Team India : ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಈ ಆಟಗಾರನಿಗೆ ವಿಲನ್ ಆಗು ಕಾಡುತ್ತಿದ್ದಾನೆ, ಆದರೆ ಈಗ ಶಿಖರ್ ಧವನ್ ಕೂಡ ಈ ಆಟಗಾರನಿಗೆ ವಿಲನ್ ಆಗಲಿದ್ದಾರೆ. ಹೇಗೆ ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಆಟಗಾರನೊಬ್ಬ ಇಡೀ ಸರಣಿಯಲ್ಲಿ ಬೆಂಚ್ ಮೇಲೆ ಕುಳಿತು ಟೈಮ್ ಪಾಸ್ ಮಾಡಬೇಕಾಯಿತು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಈ ಆಟಗಾರನಿಗೆ ವಿಲನ್ ಆಗಿದ್ದಾರೆ, ಆದರೆ ಈಗ ಶಿಖರ್ ಧವನ್ ಕೂಡ ಈ ಆಟಗಾರನಿಗೆ ವಿಲನ್ ಆಗಲಿದ್ದಾರೆ.


ಇದನ್ನೂ ಓದಿ : Team India: ರೋಹಿತ್ ಮತ್ತು ಹಾರ್ದಿಕ್ ಪಾಂಡ್ಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ರವಿ ಶಾಸ್ತ್ರಿ!


ವಾಸ್ತವವಾಗಿ, ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶಿಖರ್ ಧವನ್ ಟೀಂ ಇಂಡಿಯಾವನ್ನು ನಾಯಕನಾಗಿ ನಿರ್ವಹಿಸಲಿದ್ದಾರೆ. ಇಷ್ಟವಿಲ್ಲದಿದ್ದರೂ ಟೀಂ ಇಂಡಿಯಾದ ವೇಗಿ ಉಮ್ರಾನ್ ಮಲಿಕ್ ಗೆ ನಾಯಕ ಶಿಖರ್ ಧವನ್ ವಿಲನ್ ಆಗಲು ಹೊರಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ODI ಸರಣಿಯಲ್ಲಿ, ನಾಯಕ ಶಿಖರ್ ಧವನ್ ವೇಗದ ಬೌಲರ್ ಉಮ್ರಾನ್ ಮಲಿಕ್‌ಗೆ ಪ್ಲೇಯಿಂಗ್ ಹನ್ನೊಂದರಲ್ಲಿ ಒಂದೇ ಒಂದು ಪಂದ್ಯಕ್ಕೆ ಅವಕಾಶ ನೀಡದೆ ಹೊರಗೆ ಕುಡಿಸಿದ್ದಾರೆ.


ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಉಮ್ರಾನ್ ಮಲಿಕ್‌ಗೆ ಅವಕಾಶ ಸಿಗುವುದು ತುಂಬಾ ಕಷ್ಟವಾಗಿತ್ತು. ಟೀಂ ಇಂಡಿಯಾ ಈಗಾಗಲೇ ವೇಗದ ಬೌಲರ್‌ಗಳಾದ ಅರ್ಷದೀಪ್ ಸಿಂಗ್, ದೀಪಕ್ ಚಹಾರ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಪ್ಲೇಯಿಂಗ್ XI ನಲ್ಲಿ ಆಯ್ಕೆಯ ಸ್ಪರ್ಧೆಯಲ್ಲಿದ್ದಾರೆ. ಹೀಗಾಗಿ, ಈ ವೇಗದ ಬೌಲರ್‌ಗಳ ಹೊರತಾಗಿಯೂ, ಉಮ್ರಾನ್ ಮಲಿಕ್ ಅವರಂತಹ ಯುವ ವೇಗದ ಬೌಲರ್ ಅನ್ನು ಪ್ಲೇಯಿಂಗ್ XI ಗೆ ಆಯ್ಕೆ ಮಾಡುವುದು ತುಂಬಾ ಕಷ್ಟವಾಗಿದೆ.


ಉಮ್ರಾನ್ ಮಲಿಕ್ ಗಂಟೆಗೆ 150 ಕಿಮೀ ವೇಗದಲ್ಲಿ ನಿರಂತರವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೂನ್ 2022 ರಲ್ಲಿ ಐರ್ಲೆಂಡ್ ಪ್ರವಾಸದಲ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಉಮ್ರಾನ್ ಮಲಿಕ್, ಇದುವರೆಗೆ ಕೇವಲ 3 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.


ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ನಂತರ, ವೇಗದ ಬೌಲರ್ ಉಮ್ರಾನ್ ಮಲಿಕ್ ಟೀಂ ಇಂಡಿಯಾ ಪರ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆಯಲಿಲ್ಲ, ಇದೀಗ ಉಮ್ರಾನ್ ಮಲಿಕ್ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕುಳಿತುಕೊಳ್ಳಬೇಕಾಗಿದೆ.


ಇದನ್ನೂ ಓದಿ : Virat Kohli: ಈ ಸ್ಟಾರ್ ಆಟಗಾರನಿಂದ ವಿರಾಟ್ ಕೊಹ್ಲಿಗೆ ಬೆದರಿಕೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.