IND vs ENG: ಎರಡನೇ ಪಂದ್ಯದ ಮೊದಲು Team Indiaಗೆ ಎರಡು ದೊಡ್ಡ ಹಿನ್ನಡೆ

IND vs ENG: ಎರಡನೇ ಏಕದಿನ ಪಂದ್ಯಕ್ಕೂ ಮೊದಲು ಟೀಮ್ ಇಂಡಿಯಾ ಎರಡು ದೊಡ್ಡ ಹಿನ್ನಡೆ ಅನುಭವಿಸಿದೆ. ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಗಾಯದಿಂದಾಗಿ ಮುಂದಿನ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ.

Written by - Yashaswini V | Last Updated : Mar 25, 2021, 07:52 AM IST
  • ಎರಡನೇ ಪಂದ್ಯದ ಮೊದಲು ಭಾರತಕ್ಕೆ ಎರಡು ದೊಡ್ಡ ಆಘಾತ
  • ಎರಡನೇ ಪಂದ್ಯದಿಂದ ಹೊರಗುಳಿದ ಅಯ್ಯರ್ ಮತ್ತು ರೋಹಿತ್
  • ಭಾರತ ಮೊದಲ ಪಂದ್ಯವನ್ನು 66 ರನ್‌ಗಳಿಂದ ಗೆದ್ದುಕೊಂಡಿತು
IND vs ENG: ಎರಡನೇ ಪಂದ್ಯದ ಮೊದಲು Team Indiaಗೆ ಎರಡು ದೊಡ್ಡ ಹಿನ್ನಡೆ title=
Rohit Sharma, Shreyas Iyer, Ind vs Eng Second ODI

ನವದೆಹಲಿ: ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡವನ್ನು 66 ರನ್ ಗಳಿಂದ ಮಣಿಸಿತು. ಆದರೆ ಎರಡನೇ ಪಂದ್ಯದ ಮೊದಲು ಟೀಮ್ ಇಂಡಿಯಾ (Team India) ಎರಡು ದೊಡ್ಡ ಹಿನ್ನಡೆ ಅನುಭವಿಸಿದೆ. ವಾಸ್ತವವಾಗಿ, ಮೊದಲ ಪಂದ್ಯದಲ್ಲಿ ತಂಡದ ಹಿರಿಯ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ (Rohit Sharma) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಗಾಯಗೊಂಡು ಮೈದಾನದಿಂದ ಹೊರಬಂದರು. ರೋಹಿತ್ ಈಗ ಎರಡನೇ ಪಂದ್ಯದಿಂದ ಹೊರಗುಳಿದಿದ್ದರೆ, ಅಯ್ಯರ್ ಈ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ.

ಬ್ಯಾಟಿಂಗ್ ಸಮಯದಲ್ಲಿ ಗಾಯಗೊಂಡಿದ್ದ ರೋಹಿತ್ :
ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗಾಯಗೊಂಡಿದ್ದರು. ವಾಸ್ತವವಾಗಿ, ಮಾರ್ಕ್ ವುಡ್ ಅವರ ವೇಗದ ಚೆಂಡು ರೋಹಿತ್ ಅವರ ಮೊಣಕೈಗೆ ಹೊಡೆದಿದೆ, ಅದರ ನಂತರ ರೋಹಿತ್ ಶರ್ಮಾ (Rohit Sharma) ಅವರಿಗೆ ಮೊಣಕೈ ನೋವು ಕಾಣಿಸಿಕೊಂಡಿತು. ಹಾಗಾಗಿ ವೈದ್ಯಕೀಯ ಸಿಬ್ಬಂದಿ ಮೈದಾನಕ್ಕೆ ಬರಬೇಕಾಯಿತು. ನಂತರ ರೋಹಿತ್ ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಪ್ರವೇಶಿಸಲಿಲ್ಲ ಮತ್ತು ಅವರ ಜಾಗಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಬದಲಿಸಿದರು. ಇನ್ನು ಮೊಣಕೈ ನೋವಿನಿಂದಾಗಿ ಬಳಸುತ್ತಿರುವ ಹಿಟ್ಮ್ಯಾನ್ ರೋಹಿತ್ ಶರ್ಮಾ ಎರಡನೇ ಪಂದ್ಯದಲ್ಲಿ ಆಡುವುದಿಲ್ಲ. "ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮುಂದಿನ ಪಂದ್ಯದಲ್ಲಿ ಭಾಗವಹಿಸುವುದಿಲ್ಲ" ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ಇದನ್ನೂ ಓದಿ - ಕನ್ನಡಿಗ ಪ್ರಸಿದ್ಧ ಕೃಷ್ಣಾ ದಾಳಿಗೆ ತತ್ತರಿಸಿದ ಇಂಗ್ಲೆಂಡ್, ಭಾರತಕ್ಕೆ 66 ರನ್ ಗಳ ಗೆಲುವು

