IND vs ENG: ಇಂಗ್ಲೆಂಡ್ ಆಟಗಾರರ ಜೀವನ ನರಕವಾಗಬೇಕು; ಕೊಹ್ಲಿ ಹೇಳಿಕೆ ವೈರಲ್..!
ಆಂಗ್ಲರಿಗೆ ಅವರದ್ದೇ ನೆಲದಲ್ಲಿ ಮಣ್ಣುಮುಕ್ಕಿಸುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಆಟಗಾರರು.
ನವದೆಹಲಿ: ಆಂಗ್ಲರ ನೆಲದಲ್ಲಿಯೇ ಭರ್ಜರಿ ವಿಜಯ ಸಾಧಿಸುವ ಮೂಲಕ ಟೀಂ ಇಂಡಿಯಾ(Indian Cricket Team)ಇಂಗ್ಲೆಂಡ್ ಆಟಗಾರರಿಗೆ ದೊಡ್ಡ ಪಾಠವನ್ನೇ ಕಲಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಮಿಂಚಿದ ವಿರಾಟ್ ಕೊಹ್ಲಿ ಬಳಗವು ಲಾರ್ಡ್ಸ್ ಟೆಸ್ಟ್ ನಲ್ಲಿ 151 ರನ್ ಗಳ ಅವಿಸ್ಮರಣೀಯ ಗೆಲುವು ದಾಖಲಿಸಿದೆ. ಈ ಮಧ್ಯೆ ವಿರಾಟ್ ಕೊಹ್ಲಿ ಉತ್ಸಾಹಭರಿತ ಭಾಷಣವೊಂದು ವೈರಲ್ ಆಗಿದೆ.
ಟೀಂ ಇಂಡಿಯಾ ನೀಡಿದ 272 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್(England) 5ನೇ ದಿನದ ಕೊನೆಯ ಎರಡು ಸೆಷನ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಯಿತು. ಭಾರತೀಯ ಬೌಲಿಂಗ್ ದಾಳಿಗೆ ಬೆದರಿದ ಇಂಗ್ಲೆಂಡ್ ತಂಡದ ಆಟಗಾರರು ಹೆಚ್ಚುಹೊತ್ತು ಕ್ರೀಸ್ ನಲ್ಲಿ ನಿಲ್ಲದೆ ಒಬ್ಬರ ಹಿಂದೊಬ್ಬರಂತೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಗೆ ಸಿಲುಕಿದ ಇಂಗ್ಲೆಂಡ್ 51.5 ಓವರ್ ಗಳಲ್ಲಿ ಕೇವಲ 120 ರನ್ ಗಳಿಗೆ ಸರ್ವಪತನ ಕಂಡಿತು. ಲಾರ್ಡ್ಸ್ ಟೆಸ್ಟ್ ನ 4ನೇ ಇನ್ನಿಂಗ್ಸ್ ಗೂ ಮುನ್ನ ಟೀಂ ಇಂಡಿಯಾ ನಾಯಕ ಕೊಹ್ಲಿ(Virat Kohli) ಸಹ ಆಟಗಾರರಿಗೆ ಉತ್ಸಾಹಭರಿತ ಮತ್ತು ಪ್ರೇರಕ ಭಾಷಣದ ಮೂಲಕ ಫುಲ್ ಜೋಶ್ ತುಂಬಿದ್ದರು.
T20 World Cup: ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಭಾರತ-ಪಾಕ್ ಪಂದ್ಯ ಯಾವಾಗ?
ತಂಡದ ನಾಯಕನ ಮಾತುಗಳಿಂದ ಪ್ರೇರೇಪಿತವಾದ ಟೀಂ ಇಂಡಿಯಾ(Team India) ಆಂಗ್ಲರ ವಿರುದ್ಧ ತಮ್ಮಲ್ಲಿದ್ದ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಿದ್ದರು. ಭಾರತೀಯರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಆಂಗ್ಲರ ಬ್ಯಾಟಿಂಗ್ ಪಡೆ ನಲುಗಿಹೋಯಿತು. ಆರಂಭಿಕರಾಗಿ ಕಣಕ್ಕಿಳಿದ ರೋರಿ ಬರ್ನ್ಸ್ ಮತ್ತು ಡೊಮ್ ಸಿಬ್ಲಿ ಇಬ್ಬರೂ ಡಕ್ ಔಟ್ ಆಗಿ ಪೆವಿಲಿಯನ್ ಸೇರಿದರು. ಆರಂಭದಲ್ಲಿ ಒತ್ತಡಕ್ಕೆ ಸಿಲುಕಿದ ಇಂಗ್ಲೆಂಡ್ ತಂಡ ನಂತರ ಚೇತರಿಸಿಕೊಳ್ಳಲು ಆಗಲಿಲ್ಲ. ಒಬ್ಬರ ಹಿಂದೊಬ್ಬರಂತೆ ವಿಕೆಟ್ ಒಪ್ಪಿಸಿದ ಇಂಗ್ಲೆಂಡ್ ತಂಡ ಕೊನೆಗೆ 151ರನ್ ಗಳ ಹೀನಾಯ ಸೋಲು ಕಂಡಿತು.
ಇದನ್ನೂ ಓದಿ: Heartbreaking!: ಎಂ.ಎಸ್.ಧೋನಿ ಭೇಟಿಯಾಗಲು 1,400 ಕಿ.ಮೀ ನಡೆದುಹೋದ ಅಭಿಮಾನಿ..!
ಆಂಗ್ಲರಿಗೆ ಅವರದ್ದೇ ನೆಲದಲ್ಲಿ ಮಣ್ಣುಮುಕ್ಕಿಸುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಆಟಗಾರರು ಐತಿಹಾಸಿಕ ಲಾರ್ಡ್ಸ್ ಮೈದಾನ(Lords Cricket Ground)ದಲ್ಲಿ ಗೆಲುವಿನ ವಿಜಯೋತ್ಸವ ಆಚರಿಸಿದರು. ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಆಟಗಾರರನ್ನು ಉದ್ದೇಶಿಸಿ ಮಾಡಿರುವ ಭಾಷಣದ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಂಗ್ಲರಿಗೆ ನರಕ ತೋರಿಸಬೇಕು ಎಂದು ಹೇಳಿದ್ದ ನಾಯಕನ ಮಾತಿನಂತೆ ಸಹಆಟಗಾರರು ನಡೆದುಕೊಂಡಿರುವುದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