IND vs ENG: ಐತಿಹಾಸಿಕ ಟೆಸ್ಟ್ ಗೆಲುವು ಸಾಧಿಸಿದ ಭಾರತ ತಂಡ
ಮೋಟೆರಾ ಸ್ಟೇಡಿಯಂ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಎರಡನೇ ದಿನದಲ್ಲಿ ೧೦ ವಿಕೆಟ್ ಗಳ ಗೆಲುವು ಸಾಧಿಸಿದೆ.ಮೊದಲ ಇನಿಂಗ್ಸ್ ನಲ್ಲಿ ಕೇವಲ ೧೧೨ ರನ್ ಗಳಿಸಿದ್ದ ಇಂಗ್ಲೆಂಡ್ ತಂಡವು ಭಾರತ ತಂಡವನ್ನು 145 ರನ್ ಗೆ ಮೊತ್ತಕ್ಕೆ ಕಟ್ಟಿಹಾಕಿತ್ತು.
ನವದೆಹಲಿ: ಮೋಟೆರಾ ಸ್ಟೇಡಿಯಂ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಎರಡನೇ ದಿನದಲ್ಲಿ ೧೦ ವಿಕೆಟ್ ಗಳ ಗೆಲುವು ಸಾಧಿಸಿದೆ.ಮೊದಲ ಇನಿಂಗ್ಸ್ ನಲ್ಲಿ ಕೇವಲ ೧೧೨ ರನ್ ಗಳಿಸಿದ್ದ ಇಂಗ್ಲೆಂಡ್ ತಂಡವು ಭಾರತ ತಂಡವನ್ನು 145 ರನ್ ಗೆ ಮೊತ್ತಕ್ಕೆ ಕಟ್ಟಿಹಾಕಿತ್ತು.
ಮೊದಲ ಇನಿಂಗ್ಸ್ ನಲ್ಲಿ 49 ರನ್ ಗಳ ಮುನ್ನಡೆ ಕಾಯ್ದುಕೊಂಡ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಕೇವಲ ೮೧ರನ್ ಗಳಿಗೆ ಆಲೌಟ್ ಮಾಡಿತು ಭಾರತ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ಮಾಡಿದ ಆಕ್ಸರ್ ಪಟೇಲ್ ೫ ಹಾಗೂ ಆರ್ ಆಶ್ವಿನ್ ೪ ವಿಕೆಟ್ ಗಳನ್ನು ಗಳಿಸುವ ಮೂಲಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಯುನಿವರ್ಸ್ ಬಾಸ್ ರನ್ನು ಔಟ್ ಮಾಡುವ ಮೊದಲು ಅವರ ಕಾಲುಗಳನ್ನು ಕಟ್ಟಿ ಹಾಕಬೇಕು- ಆರ್.ಅಶ್ವಿನ್
ಭಾರತ ತಂಡವು ಇಂಗ್ಲೆಂಡ್ ತಂಡವು ನೀಡಿದ ಗೆಲುವಿನ ಗುರಿಯನ್ನು ಬೆನ್ನಟ್ಟಿ 7.4 ಓವರ್ ಗಳಲ್ಲಿ 49 ರನ್ ಗಳ ಗುರಿಯನ್ನು ತಲುಪಿತು.ಭಾರತ ತಂಡದ ಪರವಾಗಿ ರೋಹಿತ್ ಶರ್ಮಾ 25 ಹಾಗೂ ಶುಭ್ಮನ್ ಗಿಲ್ 15 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿಸಿದರು.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ನಲ್ಲಿ ಮುತ್ತಯ್ಯ ಮುರಳೀಧರನ್ ವಿಶ್ವದಾಖಲೆ ಸರಿಗಟ್ಟಿದ ಆರ್.ಅಶ್ವಿನ್
ಇನ್ನೊಂದೆಡೆಗೆ ಈ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ 400 ಟೆಸ್ಟ್ ವಿಕೆಟ್ ಕ್ಲಬ್‌ಗೆ ಸೇರ್ಪಡೆಯಾದ ನಾಲ್ಕನೇ ಭಾರತೀಯ ಬೌಲರ್ ಎನಿಸಿಕೊಂಡರು. ಈ ಸಾಧನೆಯನ್ನು ಅವರು ಕೇವಲ 77 ಪಂದ್ಯಗಳಲ್ಲಿ ಮಾಡಿದ್ದಾರೆ. ಇನ್ನೊಂದೆಡೆಗೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಈ ಸಾಧನೆಯನ್ನು 72 ಪಂದ್ಯಗಳಲ್ಲಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.