ನವದೆಹಲಿ: ರವಿಚಂದ್ರನ್ ಅಶ್ವಿನ್ ಅವರು ಭಾನುವಾರದಂದು 350 ಟೆಸ್ಟ್ ವಿಕೆಟ್ ಪಡೆಯುವ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಸರಿಗಟ್ಟಿದರು.
ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖ್ ಪಟ್ಟಣದಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದ 5 ನೇ ದಿನದಂದು ಈ ಸಾಧನೆ ಮಾಡಿದ್ದಾರೆ. 33 ವರ್ಷದ ಆಫ್ ಸ್ಪಿನ್ನರ್ ಕೊನೆಯ ಬಾರಿಗೆ 2018 ರ ಡಿಸೆಂಬರ್ನಲ್ಲಿ ಭಾರತ ಪರ ಟೆಸ್ಟ್ ಪಂದ್ಯವೊಂದನ್ನು ಆಡಿದ್ದರು.ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಅವರು ಸ್ಥಾನ ಪಡೆಯಲು ವಿಫಲರಾಗಿದ್ದರು.
Congratulations @ashwinravi99 for getting fastest 350 test wickets.. wish u many more 🏏
— Harbhajan Turbanator (@harbhajan_singh) October 6, 2019
ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಏಳು ವಿಕೆಟ್ಗಳನ್ನು ಪಡೆದ ನಂತರ, ರವಿಚಂದ್ರನ್ ಅಶ್ವಿನ್ ರಾತ್ರಿ ಕಾವಲುಗಾರ ಥ್ಯೂನಿಸ್ ಡಿ ಬ್ರೂಯಿನ್ರನ್ನು ಬೆಳಿಗ್ಗೆ ಔಟ್ ಮಾಡುವ ಮೂಲಕ ತಮ್ಮ 66ನೇ ಟೆಸ್ಟ್ ಪಂದ್ಯದಲ್ಲಿ ಈ ಅಪರೂಪದ ಸಾಧನೆಯನ್ನು ಮಾಡಿದರು.
Congratulations to @ashwinravi99 the spin wizard on his 350 Test wickets 👏👏
He is the joint fastest with Muralitharan to achieve this feat.#INDvSA pic.twitter.com/xsFr1XopWT
— BCCI (@BCCI) October 6, 2019
2010 ರಲ್ಲಿ ನಿವೃತ್ತರಾದ ಶ್ರೀಲಂಕಾದ ಸ್ಪಿನ್ನರ್ ಮುರಳೀಧರನ್ 66 ಟೆಸ್ಟ್ ಪಂದ್ಯಗಳಲ್ಲಿ 350 ವಿಕೆಟ್ ಪಡೆದಿದ್ದರು.ಈಗ ಆರ್ ಅಶ್ವಿನ್ ಅವರ ಈ ಸಾಧನೆಗೆ ಅನುಭವಿ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಅಭಿನಂದಿಸಿದದ್ದಾರೆ.
ಇದಕ್ಕೂ ಮೊದಲು, ಅವರು ತಮ್ಮ 300 ನೇ ಟೆಸ್ಟ್ ವಿಕೆಟ್ ಪಡೆದಾಗ, ಆಸ್ಟ್ರೇಲಿಯಾದ ಮಾಜಿ ವೇಗಿ ಆಟಗಾರ ಡೆನ್ನಿಸ್ ಲಿಲ್ಲೆ ಅವರ 54 ಟೆಸ್ಟ್ ಪಂದ್ಯದ ದಾಖಲೆಯನ್ನು ಮುರಿದಿದ್ದರು.