IND vs NZ 2nd Test: ಕೇವಲ 62 ರನ್ ಗಳಿಗೆ ನ್ಯೂಜಿಲ್ಯಾಂಡ್ ತಂಡ ಉಡೀಸ್
India vs New Zealand Mumbai Test: ಭಾರತದ ಪರ ಆರ್. ಅಶ್ವಿನ್ ನಾಲ್ಕು ವಿಕೆಟ್ ಪಡೆದರೆ, ವೇಗಿ ಮೊಹಮ್ಮದ್ ಸಿರಾಜ್ ಮೂರು ವಿಕೆಟ್ ಕಬಳಿಸಿದ್ದಾರೆ.
India vs New Zealand Mumbai Test - ಮುಂಬೈನ ವಾಂಖೆಡೆಯಲ್ಲಿ (Wankhede Stadium Mumbai) ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 62 ರನ್‌ಗಳಿಗೆ ಆಲೌಟ್ ಆಗಿದೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಕಿವೀಸ್ ತಂಡದ ಅತ್ಯಂತ ಕನಿಷ್ಠ ಮೊತ್ತವಾಗಿದೆ. ಭಾರತದ ಪರ ಆರ್ ಅಶ್ವಿನ್ (Ravichandran Ashwin)ನಾಲ್ಕು ವಿಕೆಟ್ ಪಡೆದರೆ, ವೇಗಿ ಮೊಹಮ್ಮದ್ ಶಿರಾಜ್ (Mohammed Siraj) ಮೂರು ವಿಕೆಟ್ ಕಬಳಿಸಿದ್ದಾರೆ.
ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 325 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಪ್ರವಾಸಿ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 62 ರನ್ ಗಳಿಸಲಷ್ಟೇ ಶಕ್ತವಾಗಿದೆ. ಈ ಮೂಲಕ ಟೀಂ ಇಂಡಿಯಾ 263 ರನ್‌ಗಳ ಮುನ್ನಡೆ ಸಾಧಿಸಿದೆ. ಆದರೆ, ನಾಯಕ ವಿರಾಟ್ ಕೊಹ್ಲಿ ಪ್ರವಾಸಿ ತಂಡಕ್ಕೆ ಫಾಲೋ ಆನ್ ನೀಡದ ಕಾರಣ ಭಾರತ ತನ್ನ ಎರಡನೇ ಇನ್ನಿಂಗ್ಸ್ ಆಡುತ್ತಿದೆ.
ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ (Cricket News In Kannada) ಅದ್ಭುತ ಪ್ರದರ್ಶನ ನೀಡಿದ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರರಾದ ಟಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ಅವರನ್ನು ಮೊಹಮ್ಮದ್ ಸಿರಾಜ್ ಪೆವಿಲಿಯನ್‌ಗೆ ಕಳುಹಿಸಿದ್ದಾರೆ. ಯಂಗ್ 04 ಮತ್ತು ಲ್ಯಾಥಮ್ 10 ರನ್ ಗಳಿಸಿ ಔಟಾಗಿದ್ದಾರೆ. ಇದಾದ ಬಳಿಕ ಸಿರಾಜ್ ರಾಸ್ ಟೇಲರ್ ಅವರನ್ನು ಔಟ್ ಮಾಡುವ ಮೂಲಕ ಪ್ರವಾಸಿ ತಂಡಕ್ಕೆ ಮೂರನೇ ಆಘಾತ ನೀಡಿದ್ದಾರೆ. ಅವರು ಕೇವಲ ಒಂದು ರನ್ ಮಾತ್ರ ಗಳಿಸಿದ್ದಾರೆ.
ಇದನ್ನೂ ಓದಿ-ಈ ಸುನಿಲ್ ಗವಾಸ್ಕರ್ ಸಲಹೆಯು ಶತಕ ಗಳಿಸಲು ಸಹಾಯ ಮಾಡಿತು- ಮಯಾಂಕ್ ಅಗರ್ವಾಲ್
ನ್ಯೂಜಿಲೆಂಡ್ ತಂಡಕ್ಕೆ ಈ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ನಿಯಮಿತ ಮಧ್ಯಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಹೋಯಿತು. ಭಾರತದ ಬೌಲರ್‌ಗಳ ಮುಂದೆ ನ್ಯೂಜಿಲೆಂಡ್‌ನ ಇಡೀ ತಂಡ ಶರಣಾಗಿ 62 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ-India vs New Zealand, 2nd Test: ಕನ್ನಡಿಗ ಮಾಯಾಂಕ್ ಆಗ್ರವಾಲ್ ಭರ್ಜರಿ ಶತಕ, ಸುಸ್ಥಿತಿಯಲ್ಲಿ ಭಾರತ ತಂಡ
ಭಾರತದ ಮಾರಕ ಬೌಲಿಂಗ್ ಮುಂದೆ ಕಿವೀಸ್ ತಂಡದ ಒಂಬತ್ತು ಬ್ಯಾಟ್ಸ್‌ಮನ್‌ಗಳು ಎರಡಂಕಿ ಮುಟ್ಟಲು ಪರದಾಡಿದ್ದಾರೆ. ಟಾಮ್ ಲ್ಯಾಥಮ್ 10 ಮತ್ತು ಕೈಲ್ ಜೇಮಿಸನ್ 17 ಮಾತ್ರ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಿದ್ದಾರೆ. ಭಾರತದ ಪರ ಆರ್ ಅಶ್ವಿನ್ ಎಂಟು ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದಾರೆ. ಇನ್ನೊಂದೆಡೆ ಸಿರಾಜ್ 19 ರನ್ ನೀಡಿ ಮೂವರು ಆಟಗಾರರನ್ನು ಪೆವಿಲಿಯನ್ ಗೆ ಕಳುಹಿಸಿದ್ದಾರೆ. ಇವರನ್ನು ಹೊರತುಪಡಿಸಿ ಅಕ್ಷರ್ ಪಟೇಲ್ ಎರಡು ಮತ್ತು ಜಯಂತ್ ಯಾದವ್ ಒಂದುವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ-ಟೀಂ ಇಂಡಿಯಾಗೆ ಬಿಗ್ ನ್ಯೂಸ್ : ಟೆಸ್ಟ್ ನಿಂದ ಹೊರಗುಳಿದ ಕಿವೀಸ್ ತಂಡದ ಬಲಿಷ್ಠ ಆಟಗಾರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.