Virat Kohli: ಈ ಸ್ಟಾರ್ ಆಟಗಾರನಿಂದ ವಿರಾಟ್ ಕೊಹ್ಲಿಗೆ ಬೆದರಿಕೆ!

SuryaKumar Yadav, IND vs NZ: ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಎದುರಿಸಿದ ಸೋಲಿನ ನಂತರ, ನ್ಯೂಜಿಲೆಂಡ್‌ನ ಆತಿಥ್ಯದಲ್ಲಿ ಭಾರತವು ಈ ಸ್ವರೂಪದಲ್ಲಿ ಅದ್ಭುತ ಪುನರಾಗಮನವನ್ನು ಮಾಡಿದೆ. ನಿಯಮಿತ ನಾಯಕ ರೋಹಿತ್ ಶರ್ಮಾ, ಡ್ಯಾಶಿಂಗ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಟಿ 20 ಸರಣಿಗೆ ಹಾರ್ದಿಕ್ ಪಾಂಡ್ಯ ಅವರಿಗೆ ತಂಡದ ನಾಯಕತ್ವವನ್ನು ನೀಡಲಾಗಿತ್ತು.

Written by - Bhavishya Shetty | Last Updated : Nov 23, 2022, 07:45 AM IST
    • ಭಾರತ ಈ ಟಿ20 ಸರಣಿಯನ್ನು 1-0ಯಿಂದ ಗೆದ್ದುಕೊಂಡಿತು
    • ಇದೇ ವೇಳೆ ಸೂರ್ಯಕುಮಾರ್ ಯಾದವ್ ಮಿಂಚಿದ್ದರು
    • ಸೂರ್ಯ ಕುಮಾರ್ ಆಟದ ವೈಖರಿ ವಿರಾಟ್ ಗೆ ಸಮಸ್ಯೆಯಾಗುವ ಸಾಧ್ಯತೆ
Virat Kohli: ಈ ಸ್ಟಾರ್ ಆಟಗಾರನಿಂದ ವಿರಾಟ್ ಕೊಹ್ಲಿಗೆ ಬೆದರಿಕೆ! title=
Virat Kohli

SuryaKumar Yadav, IND vs NZ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯ ಮೂರನೇ ಟಿ20 ಪಂದ್ಯ ಟೈ ಆಗಿದ್ದು, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಭರ್ಜರಿ ಯಶಸ್ಸು ಕಂಡಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಈ ಟಿ20 ಸರಣಿಯನ್ನು 1-0ಯಿಂದ ಗೆದ್ದುಕೊಂಡಿತು. ಈ ಸರಣಿಯಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇದೇ ವೇಳೆ ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಆಟಗಾರರು ತಮ್ಮ ಆಟದಲ್ಲಿ ಮಿಂಚಿದ್ದರು. ವಿರಾಟ್ ಕೊಹ್ಲಿ ಅವರ ನೆಚ್ಚಿನ ಸಂಖ್ಯೆ 3 ಆಗಿದ್ದು, ಆ ಸಂಖ್ಯೆಯಲ್ಲಿ ಸೂರ್ಯಕುಮಾರ್ ಬ್ಯಾಟ್ ಮಾಡಿದ್ದರು

ಇದನ್ನೂ ಓದಿ: FIFA World Cup 2022: FIFA ಲೈವ್ ವರದಿ ಮಾಡುತ್ತಿದ್ದ ಪತ್ರಕರ್ತೆಯ ಬ್ಯಾಗ್ ಕಳ್ಳತನ: ದೂರು ಕೊಡಲು ಹೋದಾಕೆಗೆ ಕಾದಿತ್ತು ಆಶ್ವರ್ಯ!

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಎದುರಿಸಿದ ಸೋಲಿನ ನಂತರ, ನ್ಯೂಜಿಲೆಂಡ್‌ನ ಆತಿಥ್ಯದಲ್ಲಿ ಭಾರತವು ಈ ಸ್ವರೂಪದಲ್ಲಿ ಅದ್ಭುತ ಪುನರಾಗಮನವನ್ನು ಮಾಡಿದೆ. ನಿಯಮಿತ ನಾಯಕ ರೋಹಿತ್ ಶರ್ಮಾ, ಡ್ಯಾಶಿಂಗ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಟಿ 20 ಸರಣಿಗೆ ಹಾರ್ದಿಕ್ ಪಾಂಡ್ಯ ಅವರಿಗೆ ತಂಡದ ನಾಯಕತ್ವವನ್ನು ನೀಡಲಾಗಿತ್ತು.

