IND vs ENG 2ನೇ Odi: ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 100 ರನ್‌ಗಳ ಭಾರೀ ಅಂತರದಿಂದ ಸೋಲನುಭವಿಸಬೇಕಾಯಿತು. ಈ ಪಂದ್ಯದೊಂದಿಗೆ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-1 ಅಂತರದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿರಬಹುದು, ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಂತ್ರಿಕ ಬೌಲರ್ ಗಳು ಮಿಂಚಿದ್ದಾರೆ. ಲಾರ್ಡ್ಸ್‌ನಲ್ಲಿ ಈ ಹಿಂದೆ ಯಾವುದೇ ಭಾರತೀಯ ಬೌಲರ್ ಮಾಡದಂತಹ ಸಾಧನೆಯನ್ನ ಸೋಲಿನ ಪಂದ್ಯದಲ್ಲೂ ಈ ಬೌಲರ್ ಅದ್ಭುತ ಪ್ರದರ್ಶನ ನೀಡಿದ್ದಾನೆ. ಹಾಗಿದ್ರೆ ಈ ಬೌಲರ್ ಯಾರು? 


COMMERCIAL BREAK
SCROLL TO CONTINUE READING

ಲಾರ್ಡ್ಸ್ ನಲ್ಲಿ ಅದ್ಭುತಗಳನ್ನು ಸೃಷ್ಟಿಸಿದ ಈ ಬೌಲರ್ 


ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಅತ್ಯಂತ ಕಳಪೆಯಾಗಿತ್ತು, ಆದರೆ ಬೌಲರ್‌ಗಳು ಸಾಕಷ್ಟು ಪ್ರಭಾವ ಬೀರಿದರು. ಈ ಪಂದ್ಯದಲ್ಲಿ ಯುಜ್ವೇಂದ್ರ ಚಹಾಲ್ ಟೀಂ ಇಂಡಿಯಾದ ಯಶಸ್ವಿ ಬೌಲರ್ ಎನಿಸಿಕೊಂಡರು. ಅವರು ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ 10 ಓವರ್‌ಗಾಲ ಬೌಲಿಂಗ್ ಮಾಡಿದರು ಮತ್ತು 4.70 ರ ಎಕಾನಾಮಿಯಲ್ಲಿ ಕೇವಲ 47 ರನ್‌ಗಳನ್ನು ನೀಡಿವೆ ಮೂಲಕ 4 ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ಯುಜುವೇಂದ್ರ ಚಹಾಲ್ ಈ ಲಾರ್ಡ್ಸ್ ನಲ್ಲಿ ದೊಡ್ಡ ದಾಖಲೆ ನಿರ್ಮಿಸಿದ್ದಾರೆ.


ಇದನ್ನೂ ಓದಿ : 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸೋಲು: ಈ ಮೂವರು ಸ್ಟಾರ್‌ ಆಟಗಾರರೇ ಕಾರಣ!


ಸೋತ ಪಂದ್ಯದಲ್ಲಿ ದೊಡ್ಡ ದಾಖಲೆ


ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿರಬಹುದು, ಆದರೆ ಯುಜ್ವೇಂದ್ರ ಚಹಾಲ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಲಾರ್ಡ್ಸ್ ಮೈದಾನದಲ್ಲಿ ಪಂದ್ಯವೊಂದರಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚಾಹಲ್‌ಗೂ ಮುನ್ನ ಈ ಮೈದಾನದಲ್ಲಿ ಭಾರತದ ಯಾವುದೇ ಬೌಲರ್‌ಗಳು 3 ವಿಕೆಟ್‌ಗಿಂತ ಹೆಚ್ಚು ವಿಕೆಟ್ ಪಡೆದಿರಲಿಲ್ಲ. ಆದ್ರೆ, ಚಾಹಲ್ ಮೊಹಿಂದರ್ ಅಮರನಾಥ್, ಮದನ್ ಲಾಲ್, ಆಶಿಶ್ ನೆಹ್ರಾ ಮತ್ತು ಹರ್ಭಜನ್ ಸಿಂಗ್ ಅವರ ದಾಖಲೆ ಹಿಂದಿಕ್ಕಿದ್ದಾರೆ.


ಹೇಗಿತ್ತು ನಿನ್ನೆ ಮ್ಯಾಚ್ ಇಲ್ಲಿದೆ ನೋಡಿ ಹೈ ಲೈಟ್ಸ್


ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 246 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 38.5 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ರೀಸ್ ಟೋಪ್ಲಿ ಗರಿಷ್ಠ 6 ವಿಕೆಟ್ ಪಡೆದರು. ಹಾಗೆ, ಭಾರತದ ಪರವಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ 29-29 ರನ್ ಗಳಿಸಿದರು.


ಇದನ್ನೂ ಓದಿ : England vs India, 2nd ODI: ತೋಪ್ಲೆ ಬೌಲಿಂಗ್ ದಾಳಿಗೆ ತೋಪೆದ್ದು ಹೋದ ಭಾರತ ತಂಡ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