2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸೋಲು: ಈ ಮೂವರು ಸ್ಟಾರ್‌ ಆಟಗಾರರೇ ಕಾರಣ!

ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಿಂದ ಮೂವರು ಆಟಗಾರರು ಅತ್ಯಂತ ಕಳಪೆ ಪ್ರದರ್ಶನ ತೋರಿದ್ದಾರೆ. ಟೀಂ ಇಂಡಿಯಾ ಸೋಲಿಗೆ ಈ ಆಟಗಾರರೇ ದೊಡ್ಡ ಕಾರಣರಾಗಿದ್ದಾರೆ. ಈ ಆಟಗಾರರ ಕಳಪೆ ಫಾರ್ಮ್‌ ಹೋರಾಟದ ಪ್ರತಿಫಲವನ್ನು ಟೀಂ ಇಂಡಿಯಾ ಸೋಲಿನ ಮೂಲಕ ಹೊರಬೇಕಾಯಿತು.   

Written by - Bhavishya Shetty | Last Updated : Jul 15, 2022, 07:41 AM IST
  • ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಸೋಲು
  • ಬರೋಬ್ಬರಿ 100 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿದೆ
  • ಇಂಗ್ಲೆಂಡ್ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ
2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸೋಲು: ಈ ಮೂವರು ಸ್ಟಾರ್‌ ಆಟಗಾರರೇ ಕಾರಣ!  title=
Ind Vs Eng

ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್  ಹೀನಾಯ ಸೋಲು ಕಂಡಿದೆ. ಬರೋಬ್ಬರಿ 100 ರನ್‌ಗಳ ಅಂತರದಿಂದ ಟೀಂ ಇಂಡಿಯಾ ಸೋಲನ್ನು ಅನುಭವಿಸಿದೆ. ಇನ್ನು ಈ ಪಂದ್ಯದಲ್ಲಿ ಕಳಪೆ ಆಟ ಪ್ರದರ್ಶನ ಮಾಡಿರುವುದೇ ಸೋಲಿಗೆ ಕಾರಣ ಎನ್ನಬಹುದು. ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಅತ್ಯಂತ ಕಳಪೆಯಾಗಿ ಆಟವಾಡಿದ್ದಾರೆ. ಇನ್ನು ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ. 

ಇದನ್ನೂ ಓದಿ: Petrol Diesel Price: ಈ ರಾಜ್ಯದಲ್ಲಿ ಪೆಟ್ರೋಲ್ 5, ಡೀಸೆಲ್ 3 ರೂ. ಇಳಿಕೆ..!

ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಿಂದ ಮೂವರು ಆಟಗಾರರು ಅತ್ಯಂತ ಕಳಪೆ ಪ್ರದರ್ಶನ ತೋರಿದ್ದಾರೆ. ಟೀಂ ಇಂಡಿಯಾ ಸೋಲಿಗೆ ಈ ಆಟಗಾರರೇ ದೊಡ್ಡ ಕಾರಣರಾಗಿದ್ದಾರೆ. ಈ ಆಟಗಾರರ ಕಳಪೆ ಫಾರ್ಮ್‌ ಹೋರಾಟದ ಪ್ರತಿಫಲವನ್ನು ಟೀಂ ಇಂಡಿಯಾ ಸೋಲಿನ ಮೂಲಕ ಹೊರಬೇಕಾಯಿತು. 

ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ, ಸ್ಟಾರ್ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಬ್ ಪಂತ್ ಕಳಪೆಯಾಗಿ ಆಟವಾಡಿದ್ದಾರೆ. ಬ್ಯಾಟಿಂಗ್‌ನಲ್ಲಿ ತೀರಾ ಹೀನಾಯವಾಗಿ ಆಟವಾಡಿರುವ ಪಂತ್‌ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ರಿಷಬ್‌ ಪಂತ್‌ ಕಣಕ್ಕಿಳಿಯುವಾಗ ಟೀಂ ಇಂಡಿಯಾ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಿತ್ತು. ಆದರೆ ತಂಡವನ್ನು ಮುನ್ನಡೆಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇನ್ನು ಪಂತ್‌ ಕಳಪೆ ಆಟದಿಂದ ಬೇಸರಗೊಂಡ ನಾಯಕ ರೋಹಿತ್ ಶರ್ಮಾ ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ. 