ಫೀಲ್ಡಿಂಗ್ ಮಾಡುವಾಗ ಶ್ರೇಯಸ್ ಗಾಯಗೊಂಡರು:
ಮತ್ತೊಂದೆಡೆ ಭುಜದ ಅಸ್ಥಿರಜ್ಜು ಕಾರಣ ಶ್ರೇಯಸ್ ಅಯ್ಯರ್ (Shreyas Iyer) ಈ ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯ ಮೊದಲಾರ್ಧದಲ್ಲಿ ಕೂಡ ಅಯ್ಯರ್ ಆಡುವ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಇಂಗ್ಲೆಂಡ್‌ನ ಇನ್ನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಜಾನಿ ಬೈರ್‌ಸ್ಟೋವ್ ಅವರ ಹೊಡೆತವನ್ನು ತಡೆಯುವ ಪ್ರಯತ್ನದಲ್ಲಿ ಶ್ರೇಯಸ್ ಅಯ್ಯರ್ ಭುಜದ ಮೂಳೆಗೆ ಏಟಾಗಿದೆ. "ಎಂಟನೇ ಓವರ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಶ್ರೇಯಸ್ ಅಯ್ಯರ್ ಅವರ ಭುಜದ ಮೂಳೆಗೆ ಪೆಟ್ಟಾಗಿದೆ" ಎಂದು ಬಿಸಿಸಿಐ ಹೇಳಿದೆ. 

ಏಪ್ರಿಲ್ 9 ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅಯ್ಯರ್ ದೆಹಲಿ ಕ್ಯಾಪಿಟಲ್ಸ್ (Delhi Capitals) ನಾಯಕತ್ವ ವಹಿಸಬೇಕಾಗಿತ್ತು. ಶ್ರೇಯಸ್ ಕಳೆದ ವರ್ಷ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್‌ಗೆ ಕರೆದೊಯ್ದರು. ಈಗ ಅವರು ತಮ್ಮ ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ ಆರು ವಾರಗಳನ್ನು ತೆಗೆದುಕೊಳ್ಳಬಹುದು ಮತ್ತು ಶಸ್ತ್ರಚಿಕಿತ್ಸೆ ಮಾಡಬೇಕಾದರೆ ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಈ ಹಿನ್ನಲೆಯಲ್ಲಿ ಅವರು ಐಪಿಎಲ್ ಪಂದ್ಯದ ಮೊದಲಾರ್ಧದಲ್ಲಿ ಆಡುವುದು ಕೂಡ ಅನುಮಾನವಾಗಿದೆ.

ಇದನ್ನೂ ಓದಿ -  Ind vs Eng: ಒಂದೇ ಓವರ್‌ನಲ್ಲಿ 2 ವಿಕೆಟ್‌ ಕಬಳಿಸಿ ಟ್ವಿಟರ್‌ನಲ್ಲಿ ಹೀರೋ ಆದ ಭಾರತೀಯ ಬೌಲರ್

ಯಾರಾಗಲಿದ್ದಾರೆ ದೆಹಲಿ ಕ್ಯಾಪಿಟಲ್ಸ್ ನಾಯಕ ?
ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ, ದೆಹಲಿ ಕ್ಯಾಪಿಟಲ್ಸ್ ನಾಯಕತ್ವವನ್ನು ರಿಷಭ್ ಪಂತ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅಥವಾ ಹಿರಿಯ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರಿಗೆ ಹಸ್ತಾಂತರಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News