IND-W vs ENG-W 3rd ODI: ಜೂಲನ್ ಗೋಸ್ವಾಮಿಗೆ ಪರಿಪೂರ್ಣ ವಿದಾಯ: ಇಂಗ್ಲೆಂಡ್ ವಿರುದ್ಧ ಗೆದ್ದ ಟೀಂ ಇಂಡಿಯಾ
ಹರ್ಮನ್ಪ್ರೀತ್ ಕೌರ್ ನೇತೃತ್ವದ ತಂಡವು ಜೂಲನ್‌ಗೆ ಸೂಕ್ತವಾದ ವಿದಾಯ ನೀಡಲು ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತಿತ್ತು. ಇದೀ ಆ ಪ್ರಯತ್ನ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 45.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತ್ತು.
IND-W vs ENG-W ODI: ಟೀಂ ಇಂಡಿಯಾ ಇಂದು ತನ್ನ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವ ವೇಗಿ ಜೂಲನ್ ಗೋಸ್ವಾಮಿಗೆ ಪರಿಪೂರ್ಣ ವಿದಾಯ ಹೇಳಿದೆ. ಇಂಗ್ಲೆಂಡ್ ನ್ನು ಟೀಂ ಇಂಡಿಯಾ 16 ರನ್ ಅಂತರದಿಂದ ಸೋಲಿಸಿದ್ದು, ಗೆಲುವಿನ ನಗೆ ಬೀರಿದೆ.
ಇದನ್ನೂ ಓದಿ: ಲೆಜೆಂಡರಿ ವೇಗಿ Jhulan Goswami Retirement: ಟೀಂ ಇಂಡಿಯಾ ಕಣ್ಣೀರು-ಇಂಗ್ಲೆಂಡ್ ನಿಂದ ಸಿಕ್ತು ‘Guard of Honour'
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು ಜೂಲನ್‌ಗೆ ಸೂಕ್ತವಾದ ವಿದಾಯ ನೀಡಲು ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತಿತ್ತು. ಇದೀ ಆ ಪ್ರಯತ್ನ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 45.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ 43.4 ಓವರ್ ಗೆ ಆಲೌಟ್ ಆಗಿ 153 ರನ್ ಬಾರಿಸಿತ್ತು. ಈ ಮೂಲಕ ಭಾರತ 16 ರನ್ ಗಳ ಗೆಲುವು ಸಾಧಿಸಿದೆ.
ಇದನ್ನೂ ಓದಿ: ನಾಳೆ ಯಾವ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ MSD? ಸಾಮಾಜಿಕ ಮಾಧ್ಯಮದ ಮೇಲೆ ಘೋಷಣೆ
ಜೂಲನ್ ಗೆ ಗೌರವ:
ಇಂದು ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಲೆಜೆಂಡರಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂತಿಮ ಬಾರಿಗೆ ಬ್ಯಾಟಿಂಗ್ ಮಾಡಲು ಹೊರನಡೆಯುತ್ತಿರುವಾಗ ಆಟಗಾರರಿಂದ ಗಾರ್ಡ್ ಆಫ್ ಆನರ್ ಸ್ವೀಕರಿಸಿದರು. ತನ್ನ ಕೊನೆಯ ಅಂತರಾಷ್ಟ್ರೀಯ ಪಂದ್ಯಕ್ಕಾಗಿ ಮೈದಾನಕ್ಕಿಳಿದ ಜೂಲನ್ ಇಂಗ್ಲೆಂಡ್ ವಿರುದ್ಧ ಭಾರತಕ್ಕಾಗಿ ಟಾಸ್ ಮಾಡಿದ ಗೌರವವನ್ನು ಪಡೆದರು. 2009 ರಲ್ಲಿ ಜೂಲನ್ ನಾಯಕತ್ವದಲ್ಲಿ ಪಾದಾರ್ಪಣೆ ಮಾಡಿದ ನಾಯಕಿ ಹರ್ಮನ್ಪ್ರೀತ್ ಕೌರ್, ಜೂಲನ್ ತಂಡವನ್ನು ಉದ್ದೇಶಿಸಿ ಮಾತನಾಡುವಾಗ ಕಣ್ಣೀರು ಹಾಕಿದರು. ಅಷ್ಟೇ ಅಲ್ಲದೆ ಇಂಗ್ಲೆಂಡ್ ಮುಖ್ಯ ಕೋಚ್ ಲೀಸಾ ಕೀಟ್ಲಿ ಅವರು ಗೋಸ್ವಾಮಿ ಅವರಿಗೆ ಹಂಗಾಮಿ ಇಸಿಬಿ ಸಿಇಒ ಕ್ಲೇರ್ ಕಾನರ್ ಜೊತೆಗೆ ಇಂಗ್ಲೆಂಡ್ ಆಟಗಾರರು ಸಹಿ ಮಾಡಿದ ಶರ್ಟ್ ಅನ್ನು ನೀಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.