ವಿರಾಟ್‌ಗೆ ಬೆದರಿಕೆಯೊಡ್ಡಿದ ಸೂರ್ಯ?

ದೇಶಿಯ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಸೂರ್ಯಕುಮಾರ್ ಯಾದವ್ ಈ ವರ್ಷ ದಿಟ್ಟ ಪ್ರದರ್ಶನ ನೀಡಿದ್ದಾರೆ. ಇತ್ತೀಚಿನ ಟಿ20 ವಿಶ್ವಕಪ್‌ನಲ್ಲೂ ಸೂರ್ಯ ಅಬ್ಬರಿಸಿದ್ದರು ಮತ್ತು ವಿರಾಟ್ ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದರು. ನ್ಯೂಜಿಲೆಂಡ್‌ನಲ್ಲೂ ಅವರು ಅದೇ ಫಾರ್ಮ್ ಅನ್ನು ಉಳಿಸಿಕೊಂಡರು. ಸೂರ್ಯಕುಮಾರ್ ಅವರು ಸರಣಿಯ ಟಾಪ್ ಸ್ಕೋರರ್ ಆಗಿದ್ದು, 2 ಪಂದ್ಯಗಳಲ್ಲಿ 124 ಸರಾಸರಿಯಲ್ಲಿ ಶತಕ ಸೇರಿದಂತೆ 124 ರನ್ ಗಳಿಸಿದರು. ಸೂರ್ಯಕುಮಾರ್ ಸಾಮಾನ್ಯವಾಗಿ 4 ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಆದರೆ ಈಗ ಅವರ ಅನುಪಸ್ಥಿತಿಯಲ್ಲಿ, ಅವರು ಸಂಖ್ಯೆ -3 ರನಲ್ಲಿಯೂ ಆಡಿದ್ದಾರೆ. ಹೀಗಿರುವಾಗ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಜೊತೆ ಹೋಲಿಕೆ ಮಾಡತೊಡಗಿದ್ದಾರೆ:

ಇದನ್ನೂ ಓದಿ: ಮಗಳ ಜೊತೆ ವಿರುಷ್ಕಾ ಉತ್ತರಾಖಂಡ ಪ್ರವಾಸ : ಕರೋಲಿ ಬಾಬಾ ಆರ್ಶೀವಾದ ಪಡೆದ ಸ್ಟಾರ್‌ ದಂಪತಿ

ಅಗತ್ಯ ಬಿದ್ದಾಗ ಎಷ್ಟೇ ಸಂಖ್ಯೆಯಲ್ಲೂ ಬ್ಯಾಟಿಂಗ್ ಮಾಡಬಲ್ಲೆ ಎಂಬುದನ್ನು ಸೂರ್ಯಕುಮಾರ್ ಸಾಬೀತುಪಡಿಸಿದ್ದಾರೆ. ನ್ಯೂಜಿಲೆಂಡ್‌ನ ಆತಿಥ್ಯದಲ್ಲಿ ಅವರು ಕಡಿಮೆ ಮಾದರಿಯಲ್ಲಿ ಶತಕ ಗಳಿಸಿದ ರೀತಿ ಶ್ಲಾಘನೀಯ. ಸೂರ್ಯಕುಮಾರ್ ಕಳೆದ ವರ್ಷವಷ್ಟೇ ಟಿ20 ಅಂತರಾಷ್ಟ್ರೀಯಕ್ಕೆ ಪದಾರ್ಪಣೆ ಮಾಡಿದ್ದರು. ಅವರು ಈ ಮಾದರಿಯಲ್ಲಿ ಭಾರತಕ್ಕಾಗಿ 42 ಪಂದ್ಯಗಳಲ್ಲಿ 2 ಶತಕ ಮತ್ತು 12 ಅರ್ಧ ಶತಕಗಳ ಸಹಾಯದಿಂದ 1408 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಅವರು 13 ಪಂದ್ಯಗಳಲ್ಲಿ ಎರಡು ಅರ್ಧಶತಕಗಳೊಂದಿಗೆ 340 ರನ್ ಗಳಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News