ನವದೆಹಲಿ: ಮೊದಲ ಏಕದಿನ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 66 ರನ್‌ಗಳಿಂದ ಮಣಿಸಿತು. ಎರಡನೇ ಏಕದಿನ ಪಂದ್ಯವನ್ನು ಶುಕ್ರವಾರ ಆಡಲಾಗುವುದು. ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಟೀಮ್ ಇಂಡಿಯಾದಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಯಾವ ಆಟಗಾರರಿಗೆ ಅವಕಾಶ ನೀಡಬಹುದೆಂದು ನೋಡೋಣ.


COMMERCIAL BREAK
SCROLL TO CONTINUE READING

ರೋಹಿತ್ ಬದಲಿಗೆ ಶುಬ್ಮನ್ ಗಿಲ್?
ರೋಹಿತ್ ಶರ್ಮಾ  (Rohit Sharma) ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗಾಯಗೊಂಡಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಮಾರ್ಕ್ ವುಡ್‌ನ ಚೆಂಡು ರೋಹಿತ್‌ನ ಮೊಣಕೈಗೆ ಬಡಿಯಿತು, ನಂತರ ನೋವಿನಿಂದ ಬಳಲುತ್ತಿದ್ದ ರೋಹಿತ್ ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಪ್ರವೇಶಿಸಲಿಲ್ಲ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ರೋಹಿತ್ ಎರಡನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಶಿಖರ್ ಧವನ್ ಜೊತೆಗೆ  ಶುಬ್ಮನ್ ಗಿಲ್ (Shubhman Gill) ಅವರನ್ನು ಇನಿಂಗ್ಸ್ ಪ್ರಾರಂಭಿಸಲು ಕಳುಹಿಸಬಹುದು ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ಓದಿ - IND vs ENG: ಎರಡನೇ ಪಂದ್ಯದ ಮೊದಲು Team Indiaಗೆ ಎರಡು ದೊಡ್ಡ ಹಿನ್ನಡೆ


ಅಯ್ಯರ್ ಬದಲಿಗೆ ಯಾರು?
ರೋಹಿತ್ ಅವರ ಹೊರತಾಗಿ ಭುಜದ ಅಸ್ಥಿರಜ್ಜು ಕಾರಣ ಶ್ರೇಯಸ್ ಅಯ್ಯರ್ (Shreyas Iyer) ಈ ಸರಣಿಯಿಂದಲೇ ಹೊರಗುಳಿದಿದ್ದಾರೆ.  ಅಯ್ಯರ್ ಬದಲಿಗೆ ತಂಡದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಗೆ ಅವಕಾಶ ನೀಡಬಹುದು. ಸೂರ್ಯ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಪದಾರ್ಪಣೆ ಮಾಡುವಾಗ ಅದ್ಭುತ ಬ್ಯಾಟಿಂಗ್ ಮಾಡಿದ್ದರು.


ಕುಲದೀಪ್ ಬದಲಿಗೆ ಚಹಲ್ :
ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್ (Kuldeep Yadav) ಅವರನ್ನು ಮುಂದಿನ ಪಂದ್ಯದಲ್ಲಿ ತಂಡದಿಂದ ಹೊರಗಿಡಬಹುದು.  ಕುಲದೀಪ್ ಬದಲಿಗೆ ಮುಂದಿನ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್ ಅವರನ್ನು ಕಣಕ್ಕಿಳಿಸಬಹುದು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ - Ind vs Eng: ಒಂದೇ ಓವರ್‌ನಲ್ಲಿ 2 ವಿಕೆಟ್‌ ಕಬಳಿಸಿ ಟ್ವಿಟರ್‌ನಲ್ಲಿ ಹೀರೋ ಆದ ಭಾರತೀಯ ಬೌಲರ್


ಭಾರತದ ಸಂಭವನೀಯ ಪ್ಲೇಯಿಂಗ್ 11:
ಶುಬ್ಮನ್ ಗಿಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಶಾರ್ದುಲ್ ಠಾಕೂರ್, ಭುವನೇಶ್ವರ ಕುಮಾರ್, ಯುಜ್ವೇಂದ್ರ ಚಾಹಲ್ ಮತ್ತು ಪ್ರಸಿದ್ಧ ಕೃಷ್ಣ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.