ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ 2ನೇ T20 ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟಿ-20 ಪಂದ್ಯ ಹೈದರಾಬಾದ್‌ನ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿ ವಶಪಡಿಸಿಕೊಳ್ಳಲು ಸಜ್ಜಾಗಿದೆ. ಇದಕ್ಕಾಗಿ ನಾಯಕ ರೋಹಿತ್ ಶರ್ಮಾ ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಆಡುವ XI ನಲ್ಲಿ ಬದಲಾವಣೆ ಮಾಡುವ ಸಾಧ‍್ಯತೆ ಇದೆ. ಆಸೀಸ್ ವಿರುದ್ಧದ ಈ ಪಂದ್ಯಕ್ಕೆ ರೋಹಿತ್ ಫ್ಲಾಪ್ ಆಟಗಾರನೊಬ್ಬನಿಗೆ ಗೇಟ್‍ಪಾಸ್‍ ನೀಡುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಈ ಆಟಗಾರನ ಮೇಲೆ ನೇತಾಡುತ್ತಿರುವ ತೂಗುಕತ್ತಿ!


ಭಾರತದ ಸ್ಟಾರ್ ಬೌಲರ್ ಹರ್ಷಲ್ ಪಟೇಲ್ ಬಹಳ ದಿನಗಳ ನಂತರ ಟೀಂ ಇಂಡಿಯಾಗೆ ಮರಳಿದ್ದಾರೆ. ಆದರೆ ಅವರು ತಮ್ಮ ಬೌಲಿಂಗ್‌ನಲ್ಲಿ ಪ್ರಭಾವ ಬೀರುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಡೆತ್ ಓವರ್‌ಗಳಲ್ಲಿ ನೀರಿನಂತೆ ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅವರು ಟೀಂ ಇಂಡಿಯಾದ ದೊಡ್ಡ ದೌರ್ಬಲ್ಯವಾಗಿದ್ದಾರೆ. ನಿಧಾನ ಗತಿಯಲ್ಲಿ ವಿಕೆಟ್ ಕಬಳಿಸಿದರೂ ಅದರಲ್ಲಿ ಯಶಸ್ಸು ಕಾಣದಿರುವುದು ಹರ್ಷಲ್ ಪಟೇಲ್ ಅವರ ದೊಡ್ಡ ತಪ್ಪು. ಇಂತಹ ಪರಿಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾ 3ನೇ ಟಿ-20 ಪಂದ್ಯದಲ್ಲಿ ದೀಪಕ್ ಚಹಾರ್‌ಗೆ ಅವಕಾಶ ನೀಡಬಹುದು.


ಇದನ್ನೂ ಓದಿ: MS Dhoni News: ನಾಳೆ ಯಾವ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ MSD? ಸಾಮಾಜಿಕ ಮಾಧ್ಯಮದ ಮೇಲೆ ಘೋಷಣೆ


ಆಸೀಸ್ ವಿರುದ್ಧ ಹೆಚ್ಚು ರನ್ ಬಿಟ್ಟುಕೊಟ್ಟ ಹರ್ಷಲ್


ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಹರ್ಷಲ್ ಪಟೇಲ್ 4 ಓವರ್‌ಗಳ ಕೋಟಾದಲ್ಲಿ 49 ರನ್ ನೀಡಿದರು. ಇದಾದ ಬಳಿಕ 2ನೇ ಟಿ-20 ಪಂದ್ಯದಲ್ಲೂ ಅವರ ಕಳಪೆ ಫಾರ್ಮ್ ಮುಂದುವರಿದಿತ್ತು. 2ನೇ ಪಂದ್ಯದಲ್ಲಿ ಅವರು 2 ಓವರ್‌ಗಳಲ್ಲಿ 32 ರನ್ ನೀಡಿದರು. ಮತ್ತೊಂದೆಡೆ ದೀಪಕ್ ಚಹಾರ್ ಉತ್ತಮ ಲಯದಲ್ಲಿದ್ದು, ಹೊಸ ಚೆಂಡನ್ನು ಉತ್ತಮವಾಗಿ ಬಳಸುತ್ತಾರೆ. ಬೌಲಿಂಗ್ ಹೊರತುಪಡಿಸಿ ಅವರು ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಬಲ್ಲರು. ಈ ಹಿಂದೆ ಚಹಾರ್ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಸ್ವಂತ ಬಲದಿಂದಲೇ ಗೆದ್ದುಕೊಟ್ಟಿದ್ದಾರೆ.


ಟಿ-20 ವಿಶ್ವಕಪ್‌ನಲ್ಲಿ ಹರ್ಷಲ್ ಸ್ಥಾನ!?   


ಹರ್ಷಲ್ ಪಟೇಲ್ ಬಹಳ ಸಮಯದ ನಂತರ ಟೀಂ ಇಂಡಿಯಾಕ್ಕೆ ಮರಳಿದ್ದರು, ಆದರೆ ಅವರ ಈ ಮರಳುವಿಕೆ ಸ್ಮರಣೀಯವಾಗಿಲ್ಲ. ಇವರಿಂದಾಗಿಯೇ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು. ಹರ್ಷಲ್ ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ದೌರ್ಬಲ್ಯವೆಂದು ಸಾಬೀತುಪಡಿಸಬಹುದು. ಹರ್ಷಲ್ ಪಟೇಲ್ ಭಾರತ ಪರ 18 ಟಿ-20 ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ  ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ವಿಶ್ವಕಪ್ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಮೂಡಿವೆ.


ಇದನ್ನೂ ಓದಿ: IND-W vs ENG-W 3rd ODI: ಜೂಲನ್ ಗೋಸ್ವಾಮಿಗೆ ಪರಿಪೂರ್ಣ ವಿದಾಯ: ಇಂಗ್ಲೆಂಡ್ ವಿರುದ್ಧ ಗೆದ್ದ ಟೀಂ ಇಂಡಿಯಾ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.