರತದ ನಾಯಕ ರೋಹಿತ್ ಶರ್ಮಾ ಈ ಸರಣಿಯಲ್ಲಿ ತಮ್ಮ ಸ್ನೇಹಿತ ಮತ್ತು ವಿಶೇಷ ಆಟಗಾರನೊಬ್ಬನಿಗೆ ಆಡಲು ಇನ್ನೂ ಅವಕಾಶ ನೀಡಿಲ್ಲ. ಈ ಆಟಗಾರ ಮೊದಲ ಬಾರಿಗೆ ಭಾರತೀಯ ಟೆಸ್ಟ್ ತಂಡದ ಭಾಗವಾಗಿದ್ದಾರೆ, ಆದರೆ ಅವರ ಚೊಚ್ಚಲ ಪಂದ್ಯದ ಕಾಯುವಿಕೆ ಇನ್ನೂ ಮುಗಿದಿಲ್ಲ.


ಇದನ್ನೂ ಓದಿ: IND vs AUS : ಟೆಸ್ಟ್ ಸೋಲಿನ ನಂತರ ಟೀಂ ಇಂಡಿಯಾಗೆ ಐಸಿಸಿನಿಂದ ಮತ್ತೊಂದು ಶಾಕ್!  


ಟೆಸ್ಟ್ ಸರಣಿಯಲ್ಲಿ ಅವಕಾಶಕ್ಕೆ ಹಾತೊರೆಯುತ್ತಿದ್ದರು!


ಈ ಸರಣಿಯಲ್ಲಿ ಕೆ.ಎಸ್.ಭರತ್ ಮತ್ತು ಇಶಾನ್ ಕಿಶನ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ ಇಶಾನ್ ಕಿಶನ್ ಈ ಸರಣಿಯಲ್ಲಿ ಒಮ್ಮೆಯೂ ಭಾರತ ತಂಡದ ಆಡುವ 11ರ ಭಾಗವಾಗಲು ಸಾಧ್ಯವಾಗಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಕೆ.ಎಸ್.ಭರತ್ ತಂಡದ ಮೊದಲ ಆಯ್ಕೆಯಾಗಿ ಉಳಿದಿದ್ದಾರೆ, ಆದರೆ ಅವರು ಅದ್ಭುತ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.


ಎಲ್ಲಾ 3 ಟೆಸ್ಟ್ ಪಂದ್ಯಗಳಲ್ಲಿ ಫ್ಲಾಪ್!


ಈ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆ.ಎಸ್.ಭರತ್ 8 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಅದೇ ವೇಳೆ ದೆಹಲಿ ಟೆಸ್ಟ್ ಪಂದ್ಯದಲ್ಲಿ ಕೆ.ಎಸ್.ಭರತ್ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಮೊದಲ ಇನಿಂಗ್ಸ್ ನಲ್ಲಿ 6 ರನ್ ಗಳಿಸುವಷ್ಟರಲ್ಲಿ ವಿಕೆಟ್ ಅವರು ಕಳೆದುಕೊಂಡು ನಿರಾಸೆ ಮೂಡಿಸಿದರು. ಈ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಕೆ.ಎಸ್.ಭರತ್ ಅವರ ಬ್ಯಾಟ್‍ನಿಂದ 23 ರನ್(ಅಜೇಯ) ಮಾತ್ರ ಹರಿದುಬಂದವು. ಇಂದೋರ್ ಟೆಸ್ಟ್‌ನಲ್ಲೂ ಅವರ ಕಳಪೆ ಫಾರ್ಮ್ ಮುಂದುವರೆಯಿತು. ಭರತ್ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 30 ಎಸೆತಗಳನ್ನು ಎದುರಿಸಿ ಕೇವಲ 17 ರನ್ ಗಳಿಸಲು ಸಾಧ್ಯವಾಯಿತು. 2ನೇ ಇನ್ನಿಂಗ್ಸ್‌ನಲ್ಲಿ ಅವರ ಬ್ಯಾಟ್‌ನಿಂದ ಕೇವಲ 3 ರನ್‌ಗಳು ಬಂದವು. ಹೀಗಾಗಿ ಇಶಾನ್ ಕಿಶನ್‍ಗೆ ಅವಕಾಶ ನೀಡದೆ ರೋಹಿತ್ ಶರ್ಮಾ ವಿಲನ್ ಆಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಮುಂಬರುವ ಪಂದ್ಯದಲ್ಲಿ ಭರತ್ ಸ್ಥಾನದಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: IND vs AUS : ಟೆಸ್ಟ್‌ನಿಂದ ಈ ಆಟಗಾರನನ್ನು ಟೀಂನಿಂದ  ಹೊರಗಿಟ್ಟ ರೋಹಿತ್-ದ್ರಾವಿಡ್! 


ಅಂತಿಮ(4ನೇ ಟೆಸ್ಟ್) ಪಂದ್ಯಕ್ಕೆ ಟೀಂ ಇಂಡಿಯಾ


ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆ.ಎಸ್.ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಐಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕತ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.