IND VS ENG: ಲಾರ್ಡ್ಸ್‌ನಲ್ಲಿ ಐತಿಹಾಸಿಕ ಗೆಲುವಿನ ನಂತರ ವಿರಾಟ್ ಕೊಹ್ಲಿ ಎಂ.ಎಸ್. ಧೋನಿಯನ್ನು ನೆನೆದಿದ್ದೇಕೆ?

ಎಂಎಸ್ ಧೋನಿ ನಾಯಕತ್ವದಲ್ಲಿ, ಟೀಮ್ ಇಂಡಿಯಾ 2014 ರಲ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಟೆಸ್ಟ್ ಗೆದ್ದಿತು. 7 ವರ್ಷಗಳ ನಂತರ, ವಿರಾಟ್ ಕೊಹ್ಲಿ ಈ ಮೈದಾನದಲ್ಲಿ ಇತಿಹಾಸವನ್ನು ಪುನರಾವರ್ತಿಸಿದ್ದಾರೆ.

Written by - Yashaswini V | Last Updated : Aug 17, 2021, 08:53 AM IST
  • ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅದ್ಭುತ ಗೆಲುವು
  • ಧೋನಿ 2014 ರಲ್ಲಿ ಲಾರ್ಡ್ಸ್‌ನಲ್ಲಿ ಗೆದ್ದಿದ್ದರು
  • ವಿರಾಟ್ ಕೊಹ್ಲಿ ಕೂಡ ಆ ಗೆಲುವಿನ ಭಾಗವಾಗಿದ್ದರು
IND VS ENG: ಲಾರ್ಡ್ಸ್‌ನಲ್ಲಿ ಐತಿಹಾಸಿಕ ಗೆಲುವಿನ ನಂತರ ವಿರಾಟ್ ಕೊಹ್ಲಿ ಎಂ.ಎಸ್. ಧೋನಿಯನ್ನು ನೆನೆದಿದ್ದೇಕೆ? title=
Image courtesy: PTI

ಲಂಡನ್: ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ 151 ರನ್ ಗೆಲುವಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಡೀ ತಂಡಕ್ಕೆ ಮನ್ನಣೆ ನೀಡಿದ್ದಾರೆ. ಎರಡನೇ ಇನ್ನಿಂಗ್ಸ್ ನಲ್ಲಿ 9 ನೇ ವಿಕೆಟ್ ಗೆ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರ ಜೊತೆಯಾಟ ತಂಡಕ್ಕೆ ಗೆಲುವಿನ ವಾತಾವರಣವನ್ನು ಸೃಷ್ಟಿಸಿತು ಎಂದು ಅವರು ಹೇಳಿದರು.

ಶಮಿ-ಬುಮ್ರಾ :
ಮೊಹಮ್ಮದ್ ಶಮಿ  (Mohammed Shami) 56 * ಮತ್ತು ಜಸ್ಪ್ರೀತ್ ಬುಮ್ರಾ (Jasprit Bumrah) 34 * ಗಳಿಸಿದರು. ಈ ಇಬ್ಬರ ನಡುವಿನ 89 ರನ್ ಜತೆಯಾಟದ ನಂತರ, ಭಾರತ ತನ್ನ ಎರಡನೇ ಇನ್ನಿಂಗ್ಸ್ ಅನ್ನು 8 ವಿಕೆಟ್ ಗೆ 298 ಕ್ಕೆ ಡಿಕ್ಲೇರ್ ಮಾಡಿತು ಮತ್ತು ಇಂಗ್ಲೆಂಡಿಗೆ 272 ರನ್ ಗಳ ಗುರಿಯನ್ನು ನೀಡಿತು. ಇದರ ನಂತರ ಇಡೀ ಇಂಗ್ಲೆಂಡ್ ತಂಡ 120 ರನ್ ಗಳಿಗೆ ಆಲೌಟ್ ಆಯಿತು.

ಪಂದ್ಯದ ನಂತರ ವಿರಾಟ್ ಕೊಹ್ಲಿ, 'ಇಡೀ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ. ಪಿಚ್‌ನ ಮೊದಲ 3 ದಿನಗಳಲ್ಲಿ ಬೌಲರ್‌ಗಳ ಸಹಾಯ ಸಿಗಲಿಲ್ಲ. ಆದರೆ ನಾವು ನಮ್ಮ ಕಾರ್ಯತಂತ್ರವನ್ನು ಉತ್ತಮವಾಗಿ ಕಾರ್ಯಗತಗೊಳಿಸಿದ್ದೇವೆ. ಎರಡನೇ ಇನಿಂಗ್ಸ್‌ನಲ್ಲಿ ಒತ್ತಡದ ಪರಿಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ಮಾಡಿದ ರೀತಿಗೆ ಸಾಟಿಯಿಲ್ಲ ಎಂದರು.

