IND vs NZ ODI series : ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಇಂದೋರ್‌ನಲ್ಲಿ ನಡೆದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯವನ್ನು 90 ರನ್‌ಗಳಿಂದ ಗೆದ್ದು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಕ್ಲೀನ್ ಸ್ವೀಪ್ ಮಾಡಿದೆ. ಆದರೆ ಈ ಆಟಗಾರನಿಗೆ ಅವಕಾಶ ನೀಡುವ ಮೂಲಕ ನಾಯಕ ರೋಹಿತ್ ಶರ್ಮಾ ತಪ್ಪು ಮಾಡಿದರು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಜೊತೆಗೆ ಟೀಂ ಇಂಡಿಯಾದ ಈ ಆಟಗಾರನ ODI ವೃತ್ತಿಜೀವನವು ಕೊನೆಗೊಳ್ಳುವಂತಿದೆ.


COMMERCIAL BREAK
SCROLL TO CONTINUE READING

ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈ ಆಟಗಾರನ ಪ್ರದರ್ಶನ ಅತ್ಯಂತ ಕಳಪೆಯಾಗಿದೆ. ಬ್ಯಾಟಿಂಗ್ ಇರಲಿ, ಬೌಲಿಂಗ್ ಇರಲಿ ಈ ಆಟಗಾರ ತನ್ನ ಫ್ಲಾಪ್ ಪರ್ಫಾರ್ಮೆನ್ಸ್ ನಿಂದ ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ಸಿಲುಕಿಸುವ ಕೆಲಸವನ್ನು ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಫ್‌ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್‌ಗೆ ಅವಕಾಶ ನೀಡುವ ಮೂಲಕ ಬಿಸಿಸಿಐ ಮತ್ತು ನಾಯಕ ರೋಹಿತ್ ಶರ್ಮಾ ಅವಕಾಶ ನೀಡಿದ್ದರು. ವಾಷಿಂಗ್ಟನ್ ಸುಂದರ್ ನ್ಯೂಜಿಲೆಂಡ್ ವಿರುದ್ಧದ ಈ ಸರಣಿಯಲ್ಲಿ 3 ODIಗಳನ್ನು ಆಡಿದರು, ಅದರಲ್ಲಿ ಅವರು ಬೌಲಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದರು ಮತ್ತು ಕೇವಲ 2 ವಿಕೆಟ್‌ಗಳನ್ನು ಪಡೆದರು,. ಬ್ಯಾಟಿಂಗ್‌ನಲ್ಲೂ ವಾಷಿಂಗ್ಟನ್ ಸುಂದರ್ ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಮತ್ತು 3 ಏಕದಿನ ಪಂದ್ಯಗಳಲ್ಲಿ ಕೇವಲ 21 ರನ್ ಗಳಿಸಿದರು.


ಇದನ್ನೂ ಓದಿ : Video: ರೋಹಿತ್ ಶತಕ ಸಿಡಿಸುವುದನ್ನು ತಡೆಯಲು ಕಿವೀಸ್ ಬೌಲರ್ ಚೀಪ್ ಟ್ರಿಕ್.!


ಟೀಂ ಇಂಡಿಯಾ ಪರ ಕೊನೆಯ ಏಕದಿನ ಪಂದ್ಯ!


ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಈ ಕಳಪೆ ಪ್ರದರ್ಶನದ ನಂತರ, ಇದೀಗ ವಾಷಿಂಗ್ಟನ್ ಸುಂದರ್ ಅವರ ODI ವೃತ್ತಿಜೀವನ ಬಹುತೇಕ ಮುಗಿದಂತಾಗಿದೆ. ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಈಗ ಸಂಪೂರ್ಣ ಫಿಟ್ ಆಗಿದ್ದು, ಮಾರ್ಚ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾಕ್ಕೆ ವಾಪಸಾಗುವ ವೇಳೆ ವಾಷಿಂಗ್ಟನ್ ಸುಂದರ್ ಏಕದಿನ ತಂಡದಿಂದ ಹೊರಗುಳಿಯುವ ಸಾಧ್ಯತೆಗಳು ದಟ್ಟವಾಗಿವೆ.  


ಟೀಂ ಇಂಡಿಯಾಗೆ ಎದುರಾಗಿದೆ ದೊಡ್ಡ ಕಂಟಕ 


ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ 7 ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯದೆ 50 ರನ್ ನೀಡಿದರು. ಆಗ ಬ್ಯಾಟಿಂಗ್ ನಲ್ಲೂ ಗಳಿಸಿದ್ದು 12 ರನ್ ಮಾತ್ರ. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಕೇವಲ 2 ವಿಕೆಟ್ ಪಡೆದರು. ಮಂಗಳವಾರ ಇಂದೋರ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮತ್ತೊಮ್ಮೆ ವಾಷಿಂಗ್ಟನ್ ಸುಂದರ್ 6 ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯದೆ 49 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ ಅವರ ದಾಖಲೆಯನ್ನು ಗಮನಿಸಿದರೆ, ಅವರು ಕಳೆದ 12 ಏಕದಿನ ಇನ್ನಿಂಗ್ಸ್‌ಗಳಲ್ಲಿ ಕೇವಲ 12 ವಿಕೆಟ್ ಗಳಿಸಿದ್ದಾರೆ.


ಇದನ್ನೂ ಓದಿ : IND vs NZ : ನ್ಯೂಜಿಲೆಂಡ್ ಸರಣಿ ಕ್ಲೀನ್​ ಸ್ವೀಪ್.. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತ ನಂ. 1


ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾದಿಂದ ಕೈಬಿಡುತ್ತಾರಾ?


ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಾಷಿಂಗ್ಟನ್ ಸುಂದರ್ ಅವರ ಕಳಪೆ ಪ್ರದರ್ಶನದ ನಂತರ, ನಾಯಕ ರೋಹಿತ್ ಶರ್ಮಾ ಈಗ ಅವರನ್ನು ಭಾರತ ODI ತಂಡದಿಂದ ಕೈಬಿಡಲಿದ್ದಾರೆ. ಭಾರತ ಈಗ ಮಾರ್ಚ್ 17 ರಿಂದ ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಮುಂದಿನ ಏಕದಿನ ಸರಣಿಯನ್ನು ಆಡಬೇಕಾಗಿದೆ. ಇದು ಮೂರು ಪಂದ್ಯಗಳ ಏಕದಿನ ಸರಣಿಯಾಗಿದೆ. ಈ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಲ್ಲಿ ಆಡಲಿದ್ದಾರೆ. ರವೀಂದ್ರ ಜಡೇಜಾ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಮಾಸ್ಟರ್. ಅದೇ ಸಮಯದಲ್ಲಿ ವಾಷಿಂಗ್ಟನ್ ಸುಂದರ್ ಟೀಮ್ ಇಂಡಿಯಾದಿಂದ ಹೊರಗುಳಿಯಬೇಕಾಗುತ್ತದೆ. ರವೀಂದ್ರ ಜಡೇಜಾ ಅವರ ಅಪಾಯಕಾರಿ ಎಡಗೈ ಸ್ಪಿನ್ ಬೌಲಿಂಗ್ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಮರಣ ಶಾಸನವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.