IML T20 2024: 24 ವರ್ಷಗಳ ನಂತರ ಮತ್ತೆ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಸಚಿನ್ ತೆಂಡೂಲ್ಕರ್!

IML T20 2024: ಸಚಿನ್ ತೆಂಡೂಲ್ಕರ್ 24 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಅವರು ಮಾರ್ಚ್ 2000ರಲ್ಲಿ ಟೀಂ ಇಂಡಿಯಾದ ನಾಯಕರಾಗಿ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಸೌರವ್ ಗಂಗೂಲಿಗೆ ಟೀಂ ಇಂಡಿಯಾದ ನಾಯಕತ್ವವನ್ನು ಹಸ್ತಾಂತರಿಸಿದ್ದರು. ಇದೀಗ ಮತ್ತೊಮ್ಮೆ ಸಚಿನ್ ಟೀಂ ಇಂಡಿಯಾದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ.

Written by - Puttaraj K Alur | Last Updated : Oct 8, 2024, 08:37 PM IST
  • ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ (IML). ಇದು ನವೆಂಬರ್ 17ರಿಂದ ಪ್ರಾರಂಭವಾಗಲಿದೆ
  • 24 ವರ್ಷಗಳ ನಂತರ ಮತ್ತೆ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಸಚಿನ್ ತೆಂಡೂಲ್ಕರ್!
  • ಭಾರತ ಸೇರಿ ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ & ವೆಸ್ಟ್ ಇಂಡೀಸ್ ಭಾಗವಹಿಸಲಿವೆ
IML T20 2024: 24 ವರ್ಷಗಳ ನಂತರ ಮತ್ತೆ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಸಚಿನ್ ತೆಂಡೂಲ್ಕರ್! title=
ಟೀಂ ಇಂಡಿಯಾಗೆ ಮತ್ತೆ ಸಚಿನ್‌ ಕ್ಯಾಪ್ಟನ್!

IML T20 2024: ಕ್ರಿಕೆಟ್‌ನ ದೇವರು ಸಚಿನ್ ತೆಂಡೂಲ್ಕರ್ 2013ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 11 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಈ ನಡುವೆ ಸಚಿನ್ ತೆಂಡೂಲ್ಕರ್ ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ವಾಸ್ತವವಾಗಿ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಕ್ಷೇತ್ರಕ್ಕೆ ಮರಳಲಿದ್ದಾರೆ. ಸಚಿನ್ ಪುನರಾಗಮನವು ಇನ್ನಷ್ಟು ಆಸಕ್ತಿದಾಯಕವಾಗಿದೆ. ಏಕೆಂದರೆ ಅವರು ನಾಯಕನಾಗಿ 'ಅಂತಾರಾಷ್ಟ್ರೀಯ' ಪುನರಾಗಮನ ಮಾಡಲಿದ್ದಾರೆ. ವಾಸ್ತವವಾಗಿ ಹೊಸ ಟೂರ್ನಮೆಂಟ್ ಪ್ರಾರಂಭವಾಗಲಿದ್ದು, ಇದರಲ್ಲಿ ಸಚಿನ್ ತೆಂಡೂಲ್ಕರ್ ಭಾರತ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಹೊಸ ಲೀಗ್‌ನ ಹೆಸರು ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ (IML). ಇದು ನವೆಂಬರ್ 17ರಿಂದ ಪ್ರಾರಂಭವಾಗಲಿದೆ. ಭಾರತವಲ್ಲದೆ, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಈ ಲೀಗ್‌ನಲ್ಲಿ ಭಾಗವಹಿಸಲಿವೆ.

ಸಚಿನ್ ತೆಂಡೂಲ್ಕರ್ 24 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಅವರು ಮಾರ್ಚ್ 2000ರಲ್ಲಿ ಟೀಂ ಇಂಡಿಯಾದ ನಾಯಕರಾಗಿ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಸೌರವ್ ಗಂಗೂಲಿಗೆ ಟೀಂ ಇಂಡಿಯಾದ ನಾಯಕತ್ವವನ್ನು ಹಸ್ತಾಂತರಿಸಿದ್ದರು. ಇದೀಗ ಮತ್ತೊಮ್ಮೆ ಸಚಿನ್ ಟೀಂ ಇಂಡಿಯಾದ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ಈ ಟೂರ್ನಿಗಾಗಿ ಅವರ ಲಕ್ಷಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

ಇದನ್ನೂ ಓದಿ: Suryakumar Yadav: ಕೇವಲ 39 ರನ್‌ ಗಳಿಸಿದ್ರೆ ʼಈʼ ದಾಖಲೆ ಮುರಿಯಲಿರುವ ಮಿಸ್ಟರ್‌ 360 ʼಸೂರ್ಯʼ!