ಇದನ್ನೂ ಓದಿ- ಲಾರ್ಡ್ಸ್ ನಲ್ಲಿ ಲಾರ್ಡ್ ಗಳಾದ ಟೀಮ್ ಇಂಡಿಯಾ ಬೌಲರ್ ಗಳು, ಭಾರತಕ್ಕೆ ಭರ್ಜರಿ ಜಯ

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಇಂತಹ ಪಾಲುದಾರಿಕೆಗಳನ್ನು ಮಾಡಲು ಹೆಚ್ಚಿನ ಅವಕಾಶಗಳು ಸಿಗುವುದಿಲ್ಲ ಮತ್ತು ನಾವು ಯಶಸ್ವಿಯಾದಾಗಲೆಲ್ಲಾ, ನಮ್ಮ ಕೆಳ ಕ್ರಮಾಂಕವು ಕೊಡುಗೆ ನೀಡಿದೆ. 60 ಓವರ್‌ಗಳಲ್ಲಿ 272 ರನ್ ಗಳಿಸುವುದು ಕಷ್ಟ. ಆದರೆ 10 ವಿಕೆಟ್ ತೆಗೆದುಕೊಳ್ಳಬಹುದು ಎಂದು ತಿಳಿದಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದರು.

ಗೆಲುವಿನ ಯೋಜನೆ ಹೀಗಿತ್ತು:
ವಿರಾಟ್ ಕೊಹ್ಲಿ (Virat Kohli), 'ನಾವು 10 ವಿಕೆಟ್ ತೆಗೆದುಕೊಳ್ಳಬಹುದು ಎಂದು ನಮಗೆ ತಿಳಿದಿತ್ತು. ಮೈದಾನದಲ್ಲಿ ಸ್ವಲ್ಪ ಒತ್ತಡವು ನಮಗೆ ಸ್ಫೂರ್ತಿ ನೀಡಿತು. ನಾವು ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಪ್ರೋತ್ಸಾಹಿಸಲು ಬಯಸಿದ್ದೆವು ಮತ್ತು ನಾವು ಅವರಿಗೆ ಹೊಸ ಚೆಂಡನ್ನು ಹಸ್ತಾಂತರಿಸಿದೆವು. ಅವರು ಕೂಡ ನಮ್ಮ ನಿರೀಕ್ಷೆಗೆ ತಕ್ಕಂತೆ ಪಂದ್ಯವನ್ನು ಮುನ್ನಡೆಸಿದರು ಎಂದರು.

ಇದನ್ನೂ ಓದಿ- Ball tampering: ಲಾರ್ಡ್ಸ್ ಟೆಸ್ಟ್ ನಲ್ಲಿ ಆಂಗ್ಲರ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ..!

ಧೋನಿಯನ್ನು ನೆನೆದ ವಿರಾಟ್:
ಲಾರ್ಡ್ಸ್‌ನಲ್ಲಿ ಭಾರತಕ್ಕೆ ಇದು ಮೂರನೇ ಗೆಲುವು. ಈ ಹಿಂದೆ, 2014 ರಲ್ಲಿ ಟೀಂ ಇಂಡಿಯಾ ಎಂಎಸ್ ಧೋನಿ (MS Dhoni) ನಾಯಕತ್ವದಲ್ಲಿ ಇಲ್ಲಿ ಗೆದ್ದಿದ್ದರು. ವಿರಾಟ್ ಕೊಹ್ಲಿ ಕೂಡ ಆ ತಂಡದ ಭಾಗವಾಗಿದ್ದರು. 2014 ರಲ್ಲಿ ಧೋನಿ ಭಾಯ್ ಜೊತೆಗೆ ನಾನು ಆ ತಂಡದ ಭಾಗವಾಗಿದ್ದೆ, ಆದರೆ ಇಂದು 60 ಓವರ್‌ಗಳಲ್ಲಿ ಗೆದ್ದಿರುವುದು ಅದ್ಭುತವಾಗಿದೆ ಎಂದು ಕೊಹ್ಲಿ ಹೇಳಿದರು. ಮೊಹಮ್ಮದ್ ಸಿರಾಜ್ ಮೊದಲ ಬಾರಿಗೆ ಲಾರ್ಡ್ಸ್‌ನಲ್ಲಿ ಆಡುತ್ತಿದ್ದರು ಮತ್ತು ಅವರು ಅದ್ಭುತ ಬೌಲಿಂಗ್ ಮಾಡಿದರು. ಈ ಗೆಲುವಿಗಿಂತ ಭಾರತೀಯ ಅಭಿಮಾನಿಗಳಿಗೆ ಬೇರೇನೂ ಉತ್ತಮ ಕೊಡುಗೆಯಾಗಲಾರದು ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News