ನ್ಯೂಜಿಲೆಂಡ್ ವಿರುದ್ಧ ವಿರಾಟ್ ಬದಲಿಗೆ ಬೌಲರ್ಗೆ ಚಾನ್ಸ್!
ನ್ಯೂಜಿಲೆಂಡ್ ವಿರುದ್ದದ ಎರಡನೇ ಪಂದ್ಯಕ್ಕೆ ಮ್ಯಾಚ್ ವಿನ್ನರ್ ಆಟಗಾರನಾಗಿ ಅವಕಾಶ ನೀಡಲಾಗಿದೆ. ಈ ಆಟಗಾರ ಅನೇಕ ಸಂದರ್ಭಗಳಲ್ಲಿ ವಿರಾಟ್ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ತುಂಬಿದ್ದಾರೆ. ಹಾಗಿದ್ರೆ, ಆಟಗಾರ ಯಾರು? ಇಲ್ಲಿದೆ ನೋಡಿ..
IND vs NZ 2nd T20 Match : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವು ನವೆಂಬರ್ 20 ರಂದು ಮೌಂಟ್ ಮೌಂಗನುಯಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ, ನ್ಯೂಜಿಲೆಂಡ್ ವಿರುದ್ದದ ಎರಡನೇ ಪಂದ್ಯಕ್ಕೆ ಮ್ಯಾಚ್ ವಿನ್ನರ್ ಆಟಗಾರನಾಗಿ ಅವಕಾಶ ನೀಡಲಾಗಿದೆ. ಈ ಆಟಗಾರ ಅನೇಕ ಸಂದರ್ಭಗಳಲ್ಲಿ ವಿರಾಟ್ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ತುಂಬಿದ್ದಾರೆ. ಹಾಗಿದ್ರೆ, ಆಟಗಾರ ಯಾರು? ಇಲ್ಲಿದೆ ನೋಡಿ..
ವಿರಾಟ್ ಬದಲಿಗೆ ಆಡಲಿದ್ದಾರೆ ಈ ಆಟಗಾರ
ನ್ಯೂಜಿಲೆಂಡ್ ವಿರುದ್ಧದ ಈ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುವುದನ್ನು ಕಾಣಬಹುದು. ಟಿ20ಯಲ್ಲಿ ವಿರಾಟ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಮತ್ತು ಶ್ರೇಯಸ್ ಅಯ್ಯರ್ ಅವರು ಈ ಸಂಖ್ಯೆಯಲ್ಲಿ ಆಡುವಾಗ ಅನೇಕ ಪಂದ್ಯ-ವಿಜೇತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. 2022 ರ ಟಿ 20 ವಿಶ್ವಕಪ್‌ನಲ್ಲಿ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದಲ್ಲಿ ಆಡಿರಲಿಲ್ಲ.
ಇದನ್ನೂ ಓದಿ : Rohit Sharma ಕೆಳಗಿಳಿಸಿ ಈ ಆಟಗಾರನಿಗೆ ನಾಯಕತ್ವ ನೀಡಲು BCCI ಮಾಸ್ಟರ್ ಪ್ಲಾನ್!
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ
ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಸಿಂಗ್ ಯಾದವ್, ಹರ್ಷದೀಪ್ ಸಿಂಗ್ ಯಾದವ್, ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.
ಟಿ20 ಕ್ರಿಕೆಟ್‌ನಲ್ಲಿ ಇದುವರೆಗಿನ ಅಂಕಿಅಂಶಗಳು
ಶ್ರೇಯಸ್ ಅಯ್ಯರ್ ಇದುವರೆಗೆ ಟೀಂ ಇಂಡಿಯಾ ಪರ ಒಟ್ಟು 47 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ 32.19 ಸರಾಸರಿಯಲ್ಲಿ 1030 ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಇದುವರೆಗೆ 7 ಅರ್ಧಶತಕಗಳ ಇನ್ನಿಂಗ್ಸ್‌ಗಳನ್ನು ಆಡಿದ್ದು, ಟಿ20ಯಲ್ಲಿ 136.06 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ಪರ 5 ಟೆಸ್ಟ್ ಪಂದ್ಯಗಳಲ್ಲಿ 422 ರನ್ ಮತ್ತು 33 ಏಕದಿನ ಪಂದ್ಯಗಳಲ್ಲಿ 1299 ರನ್ ಗಳಿಸಿದ್ದಾರೆ.
ಭಾರತ vs ನ್ಯೂಜಿಲೆಂಡ್ ಟಿ20 ಸರಣಿಯ ಪಂದ್ಯಗಳು (ಭಾರತೀಯ ಕಾಲಮಾನ):
1ನೇ ಟಿ20 ಪಂದ್ಯ, ನವೆಂಬರ್ 18, ಮಧ್ಯಾಹ್ನ 12.00, ವೆಲ್ಲಿಂಗ್ಟನ್
2 ನೇ ಟಿ20 ಪಂದ್ಯ, 20 ನವೆಂಬರ್, 12.00, ಮೌಂಟ್ ಮೌಂಗನುಯಿ
3ನೇ ಟಿ20 ಪಂದ್ಯ, 22 ನವೆಂಬರ್, 12.00, ನೇಪಿಯರ್
ಇದನ್ನೂ ಓದಿ : ಕೊನೆಯಾಯ್ತೇ KL Rahul ಕ್ರಿಕೆಟ್ ಜೀವನ? ಆಯ್ಕೆದಾರರಿಗೆ BCCI ಈ ಪ್ರಶ್ನೆ ಕೇಳಿದ್ದೇಕೆ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.