IMLನ ಮೊದಲ ಸೀಸನ್‌ನ ನಾಯಕರು ಈ ಕೆಳಗಿನಂತಿದ್ದಾರೆ

ಭಾರತ: ಸಚಿನ್ ತೆಂಡೂಲ್ಕರ್
ವೆಸ್ಟ್ ಇಂಡೀಸ್: ಬ್ರಿಯಾನ್ ಲಾರಾ
ಶ್ರೀಲಂಕಾ: ಕುಮಾರ ಸಂಗಕ್ಕಾರ
ಆಸ್ಟ್ರೇಲಿಯಾ: ಶೇನ್ ವ್ಯಾಟ್ಸನ್
ಇಂಗ್ಲೆಂಡ್: ಇಯಾನ್ ಮೋರ್ಗನ್
ದಕ್ಷಿಣ ಆಫ್ರಿಕಾ: ಜಾಕ್ವೆಸ್ ಕಾಲಿಸ್

ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟೂರ್ನಿಯ ಮೊದಲ ನಾಲ್ಕು ಪಂದ್ಯಗಳು ನಡೆಯಲಿವೆ. ಇದು ನವೆಂಬರ್ 17ರಂದು ಭಾರತ ಮತ್ತು ಶ್ರೀಲಂಕಾ ನಡುವಿನ ರೋಚಕ ಪಂದ್ಯದೊಂದಿಗೆ ಪ್ರಾರಂಭವಾಗಲಿದ್ದು, ಇದರಲ್ಲಿ ನಾಯಕರಾಗಿ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಮುಖಾಮುಖಿಯಾಗಲಿದ್ದಾರೆ. ಮುಂದಿನ ಪಂದ್ಯದಲ್ಲಿ ಶೇನ್ ವ್ಯಾಟ್ಸನ್ ಅವರ ಆಸ್ಟ್ರೇಲಿಯಾವು ಜಾಕ್ವೆಸ್ ಕಾಲಿಸ್ ಅವರ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ೩ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಅದೇ ರೀತಿ ಬ್ರಿಯಾನ್ ಲಾರಾ ನೇತೃತ್ವದ ವೆಸ್ಟ್ ಇಂಡೀಸ್ ತಂಡವು ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಲಿದೆ.

ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ (IML) 2024ರ ಪೂರ್ಣ ವೇಳಾಪಟ್ಟಿ

ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣ

ನವೆಂಬರ್ 17 : ಭಾರತ vs ಶ್ರೀಲಂಕಾ (ಸಂಜೆ 7:30) 
ನವೆಂಬರ್ 18 : ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ (ರಾತ್ರಿ 7:30) 
ನವೆಂಬರ್ 19 : ಶ್ರೀಲಂಕಾ vs ಇಂಗ್ಲೆಂಡ್ (ಸಂಜೆ 7:30) 
ನವೆಂಬರ್ 20 : ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ (ಸಂಜೆ 7:30) 

ಲಕ್ನೋ (ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ)

ನವೆಂಬರ್ 21 : ಭಾರತ vs ದಕ್ಷಿಣ ಆಫ್ರಿಕಾ
ನವೆಂಬರ್ 23 : ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್
ನವೆಂಬರ್ 24 : ಭಾರತ vs ಆಸ್ಟ್ರೇಲಿಯಾ
ನವೆಂಬರ್ 25 : ವೆಸ್ಟ್ ಇಂಡೀಸ್ vs ಶ್ರೀಲಂಕಾ
ನವೆಂಬರ್ 26 : ಇಂಗ್ಲೆಂಡ್ vs ಆಸ್ಟ್ರೇಲಿಯಾ
ನವೆಂಬರ್ 27 : ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ

ರಾಯ್ಪುರ್ (ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ)

ನವೆಂಬರ್ 28 : ಭಾರತ vs ಇಂಗ್ಲೆಂಡ್ (ಸಂಜೆ 7:30)
ನವೆಂಬರ್ 30 : ಶ್ರೀಲಂಕಾ vs ಇಂಗ್ಲೆಂಡ್ (ಸಂಜೆ 7:30)
ಡಿಸೆಂಬರ್‌ 01 : ಭಾರತ vs ವೆಸ್ಟ್ ಇಂಡೀಸ್ (ಸಂಜೆ 7:30) 
ಡಿಸೆಂಬರ್ 02 : ಶ್ರೀಲಂಕಾ vs ಆಸ್ಟ್ರೇಲಿಯಾ (ಸಂಜೆ 7:30) 
ಡಿಸೆಂಬರ್ 03 : ವೆಸ್ಟ್ ಇಂಡೀಸ್ vs ಇಂಗ್ಲೆಂಡ್ (ಸಂಜೆ 7:30)
ಡಿಸೆಂಬರ್ 05 : ಸೆಮಿಫೈನಲ್ 1 (ಸಂಜೆ 7:30)
ಡಿಸೆಂಬರ್ 06 : ಸೆಮಿಫೈನಲ್ 2 (ಸಂಜೆ 7:30)
ಡಿಸೆಂಬರ್ 08 :  ಫೈನಲ್ (ಸಂಜೆ 7:30)

ಇದನ್ನೂ ಓದಿ: ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು? ಬುಮ್ರಾ, ಶಮಿ, ಪಾಂಡ್ಯ ಖಂಡಿತ ಅಲ್ಲ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News