ಭಾರತದ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಎಂದೇ ಪ್ರಖ್ಯಾತಿ ಪಡೆದ ವಿರಾಟ್ ಕೊಹ್ಲಿ ಬಹಳ ಕಾಲದಿಂದ ಕಳಪೆ ಫಾರ್ಮ್‌ನಲ್ಲಿದ್ದಾರೆ. ಇವರು ಸಹ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕೇವಲ 16 ರನ್ ಗಳಿಸಿ ಔಟಾದರು. ಈ ದಿಗ್ಗಜ ಬ್ಯಾಟ್ಸ್‌ಮನ್‌ಗೆ ಕಳೆದ ಎರಡು ವರ್ಷಗಳಿಂದ ಕ್ರಿಕೆಟ್‌ನ ಯಾವುದೇ ಸ್ವರೂಪದಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ. ಇವರ ಈ ಕಳಪೆ ಆಟವು ಟೀಂ ಇಂಡಿಯಾದ ಸೋಲಿಗೆ ಕಾರಣವಾಗಿದೆ ಎನ್ನಬಹುದು. 

ಇನ್ನೋರ್ವ ಟೀಂ ಇಂಡಿಯಾದ ಪ್ರಬಲ ಆಟಗಾರ ಶಿಖರ್‌ ಧವನ್‌, 6 ತಿಂಗಳ ತಂಡಕ್ಕೆ ಮರಳಿದ್ದಾರೆ. ಆದರೆ ಕಳಪೆ ಫಾರ್ಮ್ ಮಾತ್ರ ಅವರನ್ನು ಬಿಡುತ್ತಿಲ್ಲ. ರೋಹಿತ್ ಶರ್ಮಾ ಬೇಗನೇ ಔಟಾದಾಗ ರನ್ ಗಳಿಸುವ ದೊಡ್ಡ ಜವಾಬ್ದಾರಿ ಅವರ ಮೇಲಿತ್ತು. ಆದರೆ ಧವನ್‌ ರನ್‌ ಗಳಿಸುವಲ್ಲಿ ಸಫಲವಾಗಿರಲಿಲ್ಲ. ಎರಡನೇ ಏಕದಿನ ಪಂದ್ಯದಲ್ಲಿ ಅವರು ಕೇವಲ 9 ರನ್ ಗಳಿಸಿದ್ದಾರೆ. 

ಇದನ್ನೂ ಓದಿ: Viral Video: ಆಕಸ್ಮಿಕವಾಗಿ ಟಾಯ್ಲೆಟ್ ನಿಂದ ಹೊರಬಂದು ಹೆಡೆ ಎತ್ತಿದ ನಾಗಪ್ಪ, ವಿಡಿಯೋ ನೋಡಿ

ಇನ್ನು ಟೀಂ ಇಂಡಿಯಾದಲ್ಲಿ ಹಲವು ಯುವ ಬ್ಯಾಟ್ಸ್‌ಮನ್‌ಗಳಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರ ನಂಬಿಕೆಯನ್ನು ಉಳಿಸಿಕೊಳ್ಳಲು ಈ ಮೂವರು ಆಟಗಾರರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಶರ್ಮಾ, ಮುಂಬರುವ ಮೂರನೇ ಪಂದ್ಯದಲ್ಲಿ ಯುವ ಆಟಗಾರರ ಮೂಲಕ ಕಣಕ್ಕೆ ಇಳಿಯುವ ಎಲ್ಲಾ ಸಾಧ್ಯತೆಗಳಿವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News