IND vs BAN, T20I: ಭಾರತ ಮತ್ತು ಬಾಂಗ್ಲಾದೇಶ ನಡುವಿನ 3 ಪಂದ್ಯಗಳ T20I ಸರಣಿಯ ನಡುವೆ ದೊಡ್ಡ ಸುದ್ದಿ ಹೊರಬೀಳುತ್ತಿದೆ. ಗ್ವಾಲಿಯರ್‌ನಲ್ಲಿ ನಡೆದ T20I ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಸರಣಿಯ 2ನೇ ಪಂದ್ಯ ಈಗ ಅಕ್ಟೋಬರ್ 9ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ತಂಡದ ಅನುಭವಿ ಆಟಗಾರರೊಬ್ಬರು ನಿವೃತ್ತಿ ಘೋಷಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈ ಆಟಗಾರ ಬೇರೆ ಯಾರೂ ಅಲ್ಲ, 38 ವರ್ಷದ ಮಹಮ್ಮದುಲ್ಲಾ. ಹೌದು, ಅವರು T20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ವಿರುದ್ಧದ T20I ಸರಣಿಯ ನಂತರ ಕ್ರಿಕೆಟ್‌ನ ಕಡಿಮೆ ಸ್ವರೂಪಕ್ಕೆ ವಿದಾಯ ಹೇಳುವುದಾಗಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಶಕೀಬ್ ಅಲ್ ಹಸನ್ ನಿವೃತ್ತಿ ಘೋಷಣೆಯಾದ ಕೆಲವೇ ದಿನಗಳಲ್ಲಿ ಮಹಮ್ಮದುಲ್ಲಾ ನಿವೃತ್ತಿ ಘೋಷಿಸಿದ್ದು, ಬಾಂಗ್ಲಾದೇಶ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದೆ. ಅಲ್ಪಾವಧಿಯಲ್ಲಿಯೇ ಇಬ್ಬರು ದಿಗ್ಗಜರು ನಿವೃತ್ತಿಯಾಗುವ ಮೂಲಕ ಬಾಂಗ್ಲಾದೇಶ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ. ಈಗ ಈ ಆಟಗಾರರ ಸ್ಥಾನವನ್ನು ಯಾರು ತುಂಬುತ್ತಾರೆ? ಎಂಬುದನ್ನು ಕಾದು ನೋಡಬೇಕಿದೆ. ಕಳೆದ ತಿಂಗಳು ಶಕೀಬ್ ಅಲ್ ಹಸನ್ ಇದ್ದಕ್ಕಿದ್ದಂತೆ T20 ಮತ್ತು ಟೆಸ್ಟ್‌ಗಳಿಂದ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದರು. ಅವರು ತಮ್ಮ ಕೊನೆಯ T20 ಪಂದ್ಯವನ್ನು ಆಡಿದ್ದು, ಈಗ ತಮ್ಮ ಕೊನೆಯ ಟೆಸ್ಟ್ ಸರಣಿಯನ್ನು ತಮ್ಮ ದೇಶದಲ್ಲಿ ಆಡಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ:‌ IML T20 2024: 24 ವರ್ಷಗಳ ನಂತರ ಮತ್ತೆ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಸಚಿನ್ ತೆಂಡೂಲ್ಕರ್!


17 ವರ್ಷಗಳ ಕಾಲ ತಂಡದಲ್ಲಿದ್ದ ಮಹಮ್ಮದುಲ್ಲಾ!


38ರ ಹರೆಯದ ಮಹಮ್ಮದುಲ್ಲಾ 2007ರಲ್ಲಿ ಕೀನ್ಯಾ ವಿರುದ್ಧ T20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಕಳೆದ 17 ವರ್ಷಗಳಿಂದ ಬಾಂಗ್ಲಾದೇಶ ಪರ 20 ಓವರ್‌ಗಳ ಕ್ರಿಕೆಟ್‌ ಆಡುತ್ತಿದ್ದು, ಅದು ಈಗ ಮುಕ್ತಾಯವಾಗಲಿದೆ. ಶಕೀಬ್ ಅಲ್ ಹಸನ್ ಮತ್ತು ಜಿಂಬಾಬ್ವೆಯ ಸೀನ್ ವಿಲಿಯಮ್ಸ್ ನಂತರ ಮಹಮ್ಮದುಲ್ಲಾ ಮೂರನೇ ಸುದೀರ್ಘ T20 ವೃತ್ತಿಜೀವನದ ದಾಖಲೆಯನ್ನು ಹೊಂದಿದ್ದಾರೆ. ಹೌದು, ಸರಣಿಯ ಕೊನೆಯ ಪಂದ್ಯದ ಬಳಿಕ T20ಯಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಮಹಮ್ಮದುಲ್ಲಾ ಹೇಳಿದ್ದಾರೆ. ಇದನ್ನು ಈಗಾಗಲೇ ನಿರ್ಧರಿಸಲಾಗಿದೆ. ಈ ಸ್ವರೂಪಕ್ಕೆ ವಿದಾಯ ಹೇಳಲು ಮತ್ತು ಏಕದಿನ ಕ್ರಿಕೆಟ್‌ನತ್ತ ಗಮನಹರಿಸಲು ಇದು ಸರಿಯಾದ ಸಮಯವೆಂದು ನಾನು ಭಾವಿಸುತ್ತೇನೆಂದು ಅವರು ತಿಳಿಸಿದ್ದಾರೆ. ಮುಂದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಇದು ಅವರಿಗೆ ಮತ್ತು ತಂಡಕ್ಕೂ ಸರಿಯಾದ ಸಮಯ.


ಮಹಮ್ಮದುಲ್ಲಾ ಅವರು ಈ ಹಿಂದೆ 2021ರಲ್ಲಿ ಟೆಸ್ಟ್‌ನಿಂದ ನಿವೃತ್ತರಾಗಿದ್ದರು, ಆದರೆ ಅವರು ಏಕದಿನ ಪಂದ್ಯಗಳನ್ನು ಆಡುವುದನ್ನು ಮುಂದುವರೆಸಿದರು. ಭಾರತದಲ್ಲಿ ನಡೆದ 2023ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಮಹಮ್ಮದುಲ್ಲಾ 139 T20 ಪಂದ್ಯಗಳಲ್ಲಿ 117.74 ಸ್ಟ್ರೈಕ್ ರೇಟ್‌ನಲ್ಲಿ 2,395 ರನ್ ಗಳಿಸಿದ್ದಾರೆ. ಇದಲ್ಲದೆ ಅವರು T20 ಸ್ವರೂಪದಲ್ಲಿ 40 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ T20I ಸರಣಿಯ 2ನೇ ಪಂದ್ಯವನ್ನು ದೆಹಲಿಯಲ್ಲಿ ಆಡಲು ಸಕಲ ಸಿದ್ಧತೆ ನಡೆದಿದೆ. ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಅಕ್ಟೋಬರ್ 12ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.


ಇದನ್ನೂ ಓದಿ: Suryakumar Yadav: ಕೇವಲ 39 ರನ್‌ ಗಳಿಸಿದ್ರೆ ʼಈʼ ದಾಖಲೆ ಮುರಿಯಲಿರುವ ಮಿಸ್ಟರ್‌ 360 ʼಸೂರ್ಯʼ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.